Hindu Opposed Muslims Shops : ಹಿಂದೂ ಭಕ್ತರಿಗಾಗಿ ಮೀಸಲಿಟ್ಟ ಕಟ್ಟಡಗಳಲ್ಲಿ ಇತರೆ ಧರ್ಮದವರಿಗೆ ಅಂಗಡಿ ನೀಡಿಕೆ; ಹಿಂದೂ ಸಂಘಟನೆಗಳ ವಿರೋಧ !

ಧರ್ಮದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತರು.

ಪಾಲನಾಡು (ಆಂಧ್ರಪ್ರದೇಶ) – ಸಂತರು ಮತ್ತು ಭಕ್ತರಿಗೆ ವಾಸಿಸಲು ನಿರ್ಮಿಸಲಾಗಿರುವ ಕಟ್ಟಡದಲ್ಲಿ ಇತರೆ ಧರ್ಮದವರಿಗೆ ಅಂಗಡಿಗಳನ್ನು ನೀಡಿದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು ಮತ್ತು ಕಟ್ಟಡದ ಸುತ್ತಲಿರುವ ಇತರೆ ಧರ್ಮದವರನ್ನು ಕೂಡಲೇ ತೆರವುಗೊಳಿಸುವಂತೆ ಕೋರಿದ್ದಾರೆ.

1. 100 ವರ್ಷಗಳ ಹಿಂದೆ ಪಾಲನಾಡು ಜಿಲ್ಲೆಯ ಪಿಡುಗುರಾಲ್ಲಾ ಗ್ರಾಮದಲ್ಲಿ ದೊಡ್ಡ ಉದ್ಯಮಿಯೊಬ್ಬರು ಗ್ರಾಮಕ್ಕೆ ಬರುವ ಹಾಗೂ ತೀರ್ಥಕ್ಷೇತ್ರಕ್ಕೆ ತೆರಳುವ ಪೂಜ್ಯರಿಗೆ ಹಾಗೂ ಭಕ್ತರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಲು ಒಂದು ಕಟ್ಟಡವನ್ನು ನಿರ್ಮಿಸಿದ್ದರು.

2. ನಂತರ ಈ ಕಟ್ಟಡವನ್ನು ಸರ್ಕಾರದ ಧರ್ಮದಾಯ ಇಲಾಖೆ ವಶಕ್ಕೆ ಪಡೆಯಿತು. ಈ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಅಂಗಡಿಗಳನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಹರಾಜಿನ ಮೂಲಕ ಬಾಡಿಗೆಗೆ ನೀಡಲಾಗುತ್ತದೆ. ಈ ಹರಾಜಿನಲ್ಲಿ ಇತರೆ ಧರ್ಮದವರು ಪಾಲ್ಗೊಳ್ಳಲು ಅವಕಾಶವಿಲ್ಲ. ಅದೇ ರೀತಿ ಹಿಂದೂಗಳು ಹರಾಜಿನಲ್ಲಿ ಪಡೆದ ಅಂಗಡಿಯನ್ನು ಇತರೆ ಧರ್ಮದವರಿಗೆ ನೀಡುವಂತಿಲ್ಲ.

3. ಹೀಗಿರುವಾಗ, ಎರಡು ಅಂಗಡಿಗಳನ್ನು ಹಿಂದೂಗಳು ಹರಾಜಿನಲ್ಲಿ ಪಡೆದುಕೊಂಡು ಅದನ್ನು ಮುಸಲ್ಮಾನರಿಗೆ ನಡೆಸಲು ನೀಡಿದ್ದಾರೆ. (ಹಿಂದೂಗಳಿಗೆ ಪದೇ-ಪದೇ ಸರ್ವಧರ್ಮ ಸಮಾನತೆಯ ಔಷಧಿ ಕುಡಿಸುವುದರಿಂದ ಹಿಂದೂಗಳು ಇಂತಹ ಗಾಂಧಿಗಿರಿ ಮಾಡುತ್ತಾರೆ ಮತ್ತು ಭವಿಷ್ಯದಲ್ಲಿ ತಾವೇ ಕಷ್ಟವನ್ನು ಅನುಭವಿಸುತ್ತಾರೆ ಎಂಬುದು ಇತಿಹಾಸವಾಗಿದೆ- ಸಂಪಾದಕರು) ಇದಕ್ಕೆ ಹಿಂದೂ ಜನಜಾಗೃತಿ ಸಮಿತಿ, ರಾಷ್ಟ್ರೀಯ ಶಿವಾಜಿ ಸೇನಾ, ವಾನರಸೇನಾ ಮತ್ತು ಹಿಂದೂ ದೇವಸ್ಥಾನ ಪರಿರಕ್ಷಣ ಸಮಿತಿ ಮುಂತಾದ ಹಿಂದೂ ಸಂಘಟನೆಗಳು ಸಂಘಟಿತರಾಗಿ ತೀವ್ರ ಪ್ರತಿಭಟನೆ ನಡೆಸಿವೆ.

4. ಈ ಪ್ರತಿಭಟನೆಯ ಮೂಲಕ ಅಂಗಡಿ ನಡೆಸುವ ಮುಸಲ್ಮಾನರನ್ನು ತಕ್ಷಣವೇ ತೆರವುಗೊಳಿಸುವಂತೆ ಧರ್ಮದಾಯ ಇಲಾಖೆಗೆ ಮನವಿ ಮಾಡಲಾಗಿದೆ.

5. ಮುಂಬರುವ ತಿಂಗಳಿನಲ್ಲಿ ಅಂದರೆ ಅಗಸ್ಟ್ ತಿಂಗಳಲ್ಲಿ ಪುನಃ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದರಲ್ಲಿ ಇತರ ಧರ್ಮದವರಿಗೆ ಯಾವುದೇ ಪರಿಸ್ಥಿತಿಯಲ್ಲಿ ಅವಕಾಶ ನೀಡಬಾರದು ಮತ್ತು ಇಲಾಖೆಯಲ್ಲಿರುವ ಇತರೆ ಧರ್ಮದವರನ್ನು ಕೂಡಲೇ ತೆಗೆಯಬೇಕೆಂದು ಆಗ್ರಹ ಕೇಳಿ ಬಂದಿದೆ.

6. ಧರ್ಮದಾಯ ಇಲಾಖೆಯ ನಿಯಮಗಳ ವಿರುದ್ಧ ನಡೆದು ಓಲೈಸುವ ನೀತಿಯನ್ನು ಸ್ವೀಕರಿಸಿ ಅಲ್ಪಸಂಖ್ಯಾತರಿಗೆ ಅಂಗಡಿಗಳನ್ನು ನೀಡಿದರೆ ಎಲ್ಲ ಹಿಂದೂ ಸಂಘಟನೆಗಳು ಜೊತೆ ಸೇರಿ ರಾಜ್ಯಾದ್ಯಂತ ದೊಡ್ಡ ಪ್ರತಿಭಟನೆ ನಡೆಸುವವು ಎಂಬ ನಿರ್ಧಾರವನ್ನು ಈ ಸಮಯದಲ್ಲಿ ಕೈಕೊಳ್ಳಲಾಯಿತು.