17 ವರ್ಷದ ಯುವಕನಿಂದ ಚಾಕುವಿನಿಂದ ಹಲ್ಲೆ; ಇಬ್ಬರ 2 ಸಾವು, 11 ಜನರಿಗೆ ಗಾಯ

  • ಪ್ರಧಾನಮಂತ್ರಿ ಕೆಯರ್ ಸ್ಟಾರ್ಮರರಿಂದ ಸಂತಾಪ ವ್ಯಕ್ತ

  • ದಾಳಿಯ ಕಾರಣ ಇನ್ನೂ ಅಸ್ಪಷ್ಟ

ಲಂಡನ್ (ಬ್ರಿಟನ್‌) – ಬ್ರಿಟನ್‌ನ ಲಿವರ್‌ಪೂಲ್‌ನ ಸೌತ್‌ಪೋರ್ಟ್‌ನಲ್ಲಿ ಜುಲೈ 29 ರ ಸಂಜೆ ಸಂಭವಿಸಿದ ಘಟನೆಯಲ್ಲಿ 17 ವರ್ಷದ ಯುವಕನೊಬ್ಬ ಚಾಕುವಿನಿಂದ ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಚಿಕ್ಕ ಮಕ್ಕಳಾಗಿದ್ದಾರೆ. ಈ ದಾಳಿ ನಡೆಸಿದವನನ್ನು ಬಂಧಿಸಲಾಗಿದ್ದು, ದಾಳಿಯ ಹಿಂದಿನ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಆದಾಗ್ಯೂ ಪೊಲೀಸರು ಇದು ಜಿಹಾದಿ ಭಯತೋತ್ಪಾದಕ ದಾಳಿ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

1. ಬ್ರಿಟನ್‌ನಲ್ಲಿ ಹೊಸದಾಗಿ ಚುನಾಯಿತರಾದ ಪ್ರಧಾನಿ ಕೆಯರ್ ಸ್ಟಾರ್ಮರ್ ಅವರು ಸೌತ್‌ಪೋರ್ಟ್‌ನಲ್ಲಿ ನಡೆದ ಈ ಘಟನೆಯನ್ನು ‘ಭಯಾನಕ’ ಮತ್ತು ‘ಆಘಾತಕಾರಿ’ ಎಂದು ಖಂಡಿಸಿದ್ದಾರೆ.

2. ಬ್ರಿಟಿಷ್ ಗೃಹ ಕಾರ್ಯದರ್ಶಿ ಕೂಪರ್ ಮತ್ತು ಲಿವರ್‌ಪೂಲ್ ಮಹಾಪೌರ ಸ್ಟೀವ್ ರೊಥೆರಾಮ್ ಅವರು ಕೂಡ ಈ ಘಟನೆಯ ಬಗ್ಗೆ ನಿಷೇಧ ವ್ಯಕ್ತಪಡಿಸಿದ್ದಾರೆ.

3. ಪ್ರತ್ಯಕ್ಷದರ್ಶಿ ವ್ಯಕ್ತಿಯೊಬ್ಬರು ಮಾತನಾಡಿ, 6 ರಿಂದ 11 ವರ್ಷದೊಳಗಿನ ಮಕ್ಕಳು ನೃತ್ಯ ಮತ್ತು ಯೋಗ ಕಾರ್ಯಕ್ರಮದ ಕಾರ್ಯಾಗಾರಕ್ಕೆ ಬಂದಿದ್ದರು. ಸ್ವಲ್ಪ ಸಮಯದ ಬಳಿಕ ನನಗೆ ಆಕಸ್ಮಿಕವಾಗಿ 8 ರಿಂದ 10 ಮಕ್ಕಳು ರಕ್ತದಲ್ಲಿ ಮುಳುಗಿರುವ ಅವಸ್ಥೆಯಲ್ಲಿ ಓಡುತ್ತಿರುವುದು ಕಂಡು ಬಂದಿತು. ಕಾರ್ಯಾಗಾರದೊಳಗೆ ಏನು ನಡೆಯಿತು ಎಂದು ತಿಳಿಯಲಿಲ್ಲ.

4.ಘಟನೆಯ ಸ್ಥಳದ ಬಳಿ ವಾಸಿಸುವ ಕಾಲಿನ್ ಪೆರಿ ಎಂಬವರು ಮಾತನಾಡಿ, ದಾಳಿ ನಡೆಸಿದವನು ಬಹುತೇಕ ಹಸಿರು ಅಂಗಿ ಮತ್ತು ಫೇಸ್ ಮಾಸ್ಕ್ ಧರಿಸಿದ್ದನು ಎಂದು ಹೇಳಿದರು.

5. ಪೊಲೀಸರು ನೀಡಿರುವ ಮಾಹಿತಿಯನುಸಾರ, ದಾಳಿಕೋರನು 8 ಕಿಲೋಮೀಟರ್ ದೂರದಲ್ಲಿರುವ ಗ್ರಾಮವೊಂದರ ವಾಸಿಯಾಗಿದ್ದಾನೆ.