|
ಲಕ್ಷ್ಮಣಪುರಿ (ಉತ್ತರಪ್ರದೇಶ) – ‘ಉತ್ತರಪ್ರದೇಶದ ಮುಸ್ಲಿಂ ಪರ್ಸನಲ್ ಲಾ ಬೋರ್ಡಿ’ನ ಅಧ್ಯಕ್ಷ ಅಝಹರಿ ಇವರು ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ. ‘ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಅವರ ದೇವಸ್ಥಾನಗಳನ್ನು ಧ್ವಂಸ ಮಾಡಲಾಗುತ್ತಿದೆ, ಇದು ಸಂಪೂರ್ಣವಾಗಿ ಮಾನವೀಯತೆಯ ವಿರುದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಈ ವಿಷಯದ ಕುರಿತು ಕ್ರಮ ಕೈಗೊಳ್ಳಬೇಕೆಂದು ಅಝಹರಿ ಇವರು ಕರೆ ನೀಡಿದ್ದಾರೆ. ನೂರ್ ಅಹಮದ್ ಅಝಹರಿ ಇವರು ವಿಡಿಯೋ ಸಂದೇಶ ಪ್ರಸಾರ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೂರ್ ಅಹಮದ್ ಇವರು, ಇದರಲ್ಲಿ ಚೀನಾ ಮತ್ತು ಪಾಕಿಸ್ತಾನ್ ಇವುಗಳ ಕೈವಾಡವಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಮಂತ್ರಿ ಬಾಂಗ್ಲಾದೇಶದ ವಿಷಯದಲ್ಲಿ ಯೋಗ್ಯವಾದ ನಿರ್ಣಯ ತೆಗೆದುಕೊಳ್ಳಬೇಕು. ಇಡೀ ದೇಶದ ಜನತೆ ನಿಮ್ಮೊಂದಿಗೆ ಇದ್ದಾರೆ. ಇಸ್ಲಾಂ ಯಾವುದೇ ಪ್ರಾರ್ಥನಾ ಸ್ಥಳ ಧ್ವಂಸ ಮಾಡುವ ಅಥವಾ ಬೆಂಕಿ ಹಚ್ಚಲು ಅನುಮತಿಸುವುದಿಲ್ಲ. ಇದೆಲ್ಲವೂ ಮಾನವೀಯತೆಯ ವಿರುದ್ಧದ ಕಾರ್ಯವಾಗಿದೆ. ಈ ದೌರ್ಜನ್ಯಕ್ಕೆ ನಾವೆಲ್ಲರೂ ಸೇರಿ ವಿರೋಧಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುದೇಶದಲ್ಲಿನ ಕೇವಲ ಓರ್ವ ಮುಸಲ್ಮಾನ ನಾಯಕನಿಗೆ ಹೀಗೆ ಮಾತನಾಡಬೇಕೆಂದು ಅನಿಸುತ್ತದೆ, ಇದರಿಂದ ದೇಶದಲ್ಲಿ ಯಾವ ಮನಸ್ಥಿತಿಯ ಅಲ್ಪಸಂಖ್ಯಾತರು ಇರುತ್ತಾರೆ, ಇದನ್ನು ತಿಳಿಯಿರಿ ! |