ಜಾಗತಿಕ ಅಭಿವೃದ್ಧಿಯಲ್ಲಿ ಭಾರತದ ಸಹಭಾಗ ನಿವ್ವಳ ಶೇ. 16 ರಷ್ಟು ಹೆಚ್ಚಾಗಿದೆ ! – ಪ್ರಧಾನ ಮಂತ್ರಿ

ಕಳೆದ 10 ವರ್ಷಗಳಲ್ಲಿ 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ !

ನವದೆಹಲಿ – ನನ್ನ ದೇಶ ಎಂದಿಗೂ ಹಿಮ್ಮೆಟ್ಟಲು ಸಾಧ್ಯವಿಲ್ಲ. ನಾನು ‘CII’ (ಭಾರತೀಯ ಕೈಗಾರಿಕಾ ಒಕ್ಕೂಟ) ಗೆ ಮನಃಪೂರ್ವಕವಾಗಿ ಧನ್ಯವಾದಗಳನ್ನು ವ್ಯಕ್ತಪಡಿಸುತ್ತೇನೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ನೀವು ತುಂಬಾ ಕಾಳಜಿ ವಹಿಸಿದ್ದೀರಿ ಎಂದು ನನಗೆ ನೆನಪಿದೆ. ಪ್ರತಿ ಚರ್ಚೆಯ ಕೇಂದ್ರಬಿಂದು ‘ಭಾರತ ಹೇಗೆ ಬೆಳೆಯುತ್ತದೆ!’ ಎಂದೇ ಇರುತ್ತಿತ್ತು. ಇಂದು ಜಾಗತಿಕ ಅಭಿವೃದ್ಧಿಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಶೇ.16ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕಳೆದ 10 ವರ್ಷಗಳಲ್ಲಿ 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೇಳಿಕೆ ನೀಡಿದರು. ಅವರು ಇಲ್ಲಿನ ವಿಜ್ಞಾನ ಭವನದಲ್ಲಿ ‘ಜರ್ನಿ ಟೂ ವಿಕಸಿತ ಭಾರತ (ಡೆವಲಪ್ಡ್ ಇಂಡಿಯಾ): 2024-25’ರ ಹೆಸರಿನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಭಾರತೀಯ ಉದ್ಯೋಗ ಮಹಾಸಂಘವು ಆಯೋಜಿಸಿತ್ತು.

ಪ್ರಧಾನಮಂತ್ರಿಯವರು ಮಾತು ಮುಂದುವರೆಸಿ,

1. ಇಂದು ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ ಮತ್ತು ನಾವು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ದಿನ ದೂರವಿಲ್ಲ ! ನನ್ನ ಮೂರನೇ ಅಧಿಕಾರಾವಧಿಯಲ್ಲಿ ದೇಶವು ಮೂರನೇ ಆರ್ಥಿಕತೆಯಾಗಲಿದೆ. ಆರ್ಥಿಕತೆಯ ವಿವರಗಳನ್ನು ಸರಕಾರ ಪ್ರಕಟಿಸಿದೆ.

2. ಬಜೆಟ್ 16 ಸಾವಿರ ಕೋಟಿಯಿಂದ 48 ಸಾವಿರ ಕೋಟಿಗೆ ತಲುಪಿದೆ.

3. ಈ ಹಿಂದೆ ಬಜೆಟ್‌ನಲ್ಲಿನ ಘೋಷಣೆಗಳು ಜಾರಿಯಾಗಿರಲಿಲ್ಲ. (ಹಿಂದಿನ ಸರಕಾರಗಳು ಕೇವಲ ಘೋಷಣೆಗಳನ್ನು ಮಾಡುತ್ತಿದ್ದರು. ಹಿಂದಿನ ಸರ್ಕಾರಗಳು ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸಲು ಗಮನಹರಿಸಲಿಲ್ಲ. ನಾವು 10 ವರ್ಷಗಳಲ್ಲಿ ಈ ಪರಿಸ್ಥಿತಿಯನ್ನು ಬದಲಾಯಿಸಿದ್ದೇವೆ.

4. ದೇಶದ ನಾಗರಿಕರ ಜೀವನಮಟ್ಟವನ್ನು ಹೆಚ್ಚಿಸಲು ನಾವು ಒತ್ತು ನೀಡುತ್ತಿದ್ದೇವೆ. ನಾವು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗದತ್ತ ಗಮನ ಹರಿಸಿದ್ದೇವೆ. ಬಜೆಟ್ ನಲ್ಲಿ ಘೋಷಿಸಿರುವ ‘ಪ್ರಧಾನಿ ಪ್ಯಾಕೇಜ್’ನಿಂದ 4 ಕೋಟಿ ಯುವಕರಿಗೆ ಲಾಭವಾಗಲಿದೆ ಎಂದು ಹೇಳಿದರು.

ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ ಹೊಂದಿರುವ ಏಕೈಕ ದೇಶ ಭಾರತ ! – ಪ್ರಧಾನ ಮಂತ್ರಿ

ಕರೋನಾ ಸಾಂಕ್ರಾಮಿಕದಂತಹ ಅನಿಶ್ಚಿತತೆಯ ಸಮಯದಲ್ಲಿಯೂ ಸಹ ವಿದೇಶಿ ವಿನಿಮಯ ಮೀಸಲು ಗಮನಾರ್ಹವಾಗಿ ಹೆಚ್ಚಾಯಿತು. ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ ಹೊಂದಿರುವ ಏಕೈಕ ದೇಶ ಭಾರತವಾಗಿದೆ. ಇಂತಹ ಮಹಾಮಾರಿಯ ನಡುವೆಯೂ ಭಾರತದ ಆರ್ಥಿಕ ವಿವೇಕವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಾಂಕ್ರಾಮಿಕ ರೋಗಗಳು, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳ ಹೊರತಾಗಿಯೂ ಇದು ಸಂಭವಿಸಿದೆ. ಈ ಬಿಕ್ಕಟ್ಟುಗಳು ಸಂಭವಿಸದೇ ಇದ್ದಿದ್ದರೆ ಭಾರತ ಇಂದು ಇರುವ ಮಟ್ಟಕ್ಕಿಂತ ಉನ್ನತ ಮಟ್ಟದಲ್ಲಿರುತ್ತಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ಆರ್ಥಿಕ ಉತ್ಕರ್ಷದ ಬಗ್ಗೆ ವಿರೋಧ ಪಕ್ಷಗಳನ್ನು ಹೊರತುಪಡಿಸಿ ಯಾರೂ ಭಿನ್ನಾಭಿಪ್ರಾಯ ಹೊಂದಿರಬಾರದು. ಕಳೆದ 10 ವರ್ಷಗಳಲ್ಲಿ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆದರೂ ಈ ಆರ್ಥಿಕ ಬೆಳವಣಿಗೆಯನ್ನು ಧರ್ಮದ ಆಧಾರ ಇಲ್ಲದ್ದರಿಂದ ಈ ಪರಿಸ್ಥಿತಿಯು ಯಾವುದೇ ಸಮಯದಲ್ಲಿ ಕುಸಿಯಬಹುದು. ಆದ್ದರಿಂದ, ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಮುಂಬರುವ 5 ವರ್ಷಗಳಲ್ಲಿ ಪ್ರಧಾನಿಯವರು ಕೆಲಸ ಮಾಡಬೇಕೆಂದು ಜನರು ನಿರೀಕ್ಷಿಸುತ್ತಾರೆ !