ಬಾಂಗ್ಲಾದೇಶದಲ್ಲಿನ ಹಿಂದೂಗಳ ಸ್ಥಿತಿ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಕರೆ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಂದು ನೆರೆಯ ದೇಶದಲ್ಲಿನ ಹಿಂದುಗಳನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ. ಮಠ ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದಾರೆ. ಇತಿಹಾಸದಿಂದ ಕಲಿತು, ಸಂಘಟಿತರಾಗಿ ಸನಾತನ ಧರ್ಮದ ರಕ್ಷಣೆಗಾಗಿ ಛಲದಿಂದ ಕಾರ್ಯ ಮಾಡಬೇಕಾಗಬಹುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಬಾಂಗ್ಲಾದೇಶದ ಹೆಸರು ಹೇಳದೆ ಈ ಹೇಳಿಕೆ ನೀಡಿದರು.
ಇತಿಹಾಸದ ತಪ್ಪಿನಿಂದ ಪಾಠ ಕಲಿಯದಿದ್ದರೆ, ಅದರ ಭವಿಷ್ಯ ಕೂಡ ಇರುವುದಿಲ್ಲ !
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಮಾತು ಮುಂದುವರಿಸಿ, ಇಂದು ನೀವು ಜಗತ್ತಿನ ಇಂದಿನ ಚಿತ್ರಣ ನೋಡಿದರೆ ನಿಮಗೆ ಭಾರತದ ಎಲ್ಲಾ ದೇಶಗಳು ಹೊತ್ತಿ ಉರಿಯುತ್ತಿವೆ. ಅಲ್ಲಿಯ ದೇವಸ್ಥಾನಗಳು ನೆಲೆಸಮ ಮಾಡಲಾಗುತ್ತಿದೆ. ಹಿಂದುಗಳನ್ನು ಹುಡುಕಿ ಹುಡುಕಿ ಗುರಿ ಮಾಡಲಾಗುತ್ತಿದೆ. ಆದರೂ ಕೂಡ ‘ಈ ಪರಿಸ್ಥಿತಿ ಏಕೆ ನಿರ್ಮಾಣ ಆಗಿದೆ ?’ ಎಂಬುದು ಗಮನಕ್ಕೆ ಬರುತ್ತದೆ. ಇದನ್ನು ಇತಿಹಾಸದಿಂದ ಹುಡುಕುವ ಪ್ರಯತ್ನ ನಾವು ಮಾಡುತ್ತಿಲ್ಲ, ಆದ್ದರಿಂದಲೇ ನಾವು, ಯಾವ ಸಮಾಜ ಇತಿಹಾಸದಲ್ಲಿ ನಡೆದಿರುವ ತಪ್ಪಿನಿಂದ ಪಾಠ ಕಲಿಯುವುದಿಲ್ಲ, ಅದರ ಭವಿಷ್ಯ ಕೂಡ ಇರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸನಾತನ ಧರ್ಮದ ಮೇಲೆ ಬರುವ ವಿಪತ್ತುಗಳಿಗಾಗಿ ಮತ್ತೊಮ್ಮೆ ಒಗ್ಗಟ್ಟಿನಿಂದ ಕಾರ್ಯ ಮಾಡುವ ಆವಶ್ಯಕತೆ ಇದೆ ಎಂದು ಹೇಳಿದರು.