ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಈ ರಾಜ್ಯಗಳ ರಾಜ್ಯಸರಕಾರಗಳು ಅಂಗಡಿಯವರಿಗೆ ತಮ್ಮ ಹೆಸರುಗಳನ್ನು ಅಂಗಡಿಯ ಮೇಲೆ ಹಾಕುವ ಅದೇಶವನ್ನು ನೀಡಿವೆ. ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ಈ ಮುಸಲ್ಮಾನ ಸಂಘಟನೆಯೂ ಈ ಆದೇಶಕ್ಕೆ ಬೆಂಬಲ ನೀಡಿದೆ. ಇದಾದ ನಂತರ ದೇಶದ ಮತ್ತು ಭಾರತದ ಹೊರಗಿನ ಮತಾಂಧರು ಮತ್ತು ಅವರೊಂದಿಗೆ ಸೇರಿದ ಪ್ರಗತಿಪರರ, ಹಾಗೆಯೇ ಸಾಮ್ಯವಾದಿ ಸಂಘಟನೆಗಳಿಗೆ ಕಸಿವಿಸಿ ಆಗದಿದ್ದರೆ ಆಶ್ಚರ್ಯವೆನ್ನಬಹುದು. ಆದುದರಿಂದ ‘ಅಸೋಸಿಯೆಶನ್ ಫಾರ್ ಪ್ರೊಟೆಕ್ಶನ್ ಆಫ್ ಸಿವಿಲ್ ರೈಟ್ಸ್’ ಈ ಸ್ವಯಂಸೇವಿ ಸಂಸ್ಥೆಯು ಒಂದು ಅರ್ಜಿಯ ಮೂಲಕ ಮೇಲಿನ ಆದೇಶಕ್ಕೆ ಸವಾಲೊಡ್ಡಿದ್ದರಿಂದ ಜುಲೈ ೨೨ ರಂದು ಕೊನೆಗೆ ನ್ಯಾಯಾಲಯವು ಆ ಆದೇಶಕ್ಕೆ ತಡೆ ತಂದಿತು. ಮಾಧ್ಯಮಗಳೂ ಕೂಡಲೇ ‘ಯೋಗಿ ಇವರಿಗೆ ಮುಖಭಂಗ’, ಎಂಬ ಶೀರ್ಷಿಕೆಯ ವಾರ್ತೆಗಳನ್ನು ನೀಡಿದವು. ಇಲ್ಲಿ ಯಾರ ಭಾವನೆಯನ್ನೂ ನೋಯಿಸುವ ಉದ್ದೇಶವಿಲ್ಲ; ಆದರೆ ಇದರ ನೇರ ಇನ್ನೊಂದು ಅರ್ಥ, ಪ್ರಗತಿಪರರು, ಸಾಮ್ಯವಾದಿಗಳು ಮತ್ತು ಮಾಧ್ಯಮಗಳಲ್ಲಿನ ಸಿಬ್ಬಂದಿಗಳಿಗೆ ಯಾರಿಗೂ ‘ಉಗುಳು ಜಿಹಾದ್’, ‘ಮೂತ್ರ ಜಿಹಾದ್’ ಮಾಡಿದ ಆಹಾರವನ್ನು ನೀಡಿದರೂ ನಡೆಯುತ್ತದೆ, ಅವರಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅವರು ಇಂತಹ ಆಹಾರವನ್ನು ಸಹಜವಾಗಿ ತಿನ್ನಬಹುದು. ಒಂದು ವೇಳೆ ಈ ರೀತಿ ಇಲ್ಲದಿದ್ದರೆ ಅವರು ಯೋಗಿಯವರನ್ನು ಅಭಿನಂದಿಸುವುದು ಅಪೇಕ್ಷಿತವಿತ್ತು.
ಮೂಲ ಕಾನೂನು ಇದ್ದೇ ಇದೆ
‘ಭಾರತದ ಎಲ್ಲ ರಾಜ್ಯಗಳಲ್ಲಿ ಅಂಗಡಿಗಳ ಹೊರಗೆ ಮಾಲೀಕರ ಹೆಸರುಗಳನ್ನು ಬರೆಯಬೇಕು’, ಎಂದು ಅಂಗಡಿಗಳಿಗೆ ಸಂಬಂಧಿಸಿದ ಕಾನೂನಿನಲ್ಲಿ ಉಲ್ಲೇಖವಿದೆ. ಆದುದರಿಂದ ಆ ಕಾನೂನನ್ನು ಪಾಲಿಸುವುದು ಆವಶ್ಯಕವಾಗಿದೆ. ಎರಡನೇಯದಾಗಿ ಒಬ್ಬನಿಗೆ ಒಂದು ಅಂಗಡಿಯಿಂದ ವಸ್ತು ಖರೀದಿಸಲಿಕ್ಕಿದ್ದರೆ, ಆ ಅಂಗಡಿಯ ಮಾಲೀಕನ ಹೆಸರು ತಿಳಿದುಕೊಳ್ಳಬೇಕಿದ್ದರೆ, ಅದು ಗ್ರಾಹಕನ ‘ಮಾಹಿತಿ ಹಕ್ಕು’ ಅಡಿಯಲ್ಲಿ ದೊರಕುವ ಹಕ್ಕಾಗಿದೆ. ಮೂರನೇಯದಾಗಿ ‘ರಾಜ್ಯ ಸರಕಾರಗಳು ಹೊರಡಿಸಿದ ಆದೇಶಗಳ ವಿರುದ್ಧ ಆಯಾ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ಹೋಗದೇ ಅರ್ಜಿದಾರರು ನೇರವಾಗಿ ಸರ್ವೋಚ್ಚ ನ್ಯಾಯಾಲಯಗಳಿಗೆ ಏಕೆ ಹೋಗುತ್ತಾರೆ ?’ ಸರ್ವೋಚ್ಚ ನ್ಯಾಯಾಲಯವೂ ಅವರಿಗೆ ರಾಜ್ಯಗಳ ವಿಷಯಗಳಿಗಾಗಿ ಮೊದಲು ಉಚ್ಚ ನ್ಯಾಯಾಲಯಕ್ಕೆ ಹೋಗಲು ಏಕೆ ಹೇಳುವುದಿಲ್ಲ ? ಈ ಮೂರೂ ಪ್ರಶ್ನೆಗಳನ್ನು ನ್ಯಾಯವಾದಿ ಕೈಲಾಸ್ ವಾಘ ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಆದುದರಿಂದ ಉತ್ತರಪ್ರದೇಶ ಸರಕಾರದ ಆದೇಶ ಮತ್ತು ಅದಕ್ಕೆ ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆ ಕುರಿತು ಕಾನೂನುಬದ್ಧ ಅಧ್ಯಯನ ಆವಶ್ಯಕವಾಗಿದೆ.
ಹಿಂದೂಗಳ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ !
ಈ ತೀರ್ಪಿಗೆ ತಡೆಯಾಜ್ಞೆ ನೀಡುವಾಗ ಸರ್ವೋಚ್ಚ ನ್ಯಾಯಾಲಯವು, ‘ಅಂಗಡಿಗಳಲ್ಲಿ ಸಸ್ಯಾಹಾರ ಇದೆಯೋ ಮಾಂಸಾಹಾರವೋ ? ಎಂಬುದನ್ನು ನಮೂದಿಸಬೇಕು’ ಎಂದು ಹೇಳಿದೆ; ಆದರೆ ‘ಇದರಿಂದ ಮೂಲ ಪ್ರಶ್ನೆಗೆ ಉತ್ತರ ಹೇಗೆ ಸಿಗುವುದು’, ಎಂಬ ಪ್ರಶ್ನೆ ಎಲ್ಲ ಹಿಂದೂಗಳ ಎದುರಿಗಿದೆ. ನ್ಯಾಯಾಲಯವು ಹಿಂದೂಗಳ ಮನಸ್ಸಿನಲ್ಲಿನ ಸಂದೇಹಗಳ ನಿವಾರಣೆ ಮಾಡುವುದು ಎಂಬ ಅಪೇಕ್ಷೆ ಇದೆ. ‘ಯಾವ ರೀತಿಯ ಆಹಾರವನ್ನು ನೀಡಲಾಗುತ್ತಿದೆ ? ಇದನ್ನು ಪರಿಶೀಲಿಸುವ ಹಕ್ಕು ಪೊಲೀಸರಿಗೆ ಮಾತ್ರ ಇದೆ’, ಎಂದು ನ್ಯಾಯಾಲಯವು ಹೇಳಿದೆ; ಆದರೆ ಪೊಲೀಸರು ತಮ್ಮ ಅಧಿಕಾರವನ್ನು ಪ್ರಾಮಾಣಿಕವಾಗಿ ಚಲಾಯಿಸದಿರುವುದು ನಿಜವಾದ ಸಮಸ್ಯೆಯಾಗಿದೆ. ಪೊಲೀಸರು ಹಿಂದೂಗಳಾಗಿದ್ದರೂ ಅವರಿಗೆ ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಯಾವುದೇ ಕೊಡು-ಕೊಳ್ಳುವಿಕೆ ಇಲ್ಲ; ಆದರೆ ‘ಮುಸಲ್ಮಾನರ ಧಾರ್ಮಿಕಭಾವನೆಗೆ ಧಕ್ಕೆಯಾಗದಂತೆ ಅವರು ಬಹಳ ಜಾಗರೂಕರಾಗಿದ್ದಾರೆ. ಪೊಲೀಸರಿಗೆ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಅಷ್ಟು ಸಂವೇದನಾಶೀಲತೆ ಇದಿದ್ದರೆ ಪ್ರಶ್ನೆಯೇ ಇರುತ್ತಿರಲಿಲ್ಲ. ಇಂದು ಜಿಹಾದಿಗಳಿಗೆ ಪ್ರತ್ಯಕ್ಷ ಹಣಕಾಸು ಸಹಾಯ ಮಾಡುವ ‘ಹಲಾಲ್ ಪ್ರಮಾಣಿತ’ ಉತ್ಪಾದನೆಗಳು ಮಾರಾಟವಾಗುತ್ತಿವೆ. ‘ಉಗುಳು ಜಿಹಾದ್’, ‘ಮೂತ್ರ ಜಿಹಾದ್’ ಇವುಗಳ ಬಹಳಷ್ಟು ವಿಡಿಯೋಗಳು ವ್ಯಾಪಕವಾಗಿ ಹರಿದಾಡು ತ್ತಿವೆ. ಮುಸಲ್ಮಾನ ಧರ್ಮದ ಧಾರ್ಮಿಕ ನಾಯಕರು ‘ಹೀಗೆ ಮಾಡುವುದು, ಧರ್ಮಪಾಲನೆಯಾಗಿದೆ’, ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ; ಆದರೆ ಇದರ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ? ಆದುದರಿಂದ ಪೊಲೀಸರು ಯಾವುದಾದರೂ ಅಂಗಡಿಗೆ ಹೋಗಿ ಮೇಲಿನ ಜಿಹಾದ್ ನಡೆದಿದೆ ಅಥವಾ ಇಲ್ಲ ? ಎಂದು ಪತ್ತೆ ಮಾಡಿ ಅದರ ಮೇಲೆ ಯಾವ ರೀತಿ ಕಾರ್ಯಾಚರಣೆ ಮಾಡುವುದು ? ಎಂಬ ಸರಳ ಪ್ರಶ್ನೆ ಹಿಂದೂಗಳ ಮುಂದಿದೆ.
ಹಿಂದೂಗಳಿಗೇಕಿಲ್ಲ ಧಾರ್ಮಿಕ ಅಧಿಕಾರ ?
ಈ ಹಿಂದೆ ಕೆಲವು ಮುಸಲ್ಮಾನ ಮಾರಾಟಗಾರರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರುಗಳನ್ನು ಕೊಟ್ಟು ಯಾತ್ರೆಗಳಲ್ಲಿ ಮಾಂಸಾಹಾರದ ಮಾರಾಟವನ್ನು ಮಾಡುವುದು ಪತ್ತೆಯಾಗಿತ್ತು. ಸಂವಿಧಾನವು ಪ್ರತಿಯೊಬ್ಬರಿಗೆ ಅವರ ಧರ್ಮ ಪಾಲನೆಯ ಹಕ್ಕನ್ನು ನೀಡಿದೆ. ಬೇರೆ ಧರ್ಮದವರ ಆಚರಣೆಯ ಮೇಲೆ ಒಂದು ವೇಳೆ ಯಾರಾದರೂ ನಿರ್ಬಂಧ ಹೇರಿದರೂ, ದೇಶದ ಎಲ್ಲ ಕಡೆಗಳಲ್ಲಿ ಆಂದೋಲನಗಳು ನಡೆಯುತ್ತವೆ, ಗಲಭೆಗಳಾಗುತ್ತವೆ, ಅದರಲ್ಲಿ ಹಿಂದೂಗಳಿಗೆ ತೊಂದರೆಯಾಗುತ್ತದೆ ಮತ್ತು ಭಯೋತ್ಪಾದನೆಯನ್ನು ಸೃಷ್ಟಿಸಲಾಗುತ್ತದೆ. ಪ್ರಗತಿಪರರು ಮತ್ತು ಸಾಮ್ಯವಾದಿಗಳ ಗುಂಪು ತಕ್ಷಣ ಈ ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡಿ ‘ಭಾರತಲ್ಲಿ ಅಲ್ಪಸಂಖ್ಯಾತರ ಮೇಲೆ ಹೇಗೆ ಅನ್ಯಾಯವಾಗುತ್ತಿದೆ ?’, ಎಂದು ತೋರಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗುತ್ತವೆ. ಹಿಂದೂಗಳ ಕಾವಡ ಯಾತ್ರೆಯ ಸಮಯದಲ್ಲಿ ಅವರಿಗೆ ‘ಉಗುಳು ಜಿಹಾದ್’ ಮತ್ತು ‘ಮೂತ್ರ ಜಿಹಾದ್’ ಮಾಡಿದ ಹಣ್ಣುಗಳನ್ನು ದೇವರಿಗೆ ಅರ್ಪಿಸಬೇಕಾಗುವುದು ಅಥವಾ ಸ್ವತಃ ತಿನ್ನಬೇಕಾಗುವುದು, ಇದು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ದಾಳಿಯಲ್ಲವೇ ? ಮತ್ತು ಹಿಂದೂಗಳಿಗೆ ತಮ್ಮ ಧಾರ್ಮಿಕ ಹಕ್ಕನ್ನು ಕಾಪಾಡುವುದಕ್ಕಾಗಿ ಪರಿಹಾರ ಕಂಡು ಹಿಡಿಯುವ ಹಕ್ಕು ಅಲ್ಲಿನ ಸರಕಾರಕ್ಕೆ ಇಲ್ಲವೇ ? ಹಿಂದೂಗಳು ಬಹುಸಂಖ್ಯಾತರಿದ್ದರೂ ಅವರಿಗೆ ಅವರ ಹಕ್ಕನ್ನು ಬಳಸಲು ಸಾಧ್ಯವಾಗುತ್ತಿಲ್ಲ, ಎಂಬುದೇ ಈ ಘಟನೆಗಳಿಂದ ಗಮನಕ್ಕೆ ಬರುತ್ತದೆ. ಇತರ ಧರ್ಮದವರಿಗೆ ಧಾರ್ಮಿಕ ಶಿಕ್ಷಣ ಪಡೆಯುವ ಹಕ್ಕಿದೆ ಮತ್ತು ಹಿಂದೂಗಳಿಗೆ ಮಾತ್ರ ಆ ಹಕ್ಕಿಲ್ಲ. ಈ ಘೋರ ಅನ್ಯಾಯವನ್ನು ಇಷ್ಟು ವರ್ಷಗಳ ಕಾಲ ಸಹಿಸಿಕೊಂಡಿದ್ದರಿಂದ ಇಂದು ಹಿಂದೂಗಳಿಗೆ ತಮ್ಮ ಧಾರ್ಮಿಕ ಹಕ್ಕುಗಳನ್ನು ಉಳಿಸಿಕೊಳ್ಳಲು, ಹೋರಾಡಲು ಧೈರ್ಯವೇ ಉಳಿದಿಲ್ಲ, ಎಂಬುದು ನಿಜ ! ಮುಸಲ್ಮಾನರು ರಸ್ತೆಯಲ್ಲಿ ನಮಾಜು ಪಠಣ, ಅನಧಿಕೃತ ಮಸೀದಿ, ಮೊಹರಮ್ ನಂತಹ ಸ್ವತಃಕ್ಕೆ ಗಾಯ ಮಾಡಿಕೊಳ್ಳುವ ಹಬ್ಬ, ಈದ್‌ನಂದು ಆಡು ಅಥವಾ ಗೋಹತ್ಯೆ, ಇವೆಲ್ಲವುಗಳು ಯಾವುದೇ ಅಡತಡೆ ಇಲ್ಲದೇ ನಡೆಯುತ್ತವೆ. ಉತ್ತರಪ್ರದೇಶದಲ್ಲಿ ಜಿಹಾದಿಗಳಿಂದಾಗಿ ಕಾವಡ ಯಾತ್ರೆಗೆ ತೆರಳಿದ್ದ ಹಿಂದೂ ಭಕ್ತರು ಹಸಿವಿನಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ ಯೋಗಿ ಸರಕಾರವು ಹಿಂದೂಗಳು ತಮ್ಮ ಧಾರ್ಮಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಕಾನೂನಿನ ಪಾಲನೆ ಮಾಡಲು ಹೇಳಿದರೆ, ಇತರರಿಗೇಕೆ ಹೊಟ್ಟೆಶೂಲೆ ?
ಹಿಂದೂಗಳೇ, ನೀವೇ ನಿಮ್ಮ ಹೆಸರುಗಳನ್ನು ನೀಡಿ !
ಆದೇಶವಿರಲಿ ಅಥವಾ ಇಲ್ಲದಿರಲಿ, ಹಿಂದೂಗಳು ಸಂಘಟಿತರಾಗಿ ಸ್ವಯಂಪ್ರೇರಣೆಯಿಂದ ಅಂಗಡಿಗಳ ಮೇಲೆ ತಮ್ಮ ಹೆಸರುಗಳನ್ನು ಹಾಕಿದರೆ, ಉಳಿದ ಅಂಗಡಿಗಳು ಇತರ ಧರ್ಮದವರದ್ದಾಗಿವೆ, ಎಂದು ಸುಲಭವಾಗಿ ಬಹಿರಂಗವಾಗುವುದು. ಆದುದರಿಂದ ಉಪವಾಸಕ್ಕೆ, ಧಾರ್ಮಿಕ ವಿಧಿಗಳಿಗೆ ಮತ್ತು ಮತಾಂಧರ ಅಂಗಡಿಗಳಿಂದ ‘ಜಿಹಾದ್’ ಮಾಡಿದ ಆಹಾರ ಪದಾರ್ಥಗಳನ್ನು ಖರೀದಿಸಬೇಕೇ ಅಥವಾ ಬೇಡವೇ ? ಎಂದು ಹಿಂದೂಗಳಿಗೆ ನಿರ್ಧರಿಸಲು ಸುಲಭವಾಗುವುದು ! ಅಂದರೆ ಇದಕ್ಕಾಗಿ ಹಿಂದೂಗಳಿಗೆ ‘ಜಿಹಾದ್’ನ, ‘ಅವರ ಅಸ್ತಿತ್ವದ ಪ್ರಶ್ನೆ ಹೇಗೆ ಉದ್ಭವಿಸಿದೆ ?’, ಈ ಬಗ್ಗೆ ಮತ್ತು ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳುವ ಗಾಂಭೀರ್ಯತೆ ಗಮನಕ್ಕೆ ಬರಬೇಕು. ಇಂದು ಹಿಂದೂಗಳ ಸಂಖ್ಯೆ ದೇಶದಲ್ಲಿ ಶೇ. ೮೦ ರಿಂದ ೬೦ ರಷ್ಟು ಮತ್ತು ಮುಸಲ್ಮಾನರ ಜನಸಂಖ್ಯೆ ಶೇ. ೨೦ ರಿಂದ ೪೦ ರಷ್ಟು ಆದ ಬಗೆಗಿನ ಚರ್ಚೆ ಎಲ್ಲೆಡೆ ಇದೆ. ಇದರಲ್ಲಿ ಸತ್ಯವಿರುವ ಸಾಧ್ಯತೆ ಹೆಚ್ಚಿದೆ. ಮುಸಲ್ಮಾನರ ಸಂಖ್ಯೆ ಹೆಚ್ಚಾದರೆ, ಅಲ್ಲಿ ಏನಾಗುತ್ತದೆ ? ಎಂದು ಇಡೀ ಜಗತ್ತು ಅನುಭವಿಸುತ್ತಿದೆ. ಹಿಂದೂಗಳು, ಸರಕಾರ ಮತ್ತು ವ್ಯವಸ್ಥೆಯ ಅರಿವಿಲ್ಲದಂತೆ ಏಕೆ ವರ್ತಿಸುತ್ತಿದ್ದಾರೆ ? ಎಂಬುದು ಗಮನಕ್ಕೆ ಬರುತ್ತಿಲ್ಲ. ಪ್ರಗತಿಪರರ ಸಂಘಟನೆಗಳು ಮಾನವ ಹಕ್ಕುಗಳು ಅಥವಾ ನಾಗರಿಕ ಹಕ್ಕುಗಳ ಹೆಸರಿನಲ್ಲಿ ‘ಹೆಸರಿನ ಆದೇಶ’ವನ್ನು ವಿರೋಧಿಸುತ್ತವೆ ಮತ್ತು ಬಹಿರಂಗವಾಗಿ ಜಿಹಾದಿಗಳನ್ನು ಬೆಂಬಲಿಸುತ್ತಿವೆ ಎಂದು ಯಾರಿಗೂ ಸುಲಭವಾಗಿ ಗಮನಕ್ಕೆ ಬರುತ್ತದೆ. ಆದುದರಿಂದ ಇಂತಹ ವಿರೋಧಕರಿಗೆ ಬೆಂಬಲ ನೀಡದೇ ಸರಕಾರದ ಮಟ್ಟದಲ್ಲಿಯೇ ಈ ಬಗೆಗಿನ ಕಾನೂನಿನ ಅರಿವು ಮೂಡಿಸುವ ಮೂಲಕ ಹಿಂದೂಗಳಿಗೆ ತಮ್ಮ ಒಳ್ಳೆಯ ಆಹಾರವನ್ನು ಸೇವಿಸುವ ಮತ್ತು ದೇವರಿಗೆ ಅರ್ಪಿಸುವ ಹಕ್ಕನ್ನು ನೀಡಬೇಕು, ಎಂಬುದೇ ಅಪೇಕ್ಷೆಯಾಗಿದೆ !