ಯುರೋಪಿಯನ್‌ ಸಂಸತ್ತಿನ ಚುನಾವಣೆಗಳು ಮತ್ತು ಇಸ್ಲಾಂ !

೧. ಯುರೋಪಿಯನ್‌ ರಾಷ್ಟ್ರಗಳಲ್ಲಿ ಮುಸಲ್ಮಾನ ವಲಸಿಗರಿಂದಾಗುವ ಸಮಸ್ಯೆಗಳು

‘ಭಾರತದ ಲೋಕಸಭೆ ಚುನಾವಣೆಯ ತೀರ್ಪು ಜೂನ್‌ ೪ ರಂದು ಹೊರಬಂದಿತು. ತದನಂತರ ಕೇವಲ ೨ ದಿನಗಳ ಬಳಿಕ  ಯುರೋಪಿಯನ್‌ ಸಂಸತ್ತಿನ ಮೊದಲ ಸುತ್ತಿನ ಚುನಾವಣೆ ನಡೆಯಿತು ಜೂನ್‌ ೯ ರಂದು ಈ ಚುನಾವಣೆಯ ಎರಡನೇ ಹಂತ ನಡೆಯಿತು. ಫ್ರಾನ್ಸ್ ಮತ್ತು ಜರ್ಮನಿ ದೇಶಗಳಲ್ಲಿ  ಜೂನ್‌ ೯ ರಂದು ಮತದಾನ ನಡೆಯಿತು. ಅದರ ನಂತರ, ಜೂನ್‌ ೯ ರ ರಾತ್ರಿಯಿಂದ ಫಲಿತಾಂಶ ಬರಲು ಪ್ರಾರಂಭವಾಯಿತು ಮತ್ತು  ಯುರೋಪಿನಲ್ಲಿ ಭೂಕಂಪವಾದಂತೆ ಭಾಸವಾಯಿತು !

ಇತಿಹಾಸದಲ್ಲಿ ಹಿಟ್ಲರನ ನಾಜಿ ಪಕ್ಷದಿಂದ ಮತ್ತು ದ್ವಿತೀಯ ಮಹಾಯುದ್ಧದಿಂದ ಯುರೋಪಿಗೆ ಅಪಾರ ಹಾನಿಯಾಯಿತು. ಇದರಿಂದ ೧೯೪೫ ರಲ್ಲಿ ಮಹಾಯುದ್ಧ ಮುಗಿದ ನಂತರ ಜರ್ಮನಿಯಲ್ಲಿ ಮಾತ್ರವಲ್ಲ; ಇಡೀ ಯುರೋಪಿನಲ್ಲಿ ಹಿಟ್ಲರನ ಹೆಸರನ್ನು ಹೇಳಲು ನಿಷೇಧಿಸಲಾಗಿದ್ದು, ಅದು ಅಪರಾಧವಾಗಿದೆ ಮತ್ತು ಕೇವಲ ಹಿಟ್ಲರನ ಹೆಸರು ಮಾತ್ರವಲ್ಲ ರಾಷ್ಟ್ರೀಯವಾದವನ್ನು ಮಾತನಾಡುವುದನ್ನೂ ನಿಷೇಧಿಸಲಾಗಿದೆ. ಇಲ್ಲಿನ ಜನರಲ್ಲಿ ಹಿಟ್ಲರನು ಅತಿಯಾದ ರಾಷ್ಟ್ರವಾದದ ಬಗ್ಗೆ ಮಾತನಾಡಿ, ಯುರೋಪನ್ನು ವಿನಾಶದ ಕಂದಕಕ್ಕೆ ದೂಡಿದ್ದನು ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.  ಆದ್ದರಿಂದ, ಯುರೋಪಿಯನ್‌ ಒಕ್ಕೂಟದ ಸ್ಥಾಪನೆಯ ನಂತರವೂ, ಮಧ್ಯವರ್ತಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ನಡುವಿನ ರಾಜಕೀಯ ಹಗೆತನ ಮುಂದುವರಿಯುತ್ತಲೇ ಇತ್ತು. ಬಲಪಂಥೀಯರ ವಿಶೇಷ ಅಸ್ತಿತ್ವವಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಲು ಪ್ರಾರಂಭವಾಗಿದೆ. ವಿಶೇಷವಾಗಿ ಸಿರಿಯಾದ ಮುಸಲ್ಮಾನ ವಲಸಿಗರು, ಯುರೋಪಿಯನ್‌ ದೇಶಗಳಲ್ಲಿ ಆಶ್ರಯ ಪಡೆಯಲು ಪ್ರಾರಂಭಿಸಿದರು. ಅನಂತರ, ಯುರೋಪಿಯನ್‌ ಒಕ್ಕೂಟದ ದೇಶಗಳು ಅವರಿಗೆ ಉದಾರ ಅಂತಃಕರಣದೊಂದಿಗೆ ಆಶ್ರಯವನ್ನು ನೀಡಲು ಪ್ರಾರಂಭಿಸಿದವು ಮತ್ತು ಅಸಂತೋಷ ಉದ್ಭವಿಸತೊಡಗಿತು. ಕೆಲವು ವರ್ಷಗಳ ನಂತರ, ಯುರೋಪಿಯನ್‌ ದೇಶಗಳಿಗೆ ತಾವು ಮಾಡಿದ ತಪ್ಪಿನ ಅರಿವಾಯಿತು. ಮೇಲ್ನೋಟಕ್ಕೆ  ಅವರಿಗೆ ಹೆಚ್ಚಿಗೆ ಏನನ್ನೂ ಹೇಳಲು ಸಾಧ್ಯವಾಗುತ್ತಿರಲಿಲ್ಲ: ಆದರೆ ಆ ದೇಶಗಳು ವಲಸೆ ಬಂದ ಮುಸಲ್ಮಾನರನ್ನು ದೇಶದಿಂದ ಹೊರಹಾಕಲು ಪ್ರಾರಂಭಿಸಿದವು. ಈ ಕೆಲಸ ಕಷ್ಟಕರವಾಗಿತ್ತು; ಏಕೆಂದರೆ ಆ ಸಮಯದಲ್ಲಿ ಅನೇಕ ಮುಸಲ್ಮಾನರು ಸ್ಥಳಾಂತರಿತ ವಲಸಿಗರಾಗಿ ಈ ಯುರೋಪಿಯನ್‌ ದೇಶಗಳ ವ್ಯವಸ್ಥೆಯ ಅಧಿಕೃತವಾಗಿ ಮತ್ತು ಅನಧಿಕೃತ ಭಾಗವಾಗಿಬಿಟ್ಟಿದ್ದರು. ಈ ವಿಷಯ ಇಲ್ಲಿಗೇ ನಿಂತಿದ್ದರೆ  ಚೆನ್ನಾಗಿತ್ತು. ಇವೆಲ್ಲ ವಲಸಿಗ ಮುಸಲ್ಮಾನರು ಆಯಾ ದೇಶಗಳ ಪದ್ಧತಿ ಮತ್ತು ಪರಂಪರೆಯನ್ನು ಗೌರವಿಸಿ ಯುರೋಪಿಯನ್‌ ದೇಶಗಳೊಂದಿಗೆ ಬೆರೆತಿದ್ದರೆ, ಬಹುಶಃ ವಿಷಯ ಭಿನ್ನವಾಗಿರುತ್ತಿತ್ತು; ಆದರೆ ಈ ರೀತಿ ಆಗಲಿಲ್ಲ, ಅದು ಸಾಧ್ಯವೂ ಇರಲಿಲ್ಲ. ಈ ವಲಸಿಗ ಮುಸಲ್ಮಾನರು ತಮ್ಮ ಧರ್ಮಕ್ಕೆ ಪ್ರಾಮುಖ್ಯತೆ ನೀಡುತ್ತಾ ಬೀದಿಗಳಲ್ಲಿ ನಮಾಜ್‌ ಮಾಡಲು, ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್‌ ಕೂಗುವುದು ಇತ್ಯಾದಿ ಪ್ರಾರಂಭಿಸಿದರು.

ಶ್ರೀ. ಪ್ರಶಾಂತ ಪೋಳ

೨. ಮುಸಲ್ಮಾನ ವಲಸಿಗರ ವಿರುದ್ಧ ರಸ್ತೆಗಿಳಿದ ಯುರೋಪಿಯನ್‌ ದೇಶಗಳ ನಾಗರಿಕರು

ಪ್ರಾರಂಭದಲ್ಲಿ, ಕೆಲವು ದೇಶಗಳ ಸರಕಾರಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸಿ ಎಲ್ಲವನ್ನೂ ಒಪ್ಪಿಕೊಂಡರು; ಆದರೆ ಇದು ಇಲ್ಲಿಗೇ ನಿಲ್ಲಲಿಲ್ಲ. ವಿಷಯ ಮುಂದಕ್ಕೆ ಸಾಗಿತು. ಫ್ರಾನ್ಸ್‌ನಲ್ಲಿ ಮುಸಲ್ಮಾನ ವಲಸಿಗರು ಗೂಂಡಾಗಿರಿ ನಡೆಸುತ್ತಾ ರಸ್ತೆಗಿಳಿದರು. ಅವರು ಪ್ಯಾರಿಸನ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ಕೂಡ ಅವರು ಬಿಡಲಿಲ್ಲ. ಅಂಗಡಿಗಳು, ಶೋರೂಮ್‌ಗಳು, ರೆಸ್ಟೋರೆಂಟ್‌ಗಳು ಎಲ್ಲವನ್ನೂ ಧ್ವಂಸಗೊಳಿಸಿದರು. ಅದೂ ಒಮ್ಮೆ ಅಲ್ಲ, ಹಲವು ಬಾರಿ. ಇಂದಿಗೂ ಈ ವಲಸಿಗ ಮುಸಲ್ಮಾನರಿಂದಾಗಿ ಫ್ರಾನ್ಸ್‌ನ ಅನೇಕ ನಗರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವಾಗ ಹದಗೆಡುವುದು ಎಂದು ಹೇಳಲು ಸಾಧ್ಯವಿಲ್ಲ. ಫ್ರಾನ್ಸ್ ಮಾತ್ರ ಇದಕ್ಕೆ ತುತ್ತಾಗಲಿಲ್ಲ.

ಬೆಲ್ಜಿಯಂ, ಜರ್ಮನಿ, ಸ್ವೀಡನ್, ಡೆನ್ಮಾರ್ಕ್ ಮತ್ತು ಇಟಲಿ ದೇಶಗಳಿಗೆ ವಲಸೆ ಬಂದ ಮುಸಲ್ಮಾನರು ಅದನ್ನೇ ಪುನರಾವರ್ತಿಸಿದರು. ಈ ತೊಂದರೆಯಿಂದ ಒಂದು ವೇಳೆ ಯಾವುದಾದರೂ ದೇಶ ಸುರಕ್ಷಿತವಾಗಿ ಉಳಿದಿದ್ದರೆ, ಅದು ಪೋಲೆಂಡ್‌ ಆಗಿತ್ತು. ‘ತನ್ನ ದೇಶದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನ ವಲಸಿಗನಿಗೆ ಆಶ್ರಯ ನೀಡುವುದಿಲ್ಲ’ ಎನ್ನುವ ನಿಲುವನ್ನು ಅದು ಮೊದಲ ದಿನದಿಂದಲೇ ತೆಗೆದುಕೊಂಡಿತ್ತು. ಇದೆಲ್ಲದರ ಮೇಲೆ ಪ್ರತಿಕ್ರಿಯೆಗಳು ವ್ಯಕ್ತವಾಗುವುದು ನಿರೀಕ್ಷಿತವೇ ಆಗಿತ್ತು ಮತ್ತು ಹಾಗೆಯೇ ಆಯಿತು. ಫ್ರಾನ್ಸ್‌, ಜರ್ಮನಿ, ಇಟಲಿ ಅಥವಾ ಇತರ ದೇಶಗಳಲ್ಲಿ ಈ ಮತಾಂಧರ ವಿರುದ್ಧ ಸ್ಥಳೀಯ ಜನರು ರಸ್ತೆಗಿಳಿದರು. ತೀವ್ರ ಪ್ರತಿಭಟನೆ ಆರಂಭಿಸಿದರು.

೩. ಮುಸಲ್ಮಾನ ವಲಸಿಗರನ್ನು ಬಹಿರಂಗವಾಗಿ ವಿರೋಧಿಸುವ ರಾಜಕೀಯ ಪಕ್ಷಗಳಿಗೆ ಜನರಿಂದ ಭಾರೀ ಬೆಂಬಲ

ಸ್ವಾಭಾವಿಕವಾಗಿ ಈ ಪ್ರತಿಕ್ರಿಯೆಯ ಪ್ರಭಾವ ಚುನಾವಣೆಗಳ ಫಲಿತಾಂಶಗಳ ಮೇಲೆ ಕಾಣಿಸಿಕೊಳ್ಳಲಾರಂಭಿಸಿದವು. ಯುರೋಪಿನ ಪ್ರಖರ ರಾಷ್ಟ್ರವಾದವು ಚುನಾವಣೆಯ ಫಲಿತಾಂಶದಲ್ಲಿ ಕಾಣಿಸಿಕೊಳ್ಳಲಾರಂಭವಾಯಿತು. ಜಾರ್ಜಿಯಾ ಮೆಲೋನಿಯ ‘ಬ್ರದರ್ಸ್ ಆಫ್‌ ಇಟಲಿ’ ಪಕ್ಷವು ಇಟಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಜಾರ್ಜಿಯಾ ಮೆಲೋನಿ ಪ್ರಧಾನಿಯಾಗಿ ಆಯ್ಕೆಯಾದರು. ನೆದರ್ಲೆಂಡ್ಸ್‌ನಲ್ಲಿ ‘ಪಾರ್ಟಿ ಫಾರ್‌ ಫ್ರೀಡಂ’ನ ಗೀರ್ಟ್ ವಿಲ್ಡರ್ಸ್ ನಿರ್ಣಾಯಕ ಪಾತ್ರದಲ್ಲಿ ಹೊರಹೊಮ್ಮಿದರು. ಕೆಲವು ಯುರೋಪಿಯನ್‌ ದೇಶಗಳಲ್ಲಿ, ರಾಷ್ಟ್ರೀಯತೆಯ ಬೆಂಬಲಿಗರು ಮತ್ತು ವಲಸೆ ಬಂದ ಮುಸಲ್ಮಾನರ ಗೂಂಡಾಗಿರಿಯನ್ನು ನಿಲ್ಲಿಸುವ ಬಗ್ಗೆ ಮಾತನಾಡುವವರು ಅಧಿಕಾರಕ್ಕೇರಿದರು.

ಇತ್ತೀಚೆಗೆ ಯುರೋಪಿಯನ್‌ ಪಾರ್ಲಿಮೆಂಟ್‌ ಚುನಾವಣೆಯ ಸಂದರ್ಭದಲ್ಲಿಯೂ ಇದೇ ಚಿತ್ರಣ ಬೆಳಕಿಗೆ ಬಂದಿತು.  ಯುರೋಪಿನಾದ್ಯಂತ, ಬಲಪಂಥದೆಡೆಗೆ ಒಲವಿರುವ ಒಕ್ಕೂಟ, ಯುಪಿಪಿ (ಯುರೋಪಿಯನ್‌ ಪೀಪಲ್ಸ್ ಪಾರ್ಟಿ), ೧೯೦ ಸ್ಥಾನಗಳೊಂದಿಗೆ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಅವರು ತಮ್ಮ ಪ್ರಣಾಳಿಕೆಯಲ್ಲಿ ಅನಧಿಕೃತ ವಲಸೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸುವ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವ ಭಾಷೆಯನ್ನು ಬಳಸಿದ್ದಾರೆ. ಇಟಲಿಯಲ್ಲಿ, ಜಾರ್ಜಿಯಾ ಮೆಲೋನಿಯವರ ಪಕ್ಷವು ಶೇಕಡಾ ೨೮.೮ ಮತಗಳೊಂದಿಗೆ ೨೪ ಸ್ಥಾನಗಳನ್ನು ಪಡೆದುಕೊಂಡಿದೆ, ಇದರಲ್ಲಿ ೨೦೧೯ ರ ಚುನಾವಣೆಗಿಂತ ಶೇ. ೧೪ ರಷ್ಟು ಹೆಚ್ಚಳವಾಗಿದೆ. ನೆದರ್ಲ್ಯಾಂಡ್ಸ್ (ಹಾಲೆಂಡ್) ನಲ್ಲಿ ‘ಪಿ.ವಿ.ವಿ.’ ಪಕ್ಷವು ಶೂನ್ಯದಿಂದ ೬ ಸ್ಥಾನಗಳಿಗೆ ಜಿಗಿದಿದೆ. (ಯುರೋಪಿನ ವಿವಿಧ ದೇಶಗಳಿಗೆ ತಮ್ಮ ಸ್ವಂತ ರಾಜ್ಯಗಳಂತೆ ಯುರೋಪಿಯನ್‌ ಸಂಸತ್ತಿನಲ್ಲಿ ವಿಭಿನ್ನ ಸ್ಥಾನಗಳಿವೆ.)

ಜರ್ಮನಿಯ ಫಲಿತಾಂಶಗಳು ಆಶ್ಚರ್ಯಕರವಾಗಿವೆ. ಜರ್ಮನ್‌ ಜನರು ತೀವ್ರ ಬಲಪಕ್ಷಗಳನ್ನು ಯೋಗ್ಯವೆಂದು ಪರಿಗಣಿಸುವುದಿಲ್ಲ; ಆದರೆ ಅದೇ ಸಮಯದಲ್ಲಿ, ಬಲಪಂಥೀಯ ‘ಎ.ಎಫ್‌.ಡಿ’ ಗೆ (ಆಲ್ಟರನೇಟಿವ ಫಾರ್‌ ಡೆಶಲ್ಯಾಂಡ’ಗೆ) ಶೇ.  ೧೫.೯೦ ಮತಗಳು ಸಿಕ್ಕಿದ್ದು, ಅದು ಎರಡನೇ ಸ್ಥಾನದ ಪಕ್ಷವಾಗಿ ಹೊರಬಂದಿತು. ಜರ್ಮನಿಯಲ್ಲಿ, ಬಲಪಂಥೀಯ ವಿಚಾರ ಸರಣಿಯ ಒಕ್ಕೂಟವು ಅತ್ಯಧಿಕ ಅಂದರೆ ೩೦ ಸ್ಥಾನಗಳನ್ನು ಪಡೆದುಕೊಂಡಿದೆ.

೪. ಯುರೋಪಿಯನ್‌ ಸಂಸತ್ತಿನ ಚುನಾವಣೆಯಲ್ಲಿ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಆಡಳಿತಾರೂಢ ಒಕ್ಕೂಟಕ್ಕೆ ಮುಖಭಂಗ

ನಿಜವಾದ ಪವಾಡ ಫ್ರಾನ್ಸ್‌ನಲ್ಲಿ ನಡೆದಿದೆ. ಅಲ್ಲಿ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಆಡಳಿತ ಪಕ್ಷಕ್ಕೆ ತೀವ್ರ ಮುಖಭಂಗವಾಯಿತು. ಯುರೋಪಿಯನ್‌ ಸಂಸತ್ತಿನಲ್ಲಿ ಒಟ್ಟು ೭೨೦ ಸದಸ್ಯರಿದ್ದಾರೆ. ಅದರಲ್ಲಿ ೮೧ ಸದಸ್ಯರು ಫ್ರಾನ್ಸ್‌ನಿಂದ ಚುನಾಯಿತರಾಗುತ್ತಾರೆ. ಈ ಬಾರಿ ಮ್ಯಾಕ್ರನ್‌ ಅವರ ಆಡಳಿತ ಪಕ್ಷವು ಕೇವಲ  ಶೇ.೧೪ ರಷ್ಟ ಮತಗಳನ್ನು ಪಡೆದು ೧೩ ಸ್ಥಾನಗಳಿಗೆ ಸಮಾಧಾನ ಪಡಬೇಕಾಯಿತು. ಮರೀನ್‌ ಲೆ ಪೆನ್‌ ಅವರ ‘ನ್ಯಾಷನಲ್‌ ರಾಲಿ ಪಾರ್ಟಿ’ ಶೇಕಡಾ ೩೧.೩೭ ಮತಗಳೊಂದಿಗೆ ೩೦ ಸ್ಥಾನಗಳನ್ನು ಪಡೆದುಕೊಂಡಿದೆ.  ನ್ಯಾಷನಲ್‌ ರ್ಯಾಲಿಯ ಪ್ರಸ್ತುತ ಜೋರ್ಡಾನ್‌ ಬಾರ್ಡಿಲ್ಲಾ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಮ್ಯಾಕ್ರನ್‌ ಅವರಿಗೆ ಈ ತೀರ್ಪು ಆಘಾತಕಾರಿಯಾಗಿತ್ತು; ಆದರೆ ಇದನ್ನು ಎದುರಿಸಲು ಅವರು ಅನಿರೀಕ್ಷಿತ ಹೆಜ್ಜೆ ಇಟ್ಟರು. ಅವರು ಸಂಸತ್ತನ್ನು ವಿಸರ್ಜಿಸಿದರು ಮತ್ತು ರಾಷ್ಟ್ರೀಯ ಮಧ್ಯಂತರ ಚುನಾವಣೆಗಳನ್ನು ಘೋಷಿಸಿದರು. ಈ ಚುನಾವಣೆಯ ಮೊದಲ ಹಂತ ಜೂನ್‌ ೩೦ ರಂದು ಮತ್ತು ಎರಡನೇ ಹಂತ ಜುಲೈ ೭ ರಂದು ನಡೆಯಿತು.

ಫ್ರಾನ್ಸ್‌ನಲ್ಲಿ ಜುಲೈ ೨೬ ರಿಂದ ಪ್ರಾರಂಭವಾಗಲಿರುವ ಒಲಿಂಪಿಕ್ಸ್  ಕ್ರೀಡೆಗಳ ಬಗ್ಗೆ ಕಲ್ಪನೆ ಮಾಡಬಹುದು. ವಿಶೇಷವಾಗಿ ಅದು ಪ್ಯಾರಿಸ್‌ನಲ್ಲಿ ಆಗಸ್ಟ್ ೧೧ ರ ವರೆಗೆ ನಡೆಯುವುದು. ಅಂದರೆ ಫ್ರಾನ್ಸ್ ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದನ್ನು ನಾವು  ಊಹಿಸಬಹುದು. ಪ್ರಸ್ತುತ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಬಲಪಂಥೀಯ ಪಕ್ಷಗಳು ಮುಂದಿರುವುದು ಕಂಡುಬರುತ್ತಿದೆ. ಲೆ ಪೆನ್‌ ಇವರು ಒಂದು ವೇಳೆ ಅವರ ಪಕ್ಷವು ಚುನಾವಣೆಯಲ್ಲಿ ಗೆದ್ದರೆ, ಜೋರ್ಡಾನ್‌ ಬಾರ್ಡೆಲ್ಲಾ ರಾಷ್ಟ್ರಾಧ್ಯಕ್ಷರಾಗುತ್ತಾರೆ ಎಂದು ಘೋಷಿಸಿದ್ದಾರೆ.  ಪ್ರಸ್ತುತ, ಫ್ರಾನ್ಸ್‌ನಲ್ಲಿ ಬಲ, ಮಧ್ಯಮ ಮತ್ತು ಕಮ್ಯುನಿಸ್ಟ್ ಸೈದ್ಧಾಂತಿಕ ಪಕ್ಷಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಎರಿಕ್‌ ಸಿಯೊಟ್ಟಿ ಅವರು ಪ್ರಬಲ ಬಲಪಂಥೀಯ ಒಕ್ಕೂಟಕ್ಕೆ ಸೇರುವ ಉದ್ದೇಶವನ್ನು ಪ್ರಕಟಿಸಿದಾಗ, ಇತರ ಸದಸ್ಯರು ಅವರನ್ನು ಪಕ್ಷದಿಂದ ತೆಗೆದರು; ಆದರೆ ಬಳಿಕ ನ್ಯಾಯಾಲಯ ತನ್ನ ನಿರ್ಣಯವನ್ನು ಬದಲಾಯಿಸಿತು. ಸಿಯೋಟ್ಟಿ ಪಕ್ಷದ ಅಧ್ಯಕ್ಷರೆಂದು ಮುಂದುವರೆದರು. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮೈತ್ರಿಕೂಟಗಳು ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಿವೆ ಮತ್ತು ಇದರಿಂದ ಗಲಭೆಗಳು ನಡೆಯುತ್ತಿವೆ.

೫. ಯುರೋಪಿನ ಇಸ್ಲಾಮೀಕರಣದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿ

ಹೀಗಿದ್ದರೂ, ಫ್ರಾನ್ಸ್‌ನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅವರಿಗೆ ವಲಸಿಗರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗುತ್ತದೆ ಮತ್ತು ಮುಸಲ್ಮಾನ ವಲಸಿಗರ ಚಟುವಟಿಕೆಗಳನ್ನು ನಿಯಂತ್ರಿಸಬೇಕಾಗುತ್ತದೆ. ಯುರೋಪಿನಲ್ಲಿ ಮುಸಲ್ಮಾನ ವಲಸಿಗರ ಬಗ್ಗೆ ಕೆಲವೇ ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಮಾತನಾಡುತ್ತಿವೆ. ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಈ ದೇಶಗಳಲ್ಲಿ ಒಂದು ಅಥವಾ ಎರಡು ಪಕ್ಷಗಳು ಮಾತ್ರ ಯುರೋಪ್‌ನ್ನು ಇಸ್ಲಾಮೀಕರಣದಿಂದ ರಕ್ಷಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿವೆ.  ಹೆಚ್ಚಿನ ಪಕ್ಷಗಳು ಈ ಸಮಸ್ಯೆಯ ಬಗ್ಗೆ ಪ್ರತ್ಯಕ್ಷವಾಗಿ ಮಾತನಾಡುತ್ತಿವೆ; ಆದರೆ ಮಾತನಾಡದೆಯೂ ಉದ್ದೇಶ ಸ್ಪಷ್ಟವಾಗುತ್ತದೆ. ಇಸ್ಲಾಮೀಕರಣದ ವಿರುದ್ಧ ಯೂರೋಪಿನಲ್ಲಿ ಭಾರೀ ಜನಜಾಗೃತಿ ನಡೆದಿದೆ.

ಯುರೋಪಿಯನ್‌ ರಾಷ್ಟ್ರಗಳಿಗೆ ಎರಡು ಪ್ರಮುಖ ಸಮಸ್ಯೆಗಳಿವೆ. ವಲಸಿಗರ ವಿರುದ್ಧ ನಿಲುವನ್ನು ತಾಳಲು ಅವರಿಂದಾಗುವುದಿಲ್ಲ ಮತ್ತು ಅವರಿಗೆ ಅದು ಸಾಧ್ಯವೂ ಇಲ್ಲ. ಜರ್ಮನಿ, ಡೆನ್ಮಾರ್ಕ್‌, ನಾರ್ವೆ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಕೆಲಸ ಮಾಡಲು ಮಾನವಶಕ್ತಿ ಅಗತ್ಯವಾಗಿದೆ. ವಲಸಿಗರಲ್ಲದೇ ಯುರೋಪ್‌ ಜೀವಿಸುವುದು ಕಷ್ಟವಾಗಿದೆ. ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ; ಆದರೆ ಅವರಿಗೆ ಮುಸ್ಲಿಂ ವಲಸಿಗರೊಂದಿಗೆ ಸಮಸ್ಯೆಗಳಿವೆ. ಅವರಿಗೆ ಒಳ್ಳೆಯ ವಲಸಿಗರು ಬೇಕಾಗಿದ್ದಾರೆ. ಇಲ್ಲಿಯೇ ವಿಷಯಗಳು ಜಟಿಲವಾಗುತ್ತವೆ.  ಇದು ೮೦ರ ದಶಕದಲ್ಲಿನ ಅಸ್ಸಾಂನ ‘ಬಹಿರಾಗತ್‌ ಹಟಾವೋ’ ಚಳವಳಿಯಂತೆಯೇ ಇದೆ. ಆಸ್ಸಾಂಗೆ ಬಾಂಗ್ಲಾದೇಶಿ ನುಸುಳುಕೋರರು ಬೇಡವಾಗಿದ್ದರು; ವಾಸ್ತವದಲ್ಲಿ, ಹೇಳಬೇಕೆಂದರೆ ಅವರ ಹೋರಾಟವು ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರ ವಿರುದ್ಧವಾಗಿತ್ತು; ಆದರೆ ‘ಬಹಿರಾಗತ’ (ಹೊರಗಿನವರು) ವಿರುದ್ಧ ಚಳುವಳಿ ಮುಂದುವರೆಯಿತು. ಅಂದರೆ ಎಲ್ಲ ವಲಸಿಗರ ವಿರುದ್ಧವಾಗಿತ್ತು ಅಂದರೆ, ಬಾಂಗ್ಲಾದೇಶದಿಂದ ನಿರ್ವಸಿತರಾಗಿ ಬಂದಿರುವ ಹಿಂದೂಗಳಾಗಿರಲಿ ಅಥವಾ ರಾಜಸ್ಥಾನದಿಂದ ಅನೇಕ ತಲೆಮಾರುಗಳಿಂದ ವ್ಯಾಪಾರಕ್ಕಾಗಿ ಬಂದ ಮಾರ್ವಾಡಿ ಸಮುದಾಯವಿರಲಿ. ಮುಂದೆ ಅವಿರತ ಪ್ರಯತ್ನಗಳ ಮೂಲಕ, ಅಸ್ಸಾಂನ ಜನರಿಗೆ ‘ಬಹಿರಾಗತ’  (ಹೊರಗಿನಿಂದ ಬಂದವರ) ಪರಿಕಲ್ಪನೆಯು ಸ್ಪಷ್ಟವಾಯಿತು. ಇಂದು, ಫ್ರಾನ್ಸ್ ಸೇರಿದಂತೆ ಹೆಚ್ಚಿನ ಯುರೋಪಿಯನ್‌ ದೇಶಗಳಲ್ಲಿ  ಇದೇ ಪರಿಸ್ಥಿತಿಯಿದೆ.

 ೬. ಇಸ್ಲಾಂನಿಂದಾಗಿ ಯುರೋಪ್‌ ಮಗ್ಗಲು ಬದಲಾಯಿಸುತ್ತಿದೆ(?)

ಯುರೋಪಿನ ಎರಡನೇ ಸಮಸ್ಯೆ (ಇದು ಹೆಚ್ಚಾಗಿ ಜಾಗತಿಕವಾಗಿದೆ), ಅಂದರೆ, ಮುಸಲ್ಮಾನ ವಲಸಿಗರ ಆಕ್ರಮಣಕಾರಿ ನೀತಿ, ಅವರ ಉಪದ್ರವ ಮತ್ತು ಗೂಂಡಾಗಿರಿಯನ್ನು ಯುರೋಪಿನ ಮುಸಲ್ಮಾನ ಚಿಂತಕರು ವಿರೋಧಿಸುವುದಿಲ್ಲ. ಈ ವಿಷಯದ ಬಗ್ಗೆ ಸಾಮಾನ್ಯ ಯುರೋಪಿಯನ್‌ ಜನರಲ್ಲಿ ಬಹಳ ಕೋಪವಿದೆ. ಮುಸಲ್ಮಾನರು ನಡೆಸಿದ ಹಿಂಸಾಚಾರದ ವಿರುದ್ಧ ಪ್ರತಿಭಟಿಸದಿರುವುದು ಎಂದರೆ ಇದನ್ನು ಎಲ್ಲಾ ಮುಸಲ್ಮಾನರ ನಿರ್ವಿವಾದ ಒಮ್ಮತವೆಂದು ಪರಿಗಣಿಸಲಾಗುತ್ತಿದೆ, ಇದರಿಂದ ಸಾಮಾನ್ಯ ಯುರೋಪಿಯನ್‌ ನಾಗರಿಕರಿಗೆ ತೊಂದರೆಯಾಗುತ್ತಿದೆ. ಒಂದು ವಿಷಯ ಖಚಿತ, ಯುರೋಪ್‌ ಬದಲಾಗುತ್ತಿದೆ(?). ಮತ್ತು ಇದಕ್ಕೆ ಇಸ್ಲಾಂ ಮುಖ್ಯ ಕಾರಣವಾಗಿದೆ. ಅದರ ಪರಿಣಾಮ ಏನಾಗಬಹುದು ಎನ್ನುವುದನ್ನು ಕಾಲವೇ ಹೇಳುವುದು.!’

– ಶ್ರೀ. ಪ್ರಶಾಂತ ಪೋಳ, ರಾಷ್ಟ್ರಚಿಂತಕ, ಅಭಿಯಂತ ಮತ್ತು ಬರಹಗಾರ, ಮಧ್ಯಪ್ರದೇಶ.

(ಆಧಾರ : ಶ್ರೀ. ಪ್ರಶಾಂತ ಪೋಳ ಇವರ ಫೇಸ್‌ ಬುಕ್)