ತನ್ನ ದೇಶ, ರಾಜಕಾರಣಿಗಳ ವಿರುದ್ಧ ಮಾತನಾಡಿದರೆ ಕಂಬಿ ಏಣಿಸಬೇಕಾಗಬಹುದು; UAE ಇಂದ ಪಾಕಿಸ್ತಾನಿ ನಾಗರಿಕರಿಗೆ ತಾಕಿತು !

ತಮ್ಮ ದೇಶಕ್ಕೆ ಬರುವ ಪಾಕಿಸ್ತಾನಿ ನಾಗರಿಕರಿಗೆ ಎಚ್ಚರಿಕೆ ನೀಡಿದ ಸಂಯುಕ್ತ ಅರಬ್ ಎಮಿರೇಟ್ಸ್ (UAE)

ಕರಾಚಿ (ಪಾಕಿಸ್ತಾನ) – ಸಂಯುಕ್ತ ಅರಬ್ ಎಮಿರೇಟ್ಸ್ ನ ಕರಾಚಿಯಲ್ಲಿರುವ ರಾಯಭಾರಿ ಬಖಿತ್ ಅತೀಕ್ ಅಲ್-ರೆಮಿತಿ ಅವರು ತಮ್ಮ ದೇಶದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ನಾಗರಿಕರಿಗೆ ತಮ್ಮ ದೇಶದ ಬಗ್ಗೆ, ಅಲ್ಲಿನ ಸಂಸ್ಥೆಗಳು ಅಥವಾ ರಾಜಕಾರಣಿಗಳ ವಿರುದ್ಧ ನಕಾರಾತ್ಮಕ ಪ್ರಚಾರವನ್ನು ತಪ್ಪಿಸುವಂತೆ ಕೇಳಿಕೊಂಡಿದ್ದಾರೆ. ನಕಾರಾತ್ಮಕ ಪ್ರಚಾರ ಮಾಡಿದವರಿಗೆ ಜೈಲು ಶಿಕ್ಷೆಯೂ ಆಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಯುಎಇನಲ್ಲಿ 18 ಲಕ್ಷ ಪಾಕಿಸ್ತಾನಿಗಳು ವಾಸಿಸುತ್ತಾರೆ.

1. ಅಲ್ ರೆಮಿತಿಯವರು ಮುಂದೆ ಮಾತನಾಡಿ, ಸಂಯುಕ್ತ ಅರಬ್ ಎಮಿರೇಟ್ಸ್ ನಲ್ಲಿ ಸಿಸುತ್ತಿರುವ ಅಥವಾ ಭೇಟಿ ನೀಡುವ ಪಾಕಿಸ್ತಾನಿ ಜನರಿಂದ ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ವಿರುದ್ಧ ನಕಾರಾತ್ಮಕ ಪ್ರಚಾರ ಮಾಡಲಾಗುತ್ತಿದೆ. ಅಂತಹ ಅನೇಕರನ್ನು ಬಂಧಿಸಲಾಗಿದ್ದು, ಅವರಿಗೆ 15 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ. 5ಕ್ಕಿಂತ ಹೆಚ್ಚು ಪಾಕಿಸ್ತಾನಿಗಳಿಗೆ ಜೀವಾವಧಿ ಶಿಕ್ಷೆಯನ್ನು ಸಹ ವಿಧಿಸಲಾಗಿದೆ. ಬಹುತೇಕ ಜನರನ್ನು ಗಡೀಪಾರು ಮಾಡಲಾಗಿದೆ. ಇಂತಹ ಪಾಕಿಸ್ತಾನಿಗಳಿಗೆ ಯುಎಇ ವೀಸಾ(ದೇಶದಲ್ಲಿ ವಾಸಿಸಲು ಅನುಮತಿ)ನೀಡಲಾಗುವುದಿಲ್ಲ ಮತ್ತು ಅವರು ನಮ್ಮ ದೇಶಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ.

2. ಪಾಕಿಸ್ತಾನದಲ್ಲಿ, ಕೆಲವರು ಇಮ್ರಾನ್ ಖಾನ್ ಅವರ ಪರವಾಗಿದ್ದಾರೆ, ಇನ್ನೂ ಕೆಲವರು ನವಾಜ್ ಷರೀಫ್ ಅವರ ಪರವಾಗಿದ್ದಾರೆ. ಕೆಲವು ಜನರು ಸೇನೆಯ ಪರವಾಗಿದ್ದರೆ, ಇನ್ನು ಕೆಲವರು ಸೇನೆಯ ವಿರುದ್ಧ ನಿಂತಿದ್ದಾರೆ. ಇಂತವರು ಯುಎಇಗೆ ಹೋದಾಗ, ತಮ್ಮ ರಾಜಕೀಯ ಅಭಿಪ್ರಾಯವನ್ನು ಬಹಿರಂಗವಾಗಿ ಮಂಡಿಸುತ್ತಾರೆ. ಪಾಕಿಸ್ತಾನದಲ್ಲಿನ ರಾಜಕೀಯ ಭಿನ್ನಾಭಿಪ್ರಾಯಗಳು ಸಂಯುಕ್ತ ಅರಬ್ ಎಮಿರಾಟ್ಸ್ ವರೆಗೆ ತಲುಪಬಾರದು ಎಂಬುದೇ ನಮ್ಮ ಇಚ್ಛೆಯಾಗಿದೆ ಎಂದವರು ಸ್ಪಷ್ಟಪಡಿಸಿದರು.