ನೆದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಅವರಿಂದ ಮನವಿ
ಆಂಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರವು ಭಯಾನಕವಾಗಿದೆ. ಅವರನ್ನು ಕೊಲ್ಲಲಾಗುತ್ತಿದೆ ಮತ್ತು ಇಸ್ಲಾಮಿಕ್ ಗುಂಪುಗಳು ಅವರ ಮನೆಗಳನ್ನು ಸುಡುತ್ತಿವೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನೆದರ್ಲೆಂಡ್ಸ್‌ನ ಪಾರ್ಟಿ ಫಾರ್ ಫ್ರೀಡಂ ಪಕ್ಷದ ಮುಖ್ಯಸ್ಥ ಸಂಸದ ಗೀರ್ಟ್ ವೈಲ್ಡರ್ಸ್ ಕರೆ ನೀಡಿದ್ದಾರೆ. (ಯುರೋಪಿಯನ್ ದೇಶದ ಸಂಸದರೊಬ್ಬರು ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಎಷ್ಟು ಹಿಂದೂ ಸಂಸದರು ಬಾಂಗ್ಲಾದೇಶ ಬಿಡಿ ಭಾರತದಲ್ಲಿನ ಸಂತ್ರಸ್ತ ಹಿಂದೂಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ? – ಸಂಪಾದಕರು)