ಬ್ರಾಝಿಲ್ ನಲ್ಲಿ ವಿಮಾನ ಪತನ ೬೨ ಜನರ ಸಾವು !

ಬ್ರಾಝಿಲಿಯ (ಬ್ರಾಝಿಲ್) – ಇಲ್ಲಿಯ ನಿಹೆಂಡೋ ಪ್ರಾಂತ್ಯದಲ್ಲಿ ದೊಡ್ಡ ವಿಮಾನ ಪತನವಾಗಿ ಅದರಲ್ಲಿದ್ದ ಎಲ್ಲಾ ೬೨ ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೯ ಮಧ್ಯಾಹ್ನ ೧.೪೫ ಗಂಟೆಗೆ ಈ ಅಪಘಾತ ನಡೆದಿದೆ. ಇದರಲ್ಲಿ ೫೮ ಪ್ರಯಾಣಿಕರ ಜೊತೆಗೆ ಪೈಲೆಟ್ ಮತ್ತು ೩ ಸಿಬ್ಬಂದಿ ಹೀಗೆ ೬೨ ಜನರು ಪ್ರಯಾಣಿಸುತ್ತಿದ್ದರು. ಸ್ಥಳೀಯ ವಾರ್ತವಾಹಿನಿ ಗ್ಲೋಬೊ ನ್ಯೂಸ್ ಯಿಂದ ಈ ಘಟನೆಯ ಮಾಹಿತಿ ದೊರೆತಿದೆ.

೧. ‘ವ್ಹೋಪಾಸ್ ಲಿನ್ಹಾಸ್ ಏರಿಯಾಜ್’ ಹೆಸರಿನ ಕಂಪನಿಯ ‘ಎ.ಟಿ.ಆರ್.- ೭೨’ ಈ ವಿಮಾನ ಪರಾನಾ ರಾಜ್ಯದಲ್ಲಿನ ಕಾಸ್ಕೆವೆಲ್ ನಗರದಿಂದ ಸಾವೋ ಪಾವುಲೋ ಇಲ್ಲಿಯ ಗ್ವಾರುಲಹೋಸಲಾ ಹೋಗುತ್ತಿತ್ತು.

೨. ವಿಮಾನ ಕಂಪನಿಯು ಈ ಅಪಘಾತದ ಕುರಿತು ಮನವಿ ಪ್ರಸಾರ ಗೊಳಿಸಿದ್ದು ಅದರಲ್ಲಿ ಈ ವಿಮಾನ ಅಪಘಾತ ಯಾವುದರಿಂದ ಆಗಿದೆ, ಇದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ ಎಂದು ಹೇಳಿದೆ.

೩. ಪ್ರತ್ಯಕ್ಷದರ್ಶಿಗಳು, ಯಾವ ಸ್ಥಳದಲ್ಲಿ ವಿಮಾನ ಅಪ್ಪಳಿಸಿದೆ, ಅಲ್ಲಿಂದ ಬೆಂಕಿಯ ದೊಡ್ಡ ಅಲೆ ಕಂಡಿದೆ. ವಿಮಾನ ಅಪ್ಪಳಿಸಿದ ನಂತರ ಅಲ್ಲಿಂದ ಒಂದು ದೊಡ್ಡ ಸ್ಫೋಟದ ಧ್ವನಿ ಕೂಡ ಕೇಳಿ ಬಂದಿದೆ ಎಂದು ಹೇಳಿದರು.

೪. ದಕ್ಷಿಣ ಬ್ರಾಝಿಲ್ ನಲ್ಲಿನ ಒಂದು ಕಾರ್ಯಕ್ರಮದಲ್ಲಿ ಬ್ರಾಝಿಲಿನ ಅಧ್ಯಕ್ಷ ಲೂಯಿಸ್ ಇನಾಸಿಯೋ ಲುಲಾ ದಾ ಸಿಲ್ವಾ ಇವರು ಈ ಅಪಘಾತದ ಸಮಾಚಾರ ತಿಳಿಸುತ್ತಾ ಸಂತಾಪ ಸೂಚಿಸಿದರು.