ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಕೇವಲ 100 ಗ್ರಾಂ ತೂಕ ಹೆಚ್ಚಿದಕ್ಕೆ ಅನರ್ಹ; ವಿನೇಶ್ ಫೋಗಟ್ ಇವರಿಂದ ಕುಸ್ತಿಗೆ ವಿದಾಯ ಘೊಷಣೆ !

  • ಪ್ಯಾರಿಸ್ ಒಲಿಂಪಿಕ್ಸ್ 2024

  • ಫೈನಲ್ ಪಂದ್ಯ ಆಡಲು ಸಾಧ್ಯವಾಗುವುದಿಲ್ಲ, ಕನಿಷ್ಠ ಬೆಳ್ಳಿ ಪದಕ ಪಡೆಯುವ ಭಾರತದ ನಿರೀಕ್ಷೆಗೆ ಎಳ್ಳು ನೀರು !

ಪ್ಯಾರಿಸ್ (ಫ್ರಾನ್ಸ್) – 2024 ರ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ಕೇವಲ 100 ಗ್ರಾಂ ತೂಕ ಹೆಚ್ಚಿದ್ದರಿಂದ ಅವರು ಫೈನಲ್‌ಗೆ ಮೊದಲು ಅನರ್ಹಗೊಂಡರು. ಆಗಸ್ಟ್ 6 ರಂದು, ಅವರು ಸೆಮಿಫೈನಲ್‌ನಲ್ಲಿ ಕ್ಯೂಬಾದ ಲೋಪೆಜ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸಿದರು. ಈ ಮೂಲಕ ಫೋಗಟ್ ಒಲಿಂಪಿಕ್ಸ್ ಇತಿಹಾಸದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿನೇಶ್ ಫೋಗಟ್ ಅವರನ್ನು ಮಹಿಳೆಯರ 50 ಕೆಜಿ ವಿಭಾಗದಿಂದ ಅನರ್ಹಗೊಳಿಸಿರುವುದು ಭಾರತ ತಂಡಕ್ಕೆ ಬೇಸರ ತಂದಿದೆ ಎಂದು ಭಾರತೀಯ ಒಲಿಂಪಿಕ್ ಸಮಿತಿ ಈ ಬಗ್ಗೆ ತಿಳಿಸಿದೆ. ಆಕೆಯ ತೂಕವನ್ನು ಕಡಿಮೆ ಮಾಡಲು ನಾವು ರಾತ್ರಿಯಿಡೀ ಪ್ರಯತ್ನಿಸಿದೆವು. ಅವಳು ತುಂಬಾ ಸೈಕಲ್ ಓಡಿಸುತ್ತಿದ್ದಳು, ಆದರೂ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು, ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್ ! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದ್ದೀರಿ. ಇಂದಿನ ವೈಫಲ್ಯವು ನೋವುಂಟುಮಾಡುತ್ತದೆ. ನಾನು ಅನುಭವಿಸುವ ನಿರಾಶೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಎಲ್ಲರಲ್ಲೂ ಕ್ಷಮೇ ಕೇಳಿ, ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್

ಭಾರತದ ಮನವಿಗಳಿಂದ ಒಲಿಂಪಿಕ್ಸ್ ಸಮಿತಿ ನಿರ್ಧಾರ ಬದಲಾಗಲಿಲ್ಲ. ಹಾಗಾಗಿ ವಿನೇಶ್ ಫೋಗಟ್ ಇವರು ವಿದಾಯ ಘೋಷಿಸಿದ್ದಾರೆ. ಹಾಗೂ ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಟ್ವೀಟ್ ಮೂಲಕ ಮಾಹಿತಿ ಹಂಚಿದ ವಿನೇಶ್ ಫೋಗಟ್ ಅವರು, ನನ್ನ ವಿರುದ್ಧದ ಕುಸ್ತಿಯಲ್ಲಿ ಅಮ್ಮ ಗೆದ್ದಿದ್ದಾಳೆ. ಕ್ಷಮಿಸಿ ಅಮ್ಮಾ ನಾನು ಸೋತೆ. ನಿನ್ನ ಕನಸು, ನನ್ನ ಧೈರ್ಯ ಎಲ್ಲವೂ ನುಚ್ಚು ನೂರಾಗಿದೆ. ನನ್ನಲ್ಲಿನ್ನು ಹೋರಾಡುವ ಶಕ್ತಿ ಉಳಿದಿಲ್ಲ.