ಮೌಲಾನಾ ತೌಕೀರ ರಝಾ ಅವರ ಹಿಂದೂ ದ್ವೇಷಿ ಹೇಳಿಕೆ
(ಮೌಲಾನಾ ಅಂದರೆ ಇಸ್ಲಾಮಿನ ಅಭ್ಯಾಸಕ)
ಬರೇಲಿ (ಉತ್ತರ ಪ್ರದೇಶ) – 5 ನಿಮಿಷಗಳ ಆಜಾನ್ ನಿಂದಾಗಿ ಜನರು ನಿದ್ರೆಗೆಡುತ್ತಾರೆ. ಒಂದು ವೇಳೆ 10 ನಿಮಿಷಗಳ ನಮಾಜಿಗಾಗಿ ಮಸೀದಿಯಲ್ಲಿ ಸ್ಥಾನವಿಲ್ಲವಾದರೆ ಯಾರಾದರೂ ಹೊರಗಡೆ ನಮಾಜು ಮಾಡುತ್ತಿದ್ದರೆ, ಆಗಲೂ ನಿಮಗೆ ತೊಂದರೆಯಾಗುತ್ತದೆ; ಆದರೆ ಕಾವಡ ಯಾತ್ರೆಯ ಮಾರ್ಗ ತಿಂಗಳಿಡೀ ಮುಚ್ಚಿರುತ್ತದೆ, ಇದರಿಂದ ನಿಮಗೆ ತೊಂದರೆಯಾಗುವುದಿಲ್ಲವೇ? ಇದು ನ್ಯಾಯವೇ ಅನ್ಯಾಯವೇ? ಎಂದು ಇತ್ತೆಹಾದ್-ಎ-ಮಿಲ್ಲತ್ ಪರಿಷತ್ ಮುಖ್ಯಸ್ಥ ಮೌಲಾನಾ ತೌಕೀರ್ ರಜಾ ಪ್ರಶ್ನಿಸಿದರು.
ಮೌಲಾನಾ ರಜಾ ಮುಂದೆ ಮಾತನಾಡಿ, ಕಾವಡ ಯಾತ್ರಿಕರ ಸೌಲಭ್ಯಕ್ಕಾಗಿ ಏನು ಮಾಡಬೇಕಾಗುವುದೋ ಅದನ್ನು ಮಾಡಬೇಕು. ನಮಗೆ ಅದರಲ್ಲಿ ಏನೂ ತೊಂದರೆಯಿಲ್ಲ; ಆದರೆ ನಮ್ಮ ಮೇಲೆ ಹೇರಲಾಗಿರುವ ನಿರ್ಬಂಧದ ಬಗ್ಗೆ ನಮಗೆ ಅಡಚಣೆಯಿದೆ. ಅದನ್ನು ನಾವು ಆಕ್ಷೇಪಿಸುತ್ತೇವೆ. ಮೊಹರಮ್ ಮೆರವಣಿಗೆ ಯಾವಾಗಲೂ ನಿಗದಿತ ಸ್ಥಾನದಿಂದ ಹೋಗುತ್ತದೆ. ಹೊಸ ಮಾರ್ಗದಿಂದ ಯಾವತ್ತೂ ಹೋಗುವುದಿಲ್ಲ. ನಾವು ಹೊಸ ಪರಂಪರೆ ನಿರ್ಮಾಣ ಮಾಡುವುದಿಲ್ಲ. ಆದರೆ ನೀವು ಮಾಡಿ, ನಿಮ್ಮ ಧರ್ಮ ನಿಮಗೆ ಅನುಮತಿ ನೀಡುತ್ತದೆ. ಅದನ್ನು ನೀವು ಮಾಡಿರಿ; ಆದರೆ ನಮ್ಮ ಮೇಲೆ ನಿರ್ಬಂಧಗಳನ್ನು ಹೇರುವುದು ಅನ್ಯಾಯವಾಗಿದೆ ಎಂದು ಹೇಳಿದರು.
ಮುಸಲ್ಮಾನರು ತಮ್ಮ ಅಂಗಡಿಗಳ ಮುಂದೆ ತಮ್ಮ ಹೆಸರಿನ ಫಲಕವನ್ನು ಹಾಕಿ ವ್ಯಾಪಾರ ಮಾಡಬೇಕು !
ಮೌಲಾನಾ ತೌಕೀರ ರಜಾ ಮುಂದೆ ಮಾತನಾಡುತ್ತಾ, ಮುಸಲ್ಮಾನರು ಅವರ ಅಂಗಡಿಗಳು ಮತ್ತು ಮನೆಗಳ ಮೇಲೆ ಅವರ ಹೆಸರಿನ ಫಲಕವನ್ನು ಹಚ್ಚಬೇಕು. ಯಾರು ಹೀಗೆ ಮಾಡುವುದಿಲ್ಲವೋ, ಅವರ ಉದ್ದೇಶ ಮೋಸಗೊಳಿಸುವುದಾಗಿದೆ ಅಥವಾ ಅವರಿಗೆ ಹೆದರಿಕೆಯೆನಿಸುತ್ತದೆ, ತಮ್ಮ ಗುರುತನ್ನು ಮುಚ್ಚಿಟ್ಟು ಉದ್ಯೋಗ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು. ಒಂದು ವೇಳೆ ನೀವು ಸ್ವಚ್ಛತೆಯನ್ನು ಕಾಪಾಡಿದರೆ ಮತ್ತು ಒಳ್ಳೆಯ ವ್ಯಾಪಾರ ಮಾಡಿದರೆ ಜನರು ನಿಮ್ಮ ಬಳಿಯೇ ಖರೀದಿಸುತ್ತಾರೆ. ಯಾರು ತಮ್ಮ ಗುರುತನ್ನು ಮುಚ್ಚಿಡುತ್ತಾರೆಯೋ, ಅವರು ದುರ್ಬಲರಾಗಿರುತ್ತಾರೆ ಎಂದು ರಜಾ ಹೇಳಿದರು.
ಸರಕಾರವನ್ನು ಟೀಕಿಸುತ್ತಾ ರಜಾ ಮಾತನಾಡಿ, ಸರಕಾರವು ಮುಸಲ್ಮಾನರಿಗೆ ತೊಂದರೆ ನೀಡುವ ಉದ್ದೇಶದಿಂದಲೇ ಈ ಆದೇಶವನ್ನು ನೀಡಿತ್ತು. ಅದಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಈಗ ಮುಸಲ್ಮಾನರು ತಮ್ಮ ಗುರುತನ್ನು ಮುಚ್ಚಿಟ್ಟುಕೊಳ್ಳಬೇಕೇ? ಎನ್ನುವುದನ್ನು ವಿಚಾರ ಮಾಡಬೇಕಾಗಿದೆ. ಬಹುತೇಕವಾಗಿ ಮುಸಲ್ಮಾನರು ತಮ್ಮ ನೈಜ ಗುರುತನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಎಷ್ಟು ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ಅವರು ಗಡ್ಡ ಅಥವಾ ಟೊಪ್ಪಿಗೆಯನ್ನು ಹಾಕುವುದಿಲ್ಲ ಮತ್ತು ಅವರ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ. ನ್ಯಾಯಾಲಯವು ಸ್ವ ಇಚ್ಛೆಯಿಂದ ಹೆಸರನ್ನು ಬರೆಯಲು ಅನುಮತಿ ನೀಡಿದೆ. ಪ್ರತಿಯೊಂದು ಅಂಗಡಿಯವರು ತಮ್ಮ ಹೆಸರಿನ ಫಲಕವನ್ನು ಹಚ್ಚಬೇಕು ಎಂದು ನನಗೆ ಅನಿಸುತ್ತದೆ. ಮುಸಲ್ಮಾನ ಎಂದು ನಿಮ್ಮ ಗುರುತನ್ನು ಬಹಿರಂಗಪಡಿಸಿರಿ. ಮುಸಲ್ಮಾನರಾಗಿರುವ ಬಗ್ಗೆ ನೀವು ಹೆಮ್ಮೆ ಪಡಬೇಕು ಎಂದು ರಜಾ ಕರೆ ನೀಡಿದರು.
ಸಂಪಾದಕೀಯ ನಿಲುವು
|