ಕೇವಲ ಮಹಿಳಾ ವೈದ್ಯರಿಗೆ ಲೈಂಗಿಕ ದೌರ್ಜನ್ಯಕ್ಕೊಳಗಾದವರ ವೈದ್ಯಕೀಯ ಪರೀಕ್ಷೆಗೆ ಅನುಮತಿ ನೀಡಿ ! – ಕರ್ನಾಟಕ ಹೈಕೋರ್ಟ್

ಕೇಂದ್ರ ಸರಕಾರಕ್ಕೆ ‘ಭಾರತೀಯ ನಾಗರಿಕ ಭದ್ರತಾ ಸಂಹಿತೆ’ಯಲ್ಲಿ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಆದೇಶ !

ಕರ್ನಾಟಕ ಹೈಕೋರ್ಟ್

ಬೆಂಗಳೂರು – ವಯಸ್ಕರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಖಾಸಗಿತನದ ಹಕ್ಕನ್ನು ರಕ್ಷಿಸುವ ದೃಷಟ್ಇಯಿಂದ ಮಹಿಳಾ ವೈದ್ಯರಿಗೆ ಮಾತ್ರ ವೈದ್ಯಕೀಯ ಪರೀಕ್ಷೆ ನಡೆಸಲು ‘ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆ’ಯಲ್ಲಿ ತಿದ್ದುಪಡಿ ತರುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಲೈಂಗಿಕ ದೌರ್ಜನ್ಯದ ಆರೋಪಿ ಬಿಹಾರದ ಅಜಯ ಕುಮಾರ್ ಬೆಹೆರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ಪೀಠವು ಕೇಂದ್ರ ಸರಕಾರಕ್ಕೆ ಈ ಸಲಹೆ ನೀಡಿದೆ.

1. ಈ ಸಮಯದಲ್ಲಿ ನ್ಯಾಯಾಲಯವು, “ಭಾರತೀಯ ನಾಗರಿಕ ಭದ್ರತಾ ಸಂಹಿತೆ’ಯ ಸೆಕ್ಷನ್ 184 ಇದು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ವಯಸ್ಕ ಮಹಿಳೆಯರ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದೆ. ಇದರಲ್ಲಿ ‘ಸಂತ್ರಸ್ತರನ್ನು ಪುರುಷ ಅಥವಾ ಮಹಿಳಾ ವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಲಾಗುವುದು’, ಎಂದು ಹೇಳಲಾಗಿದೆ. ಆದ್ದರಿಂದ, ಈ ಸೆಕ್ಷನ್ ಅನ್ನು ಸರಿಯಾಗಿ ತಿದ್ದುಪಡಿ ಮಾಡುವವರೆಗೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂತ್ರಸ್ತ ಮಹಿಳೆಯರ ವೈದ್ಯಕೀಯ ಪರೀಕ್ಷೆಯನ್ನು ನೋಂದಾಯಿತ ಮಹಿಳಾ ವೈದ್ಯಾಧಿಕಾರಿಗಳಿಂದ ಮಾಡುವಂತೆ ನೋಡಿಕೊಳ್ಳಬೇಕು’, ಎಂದು ಹೇಳಿದೆ.

2. ಲೈಂಗಿಕ ದೌರ್ಜನ್ಯಕ್ಕೊಳಗಾದವರ ಪರೀಕ್ಷೆಯನ್ನು ಮಹಿಳಾ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ‘ಪುರುಷರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯು ಪುರುಷ ವೈದ್ಯಾಧಿಕಾರಿಗಳಿಂದಲೇ ಏಕೆ ದೈಹಿಕ ಪರೀಕ್ಷೆಯನ್ನು ಸಹಿಸಬೇಕು ?’, ಎಂದು ಹೈಕೋರ್ಟ್ ಪ್ರಶ್ನೆಯನ್ನು ಕೇಳಿದೆ.

3. ‘ಕೇಂದ್ರ ಮತ್ತು ರಾಜ್ಯ ಸರಕಾರಗಳು ತಕ್ಷಣವೇ ಈ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಮತ್ತು ‘ಭಾರತೀಯ ನಾಗರಿಕ ಭದ್ರತಾ ಸಂಹಿತೆ’ಯ ಸೆಕ್ಷನ್ 184 ಅನ್ನು ತಿದ್ದುಪಡಿ ಮಾಡಬೇಕು’, ಎಂದು ಪೀಠವು ನಿರ್ದೇಶಿಸಿದೆ.

ಸಂಪಾದಕೀಯ ನಿಲುವು

* ಕೋರ್ಟ್ ಏಕೆ ಹೇಳಬೇಕು? ಸರಕಾರವೇ ಇದನ್ನು ಸರಿಪಡಿಸುವುದು ನಿರೀಕ್ಷೆ !