ಕಾವಡ ಯಾತ್ರೆಯ ಮಾರ್ಗಗಳಲ್ಲಿ ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯಲು ಹಿಂದೂಗಳಿಂದ ಒಪ್ಪಿಗೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಕಾರರಿಗೆ ತಮ್ಮ ನಿಜವಾದ ಹೆಸರನ್ನು ಅಂಗಡಿಗಳ ಮೇಲೆ ಬರೆಯುವಂತೆ ಆದೇಶಿಸಿತ್ತು. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಾಲಯವು ಅದನ್ನು ಸ್ಥಗಿತಗೊಳಿಸಿ ಆದೇಶ ನೀಡಿತ್ತು. ಈ ಸಂದರ್ಭದಲ್ಲಿ, ಕಾವಡ ಯಾತ್ರೆಯ ಮಾರ್ಗಗಳಲ್ಲಿನ ಹಿಂದೂ ಅಂಗಡಿಕಾರರು ಸರಕಾರದ ಆದೇಶವನ್ನು ಸ್ವಾಗತಿಸಿದ್ದಾರೆ; ಏಕೆಂದರೆ ಈ ಪ್ರದೇಶಗಳಲ್ಲಿ ಹೆಚ್ಚಿನ ಅಂಗಡಿಯವರು ಮುಸಲ್ಮಾನರಾಗಿದ್ದಾರೆ.

1. ಕವಾಡ ಯಾತ್ರೆಯಲ್ಲಿ ಉಪಯೋಗಿಸುವ ರಥಗಳನ್ನು ತಯಾರಿಸುವ ದಿನೇಶ ಕುಮಾರ ಅವರು, ‘ಮಾ ಹರಸಿದ್ಧಿ ದೇವಿ ಫ್ಯಾಬ್ರಿಕೇಷನ್’ ಎಂಬ ಮಳಿಗೆ ಇದೆ. ಇದು ಗಾಜಿಯಾಬಾದನಲ್ಲಿದೆ. ಈಗ ಮುಸ್ಲಿಮರು ತಮ್ಮ ಹೆಸರನ್ನು ಬದಲಾಯಿಸಿಕೊಂಡು, ಈ ಉದ್ದಿಮೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಉದ್ದಿಮೆಯಲ್ಲಿ ತಮ್ಮ ಹಿಡಿತವನ್ನು ಬಲಪಡಿಸುತ್ತಿದ್ದಾರೆ. ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರನ್ನಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನನ್ನ ಗ್ರಾಹಕರು ಅವರ ಕಡೆಗೆ ಹೋಗುತ್ತಿದ್ದಾರೆ. ನನ್ನ ಮನೆಯಲ್ಲಿ ಇಬ್ಬರು ಸಹೋದರರಿದ್ದಾರೆ. ನಾವು ಮೂವರು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಆಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಮುಸಲ್ಮಾನರ ಮನೆಗಳಲ್ಲಿ ಅನೇಕ ಜನರಿರುತ್ತಾರೆ ಮತ್ತು ಅವರೇ ಅಂಗಡಿಗಳಲ್ಲಿ ಕೆಲಸ ಮಾಡುತ್ತಾರೆ. ಸರಕಾರದ ಆದೇಶದಿಂದ ನಮಗೆ ಲಾಭವಾಗುತ್ತಿದೆ. ಎಲ್ಲಾ ಜನರು ತಮ್ಮ ನಿಜವಾದ ಹೆಸರಿನಲ್ಲಿ ತಮ್ಮ ವ್ಯವಹಾರವನ್ನು ಮಾಡಬೇಕು ಎಂದು ಹೇಳಿದ್ದಾರೆ.

2. ಗಾಜಿಯಾಬಾದ-ಮೇರಠ ಮಾರ್ಗದಲ್ಲಿ ಢಾಬಾ ನಡೆಸುತ್ತಿರುವ ಶ್ರೀ. ಅಶ್ವನಿ ಸೈನಿಯವರು ಮಾತನಾಡಿ, ಒಬ್ಬ ಅಂಗಡಿಯ ಮಾಲೀಕನಾದ ನನಗೆ ಹೆಸರಿನಿಂದ ವಿವಾದ ನಿರ್ಮಾಣವಾಗಿರುವ ಕಾರಣ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಢಾಬಾದ ನಿಜವಾದ ಮಾಲೀಕರ ಹೆಸರನ್ನು ಬರೆಯಲು ಏನು ತೊಂದರೆ ? ಎಂದು ಕೇಲಿದ್ದಾರೆ.

3. ಮೇರಠ ಮಾರ್ಗದಲ್ಲಿನ ಭೋಜನಾಲಯ ನಡೆಸುತ್ತಿರುವ ರಾಮಕುಮಾರ ಚೌಹಾಣ ಇವರು ಮಾತನಾಡಿ, ಸರಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ದೆಹಲಿಯಿಂದ ಹರಿದ್ವಾರಕ್ಕೆ ಹೋಗುವ ಮಾರ್ಗದಲ್ಲಿ ಹೆಸರು ಬದಲಾವಣೆ ಮಾಡಿ ಢಾಬಾಗಳನ್ನು ನಡೆಸಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಸಾವರಕರ ಹೆಸರಿನ ಢಾಬಾ ಮುಚ್ಚಬೇಕಾಯಿತು!

ಮುಜಪ್ಪರ ನಗರ ಜಿಲ್ಲೆಯಲ್ಲಿ ಸಾವರಕರ ಹೆಸರಿನ ಢಾಬಾ ಮುಚ್ಚಬೇಕಾಯಿತು ಎಂಬುದು ಬೆಳಕಿಗೆ ಬಂದಿದೆ. ಈ ಢಾಬಾ ಮುಜಾಫರ್‌ನಗರ-ಮೀರತ್ ಹೆದ್ದಾರಿಯಲ್ಲಿರುವ ಸಕ್ಕರೆ ಕಾರ್ಖಾನೆಯ ಬಳಿ ಇತ್ತು. ಅದರ ಮಾಲೀಕ ಸತ್ಯ ಪ್ರಕಾಶ್ ಮಾತನಾಡಿ, ವೀರ ಸಾವರಕರ ಹೆಸರಿನಲ್ಲಿ ಢಾಬಾ ತೆರೆಯುವುದು ಗಿರಾಕಿಗೆ ಒಳ್ಳೆಯ ಊಟ-ಪಾನಿ ನೀಡಲು ಅಲ್ಲ, ದೇಶದ ಮಹಾನ್ ಕ್ರಾಂತಿಕಾರಿಗಳ ಹೆಸರನ್ನು ಪರಿಚಯಿಸುವುದಾಗಿತ್ತು; ಆದರೆ ನಿರ್ದಿಷ್ಟ ದೃಷ್ಟಿಕೋನ ಹೊಂದಿರುವ ಜನರು ಢಾಬಾದ ಹೆಸರನ್ನು ಇಷ್ಟಪಡಲಿಲ್ಲ. ಗಿರಾಕಿಗಳು ಢಾಬಾಕ್ಕೆ ಬರುವುದನ್ನು ನಿಲ್ಲಿಸಿದ್ದಲ್ಲದೆ, ಕಳ್ಳತನದಂತಹ ಘಟನೆಗಳೂ ನಡೆದಿವೆ. ಮುಜಾಫರ್‌ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಢಾಬಾಗಳು ನಕಲಿ ಹೆಸರಿನಲ್ಲಿ ನಡೆಯುತ್ತಿವೆ ಎಂದು ಹೇಳಿದ್ದಾರೆ.