ಬಾಂಗ್ಲಾದೇಶದ ಹಿಂದೂಗಳ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಭಾರತ ಸರಕಾರವು ತ್ವರಿತ ಕ್ರಮ ಕೈಗೊಳ್ಳಬೇಕು ! – ಹಿಂದೂ ಜನಜಾಗೃತಿ ಸಮಿತಿ

ಬಾಂಗ್ಲಾದೇಶದಲ್ಲಿ ಮೀಸಲಾತಿ ಅಂಶಗಳಿಂದ ಆರಂಭವಾಗಿರುವ ಹಿಂಸಾಚಾರವು ಈಗ ಪರಾಕಾಷ್ಠೆಗೆ ತಲುಪಿದೆ . ಈ ಹಿಂಸಾಚಾರದ ರೂಪಾಂತರ ಈಗ ಅರಾಜಕತೆಯಲ್ಲಿ ಆಗಿದೆ. ಸರಕಾರ ವಿರೋಧಿ ಪ್ರತಿಭಟನೆಗಳು ಈಗ ಹಿಂದೂಗಳ ವಿರುದ್ಧ ಪ್ರಾರಂಭವಾಗಿವೆ. ಉದ್ದೇಶಪೂರ್ವಕವಾಗಿ ಹಿಂದುಗಳನ್ನು ಗುರಿ ಮಾಡಲಾಗುತ್ತಿದ್ದು ಅವರನ್ನು ಬಹಿರಂಗವಾಗಿ ಹತ್ಯೆ ಮಾಡುವುದು, ಹಿಂದೂಗಳ ಮನೆಯ ಮೇಲೆ ದಾಳಿ ಮಾಡುವುದು, ಹಿಂದೂಗಳ ಅಂಗಡಿಗಳನ್ನು ಲೂಟಿ ಮಾಡುವುದು, ಹಿಂದೂಗಳ ದೇವಸ್ಥಾನಗಳು ಧ್ವಂಸಗೊಳಿಸುವುದು, ಬೆಂಕಿ ಹಚ್ಚುವುದು, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡುವುದು, ಹಿಂದೂಗಳನ್ನು ಸ್ಥಳಾಂತರಿಸುವುದು ಮುಂತಾದ ದೌರ್ಜನ್ಯಗಳು ನಡೆಯುತ್ತಿವೆ . ಇದರಿಂದಾಗಿ ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳಲ್ಲಿ ಭಯದ ವಾತಾವರಣ ಉದ್ಭವಿಸಿದೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸೈನ್ಯದಿಂದ ಹಿಂದೂಗಳ ರಕ್ಷಣೆ ಮಾಡುವುದೆಂದು ಆಶ್ವಾಸನೆ ನೀಡಿದ್ದರು, ಭಾರತ ಸರಕಾರವು ಅವರ ಮೇಲೆ ಅವಲಂಬಿಸಿರದೇ ಹಿಂದೂ ಜನಾಂಗ ಮತ್ತು ದೇವಸ್ಥಾನ ರಕ್ಷಣೆಗಾಗಿ ತ್ವರಿತ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರನ್ನು ಆಗ್ರಹಿಸಿದ್ದಾರೆ.

ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಮುಂದಿನ ಬೇಡಿಕೆಗಳು ಸಲ್ಲಿಸಿದೆ . ಮೊದಲು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಲ್ಲೆಗಳು, ಮನೆಗಳ ಲೂಟಿ, ದೇವಸ್ಥಾನಗಳ ಮೇಲಿನ ದಾಳಿ, ಮೂರ್ತಿಗಳ ವಿದ್ವಾಂಸ, ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಿಸುವುದಕ್ಕಾಗಿ ಅಲ್ಲಿಯ ಸೈನ್ಯವು ದಲ್ಲಾಳಿಗಳಿಗೆ ಕಠಿಣ ಆದೇಶ ನೀಡಬೇಕು.

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ಗಮನಿಸುತ್ತಾ ಅಲ್ಲಿಯ ಹಿಂದುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು. ಇಲ್ಲಿಯವರೆಗೆ ಅಲ್ಲಿಯ ಹಿಂದೂಗಳ ಜೀವ ಮತ್ತು ಸಂಪತ್ತಿಯ ಏನೆಲ್ಲಾ ಹಾನಿ ಉಂಟಾಗಿದೆ, ಅದಕ್ಕೆ ತಕ್ಷಣ ಪರಿಹಾರ ನೀಡಬೇಕು. ಭಾರತ ಸರಕಾರ ಈ ವಿಷಯ ತ್ವರಿತವಾಗಿ ವಿಶ್ವಸಂಸ್ಥೆಯಲ್ಲಿ ಮಂಡಿಸಿ ಬಾಂಗ್ಲಾದೇಶದಲ್ಲಿನ ವಿಶ್ವಸಂಸ್ಥೆಯ ಸಂಘಗಳ ಜೊತೆಗೆ ಶಿಷ್ಟ ಮಂಡಳಿಗೆ ಭೇಟಿ ನೀಡಲು ಆಗ್ರಹಿಸಬೇಕು . ಬಾಂಗ್ಲಾದೇಶದಲ್ಲಿನ ಹಿಂಸಾಚಾರದಿಂದ ರೋಸಿ ಹಿಂದೂಸ್ಥಾನಕ್ಕೆ ಬಂದಿರುವ ಹಿಂದುಗಳಿಗೆ ನಾಗರಿಕ ಸುಧಾರಣಾ ಕಾನೂನಿನ ಮೂಲಕ (ಸಿ ಎ ಎ) ಭಾರತ ಸರಕಾರವು ಆಶ್ರಯ ನೀಡಬೇಕು. ಹಾಗೂ ಈ ಹಿಂದೆ ಕೂಡ ಸುಮಾರು ೫ ಕೋಟಿ ಬಾಂಗ್ಲಾದೇಶಿ ನುಸುಳುಕೋರರು ಭಾರತದಲ್ಲಿ ನುಸುಳಿದ್ದಾರೆ , ಈ ಘಟನೆಯ ನಂತರ ಅವರ ನುಸುಳುವಿಕೆ ಹೆಚ್ಚಾಗುವ ಸಾಧ್ಯತೆಯನ್ನು ಗಮನಿಸಿದರೆ ಭಾರತೀಯ ಗಡಿಯಲ್ಲಿ ಸರಿಯಾದ ಬಂದೋಬಸ್ತ್ ಮಾಡಬೇಕು .

ಸೋಶಿಯಲ್ ಮೀಡಿಯಾದ ಮಾಧ್ಯಮದಿಂದ ಬಾಂಗ್ಲಾದೇಶದಲ್ಲಿನ ದೌರ್ಜನ್ಯದ ಭಯಾನಕ ವಿಡಿಯೋಗಳು ಬೆಳಕಿಗೆ ಬರುತ್ತಿವೆ,ಅ ಅದರ ಬಗ್ಗೆ ಭಾರತ ಸರಕಾರವು ಸರಿಯಾದ ಸಮಯಕ್ಕೆ ಗಮನ ಹರಿಸದಿದ್ದರೆ ಬಾಂಗ್ಲಾದೇಶವು ಎರಡನೆಯ ಪಾಕಿಸ್ತಾನ ಆಗುವ ಸಾಧ್ಯತೆ ಇದೆ. ಇಲ್ಲಿ ಬೃಹತ್ ಪ್ರಮಾಣದಲ್ಲಿ ಹಿಂದುಗಳ ನರಸಂಹಾರ ಆಗುವ ಸಾಧ್ಯತೆ ಇದೆ. ಈ ಘಟನೆಯ ನಂತರ ಮತಾಂಧ ಜಿಹಾದಿ ಭಯೋತ್ಪಾದಕರ ಮನೋಧೈರ್ಯ ಹೆಚ್ಚಾಗಿ ಅವರು ಭಾರತದಲ್ಲಿ ಕೂಡ ಅವರ ಗೌಪ್ಯ ಬೆಂಬಲಿಗರ ಸಹಾಯದಿಂದ ಹಿಂಸಾಚಾರ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಭಾರತೀಯ ಪೊಲೀಸ ವ್ಯವಸ್ಥೆ, ಸರಕಾರ ಇವುಗಳ ಜೊತೆಗೆ ಸಮಸ್ತ ಭಾರತೀಯರು ಸತರ್ಕರಾಗಿ ಇರಬೇಕು. ಹಾಗೂ ಸ್ವಸಂರಕ್ಷಣೆಗಾಗಿ ಸಿದ್ದರಿರುವುದ ಕೂಡ ಆವಶ್ಯಕವಾಗಿದೆ ಎಂದು ಸಮಿತಿಯು ಹೇಳಿದೆ .