Manish Sisodia Bail : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾಗೆ ಜಾಮೀನು

  • ಸರ್ವೋಚ್ಚ ನ್ಯಾಯಾಲಯದ ನಿರ್ಣಯ

  • ಮದ್ಯ ನೀತಿ ಹಗರಣದಲ್ಲಿ ನಡೆದ ಭ್ರಷ್ಟಾಚಾರದ ಆರೋಪದಡಿಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಜೈಲುವಾಸ

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿ

ನವದೆಹಲಿ – ದೆಹಲಿಯ ಮದ್ಯ ಹಗರಣಕ್ಕೆ ಸಂಬಂಧಿತ ಹಣದ ಅವ್ಯವಹಾರದ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿಯ ಇವರಿಗೆ ಸರ್ವೋಚ್ಚ ನ್ಯಾಯಾಲಯವು ಜಾಮೀನು ನೀಡಿದೆ. ಸಿಸೋದಿಯ ಇವರನ್ನು ದೀರ್ಘಕಾಲ ಜೈಲಿನಲ್ಲಿ ಇರಿಸುವುದು ಯೋಗ್ಯವಲ್ಲ. ಸ್ಟೇಷನ್ ಮತ್ತು ಉಚ್ಚ ನ್ಯಾಯಾಲಯ ಇವರು ಅರ್ಥ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಹಾಗೂ ಜಾಮೀನು ಇದು ನಿಯಮವಾಗಿದೆ ಮತ್ತು ಜೈಲು ಇದು ಅಪವಾದವಾಗಿದೆ, ಎಂದು ಕೂಡ ನ್ಯಾಯಾಲಯವು ಹೇಳಿದೆ. ಈ ಸಮಯದಲ್ಲಿ ನ್ಯಾಯಾಲಯವು ಅವರಿಗೆ ೧೦ ಲಕ್ಷ ರೂಪಾಯ ಬಾಂಡ್‌ ಜಾಮೀನು ಮಂಜೂರ ಮಾಡಿದೆ. ಇದರ ಸಂದರ್ಭದಲ್ಲಿ ಆಗಸ್ಟ್ ೯ ರಂದು ವಿಚಾರಣೆ ನಡೆಯಿತು.

ಆ ಸಮಯದಲ್ಲಿ ಈಡಿಯ ನ್ಯಾಯವಾದಿ ಸಿಸೋದಿಯ ಇವರಿಗೆ ಜಾಮೀನಿಗಾಗಿ ಸೇಶನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹೇಳಬೇಕೆಂದು ಆಗ್ರಹಿಸಿದ್ದರು. ಈ ಬೇಡಿಕೆ ಕೂಡ ನ್ಯಾಯಾಲಯವು ತಳ್ಳಿ ಹಾಕಿದೆ. ‘ಸಿಸೋದಿಯ ಇವರ ಜಾಮೀನಿಗಾಗಿ ಸೆಷನ್ ನ್ಯಾಯಾಲಯಕ್ಕೆ ಕಳುಹಿಸಿ, ಇದು ನ್ಯಾಯದ ಅವಮಾನದಂತೆ ಆಗುವುದು, ಎಂದು ನ್ಯಾಯಾಲಯವು ಹೇಳಿದೆ. ಇಂತಹದರಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವರು ಕೂಡ ಮೂರು ತಿಂಗಳಿಂದ ಜೈಲುವಾಸದಲ್ಲಿದ್ದಾರೆ. ಆಗಸ್ಟ್ ೨೦ ವರೆಗೆ ಅವರಿಗೆ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ.

ಏನಿದು ಮದ್ಯ ನೀತಿ ಹಗರಣ ?

ದೇಹಲಿಯ ಆಮ ಆದ್ಮಿ ಪಕ್ಷದ ಸರಕಾರವು ಹೊಸ ಉತ್ಪಾದನೆ ಶುಲ್ಕ ನೀತಿ ಜಾರಿಗೊಳಿಸಿದ್ದರು ಈ ನೀತಿಯಿಂದಾಗಿ ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಯುವುದು ಮತ್ತು ಮದ್ಯ ಮಾಫಿಯಾದ ಮೇಲೆ ಅಂಕುಶ ಇಡಲಾಗುವುದು, ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಇವರು ವಿಶ್ವಾಸ ವ್ಯಕ್ತಪಡಿಸಿದ್ದರು. ಇದರಿಂದ ಎಲ್ಲಾ ಸರಕಾರಿ ಮತ್ತು ಖಾಸಗಿ ಸಾರಾಯಿ ಅಂಗಡಿಗಳು ಮುಚ್ಚಿ ಹೊಸ ಟೆಂಡರ್ ನೀಡಲಾಗಿದ್ದವು. ಈ ಹಿಂದೆ ರಾಜ್ಯದಲ್ಲಿ ೭೨೦ ಸಾರಾಯಿ ಅಂಗಡಿಗಳು ಇದ್ದವು. ಇದರಲ್ಲಿ ಕೇವಲ ೨೬೦ ಖಾಸಗಿ ಅಂಗಡಿಗಳು ಇದ್ದವು. ಹೊಸ ನೀತಿಯ ನಂತರ ಎಲ್ಲಾ ಅಂಗಡಿಗಳು ಖಾಸಗಿ ಉದ್ಯೋಗ ಪತಿಗಳ ವಶಕ್ಕೆ ಹೋದವು. ಆದ್ದರಿಂದ ಈ ನೀತಿ ಜಾರಿಗೊಳಿಸುವಾಗ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದಿತು. ಅದರ ನಂತರ ನಡೆದಿರುವ ತನಿಖೆಯಲ್ಲಿ ಉಪಮುಖ್ಯಮಂತ್ರಿ ಸಿಸೋದಿಯ, ಇತರ ಕೆಲವು ನಾಯಕರು ಹಾಗೂ ಮುಖ್ಯಮಂತ್ರಿ ಕೇಜ್ರಿವಾಲ್ ಇವರು ಈ ಹಗರಣದಲ್ಲಿ ತೊಡಗಿರುವುದು ತಿಳಿದ ನಂತರ ಅವರನ್ನು ಬಂಧಿಸಲಾಯಿತು.