ನನ್ನನ್ನು ಬಾಂಗ್ಲಾದೇಶದಿಂದ ಹೊರಹಾಕಿದ ಶೇಖ ಹಸೀನಾ ಈಗ ಅವರೇ ಪಲಾಯನವಾದರು ! – ಲೇಖಕಿ ತಸ್ಲೀಮಾ ನಸ್ರೀನ್

ನಿರಾಶ್ರಿತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ನಿಂದ ಶೇಖ್ ಹಸೀನಾ ಕುರಿತು ಟೀಕೆ !

ನವ ದೆಹಲಿ – ಬಾಂಗ್ಲಾದೇಶದ ನಿರಾಶ್ರಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಟೀಕಿಸಿದ್ದಾರೆ. ಪೋಸ್ಟನಲ್ಲಿ ಅವರು, ‘1999 ರಲ್ಲಿ ಕೊನೆಯುಸಿರೆಳೆಯುತ್ತಿದ್ದ ನನ್ನ ತಾಯಿಯನ್ನು ಭೇಟಿ ಮಾಡಲು ನಾನು ಬಾಂಗ್ಲಾದೇಶಕ್ಕೆ ಹಿಂದಿರುಗಿದಾಗ, ಹಸೀನಾ ನನ್ನನ್ನು ದೇಶದಿಂದ ಹೊರಹಾಕಿದರು ಮತ್ತು ಪುನಃ ಬರಬೇಡ ಎಂದು ಹೇಳಿದ್ದರು.

ಮುಸಲ್ಮಾನರನ್ನು ಸಂತೈಸಲು ಅವರು ಹೀಗೆ ಮಾಡಿದರು. ಶೇಖ್ ಹಸೀನಾ ದೇಶ ತೊರೆಯುವಂತೆ ನಡೆಸಿದ ಚಳವಳಿಯ ಹಿಂದೆ ಇದೇ ಇಸ್ಲಾಮಿಕ್ ಜನರಿದ್ದಾರೆ. ಇದರಿಂದಾಗಿ ಶೇಖ್ ಹಸೀನಾ ಸ್ವತಃ ಈ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಅವರು ಇಸ್ಲಾಮ್ ವಾದಿಗಳನ್ನು ಪ್ರವರ್ಧಮಾನಕ್ಕೆ ಬರಲು ಅವಕಾಶ ಮಾಡಿಕೊಟ್ಟರು. ಅವರು ತಮ್ಮ ಜನರನ್ನು ಭ್ರಷ್ಟಾಚಾರ ಮಾಡಲು ಬಿಟ್ಟರು. ಈಗ ಬಾಂಗ್ಲಾದೇಶ ಪಾಕಿಸ್ತಾನದಂತೆ ಆಗಬಾರದು. ಬಾಂಗ್ಲಾದೇಶದಲ್ಲಿ ಮಿಲಿಟರಿ ಆಡಳಿತ ಇರಬಾರದು. ರಾಜಕೀಯ ಪಕ್ಷಗಳು ಅಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನು ತರಬೇಕು’ ಎಂದು ಬರೆದಿದ್ದಾರೆ.