United Nations : ವಿಶ್ವಸಂಸ್ಥೆಯು ಬಾಂಗ್ಲಾದೇಶದ ಹಿಂಸಾಚಾರವನ್ನು ನಿಷೇಧಿಸುವಾಗ ‘ಹಿಂದೂ’ ಪದ ಬಳಸಲಿಲ್ಲ !

‘ನಾವು ಜನಾಂಗೀಯ ಹಿಂಸೆಯ ವಿರುದ್ಧವಂತೆ !’ – ವಿಶ್ವಸಂಸ್ಥೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಘಟನೆಗಳನ್ನು ಅನೇಕ ಜನರು ಖಂಡಿಸುತ್ತಿರುವಾಗ, ವಿಶ್ವಸಂಸ್ಥೆಯೂ ಟೀಕಿಸಿದೆ. ಆದರೆ ಅದು ‘ಹಿಂದೂ’ ಪದದ ಉಲ್ಲೇಖವನ್ನು ಕೈಬಿಟ್ಟಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ವಕ್ತಾರ ಫರ್ಹಾನ್ ಹಕ್ ಇವರು ಮಾತನಾಡಿ, ನಾವು ಜನಾಂಗೀಯ ಆಧಾರದ ಮೇಲೆ ನಡೆಯುವ ದಾಳಿ ಮತ್ತು ಹಿಂಸಾಚಾರವನ್ನು ಪ್ರೋತ್ಸಾಹಿಸುವುದನ್ನು ವಿರೋಧಿಸುತ್ತೇವೆ’, ಎಂದು ಹೇಳಿದ್ದಾರೆ.

ಫರ್ಹಾನ್ ಹಕ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಇತ್ತೀಚಿನ ಕೆಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರ ಮುಕ್ತಾಯಗೊಳ್ಳುವುದೆಂದು ನಾವು ಮತ್ತೊಮ್ಮೆ ದೃಡಪಡಿಸಿಕೊಳ್ಳಲು ಇಚ್ಛಿಸುತ್ತೇವೆ. ನಾವು ಖಂಡಿತವಾಗಿ ಬಾಂಗ್ಲಾದೇಶದ ಸರಕಾರ ಮತ್ತು ಜನರಿಗೆ ಅಗತ್ಯವಿರುವ ಮಾರ್ಗದಿಂದ ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.