ಮಣಿಪುರ: ಶಾಂತಿ ಒಪ್ಪಂದದ ಬಳಿಕ ಮತ್ತೆ ಮೈತೆಯಿ ಮತ್ತು ಹಮಾರದಿಂದ ಹಿಂಸಾಚಾರ !

ಇಂಪಾಲ್ – ಮಣಿಪುರದಲ್ಲಿನ ಜಿರಿಬಾಮದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಮೈತೆಯಿ ಮತ್ತು ಹಮಾರ ಜನಾಂಗದ ನಡುವೆ ಇತ್ತೀಚಿಗೆ ಶಾಂತಿ ಒಪ್ಪಂದವಾಗಿತ್ತು. ಈ ಒಪ್ಪಂದದ ನಂತರ ಕೇವಲ ೨೪ ಗಂಟೆಗಳಲ್ಲಿ ಜಿರಿಬಾಮದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ. ಜಿರಿಬಾಮದಲ್ಲಿನ ಮೈತೆಯಿ ಕಾಲನಿಯಲ್ಲಿ ಗುಂಡು ಹಾರಿಸಲಾಗಿದೆ. ಲಾಲಪಾಣಿ ಗ್ರಾಮದಲ್ಲಿ ಒಂದು ಮನೆಗೆ ಬೆಂಕಿ ಹಚ್ಚಲಾಗಿದೆ.

ಮೈತೆಯಿ ಮತ್ತು ಹಮಾರ ಜನಾಂಗದ ನಡುವೆ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಹಿಂಸಾಚಾರದ ನಂತರ ಮೊದಲ ಬಾರಿಗೆ ಎರಡು ಜನಾಂಗದವರು ಜಿರಿಬಾಮ ಜಿಲ್ಲೆಯಮಟ್ಟಿಗೆ ಶಾಂತಿ ಕಾಪಾಡುವುದನ್ನು ಒಪ್ಪಿಕೊಂಡಿದ್ದರು. ಆಗಸ್ಟ್ ೧ರ ಬೆಳಿಗ್ಗೆ ಮೈತೆಯಿ ಮತ್ತು ಹಮಾರ ಜನಾಂಗದವರ ಸಭೆ ನಡೆಸಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದ ಪ್ರಕಾರ ಜಿರಿಬಾಮ ಜಿಲ್ಲೆಯಲ್ಲಿ ಅಗ್ನಿ ಅವಘಡ ಮತ್ತು ಗುಂಡಿನ ದಾಳಿಯಯನ್ನು ತಡೆಯುವುದಕ್ಕಾಗಿ ಎರಡು ಪಕ್ಷದವರು ಸುರಕ್ಷಾ ಸಿಬ್ಬಂದಿಗೆ ಸಹಾಯ ಮಾಡುವರು ಮತ್ತು ಪರಿಸ್ಥಿತಿ ಮೊದಲಿನಂತೆ ತಿಳಿಗೊಳಿಸುವ ಕಾರ್ಯ ಮಾಡುವರೆಂದು ನಿಶ್ಚಯಿಸಲಾಗಿತ್ತು. ಈ ಒಪ್ಪಂದದ ನಂತರ ಆಗಸ್ಟ್ ೨ರ ರಾತ್ರಿ ಸಶಸ್ತ್ರ ಜನರಿಂದ ಗ್ರಾಮದಲ್ಲಿನ ಒಂದು ಮನೆಗೆ ಬೆಂಕಿ ಹಚ್ಚಲಾಯಿತು ಮತ್ತು ಗುಂಡಿನ ದಾಳಿ ನಡೆಸಲಾಯಿತು. ಈ ಘಟನೆಯ ನಂತರ ಈ ಕ್ಷೇತ್ರದಲ್ಲಿ ಸುರಕ್ಷಾ ದಳದ ಸೈನಿಕರನ್ನು ನೇಮಕ ಮಾಡಲಾಗಿದೆ.

ಜಿರಿಬಾಮ ಜಿಲ್ಲೆಯಲ್ಲಿ ಈ ವರ್ಷ ಜೂನ್ ನಲ್ಲಿ ಹೊಲವೊಂದರಲ್ಲಿ ಓರ್ವ ರೈತನ ಮೃತದೇಹ ಕಂಡು ಬಂದ ಬಳಿಕ ಹಿಂಸಾಚಾರ ಆರಂಭವಾಗಿತ್ತು. ಎರಡು ಪಕ್ಷದವರು ನಡೆಸಿದ ಅಗ್ನಿ ಅವಘಡದ ಘಟನೆಯಿಂದ ಸಾವಿರಾರು ಜನರು ತಮ್ಮ ಮನೆಗಳನ್ನು ಬಿಟ್ಟು ನಿರಾಶ್ರಿತರ ವಸತಿಗೆ ಹೋಗಬೇಕಾಯಿತು.