ರಾಹುಲ ಗಾಂಧಿಗೆ ಗಾಜಾದ ಬಗ್ಗೆ ಕನಿಕರ; ಆದರೆ ಬಾಂಗ್ಲಾದೇಶದಲ್ಲಿನ ಹಿಂದೂಗಳ ಬಗ್ಗೆ ಕನಿಕರಲ್ಲ’ – ಕೇಂದ್ರ ಸಚಿವ ಅನುರಾಗ್ ಠಾಕೂರ್

ಲೋಕಸಭೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಪ್ರಶ್ನೆ

( ಎಡದಿಂದ ) ರಾಹುಲ್ ಗಾಂಧಿ, ಕೇಂದ್ರ ಸಚಿವ ಅನುರಾಗ್ ಠಾಕೂರ್

ನವದೆಹಲಿ – ಲೋಕಸಭೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, “ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರನ್ನು ಅಭಿನಂದಿಸಿದರು ಮತ್ತು ಹಿಂದೂಗಳ ಸುರಕ್ಷತೆಯ ಬಗ್ಗೆಯೂ ಮಾತನಾಡಿದರು. ವಿರೋಧ ಪಕ್ಷದ ನಾಯಕರು (ರಾಹುಲ್ ಗಾಂಧಿ) ಮುಖ್ಯಸ್ಥರನ್ನು ಅಭಿನಂದಿಸಿ ಪೋಸ್ಟ್ ಮಾಡಿದ್ದಾರೆ, ಆದರೆ ಅದರಲ್ಲಿ ಹಿಂದೂಗಳ ಭದ್ರತೆಯ ಬಗ್ಗೆ ಯಾವುದೇ ಚರ್ಚೆ ಅಥವಾ ಉಲ್ಲೇಖವಿಲ್ಲ. ‘ಹಿಂದೂಗಳ ಹೆಸರನ್ನು ತೆಗೆದುಕೊಳ್ಳಬಾರದು’, ಹೀಗೆ ಅವರ ಮೇಲೆ ಯಾರದಾದರೂ ಒತ್ತಡ ಮಾಡಿದ್ದಾರೆಯೇ? ಅವರು ಗಾಜಾದ ಬಗ್ಗೆ ಏರು ಧ್ವನಿಯಲ್ಲಿ ಮಾತನಾಡುತ್ತಾರೆ; ಆದರೆ ಹಿಂದೂಗಳ ಬಗ್ಗೆ ಏನನ್ನೂ ಮಾತನಾಡುವುದಿಲ್ಲ’, ಇಂತಹ ಶಬ್ದಗಳಲ್ಲಿ ರಾಹುಲ್ ಗಾಂಧಿಯವರನ್ನು ಟೀಕಿಸಿದರು. ಇದಾದ ನಂತರ ಲೋಕಸಭೆಯಲ್ಲಿ ಗದ್ದಲ ಆರಂಭವಾಯಿತು.

ಸಂಪಾದಕೀಯ ನಿಲುವು

ರಾಹುಲ್ ಗಾಂಧಿ ಅಥವಾ ಇಡೀ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ಸಿಗರು ಎಂದಿಗೂ ಹಿಂದೂಗಳ ರಕ್ಷಣೆಗಾಗಿ ಮಾತನಾಡುವುದಿಲ್ಲ; ಯಾಕೆಂದರೆ ಅವರು ಮುಸಲ್ಮಾನರ ಓಲೈಕೆಗಾಗಿ ತಮ್ಮದೇ ಆದ ಸೈದ್ಧಾಂತಿಕ ಸುಂತಾ ಮಾಡಿಕೊಂಡಿದ್ದಾರೆ !