ಪಾಕೂರ್ (ಜಾರ್ಖಂಡ್) – ಪಾಾಕೂರ್ ಜಿಲ್ಲೆಯಲ್ಲಿ ಬಾಂಗ್ಲಾದೇಶದ ನುಸುಳುಕೋರರ ದಬ್ಬಾಳಿಕೆ ಹೆಚ್ಚಿದ್ದು ಬೇಸತ್ತ ಹಿಂದುಗಳು ತಮ್ಮ ಮನೆಗಳನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ಪಲಾಯನ ಮಾಡಲು ಆರಂಭಿಸಿದ್ದಾರೆ. ಹಿಂದೂ ಹುಡುಗಿಯರನ್ನು ಛೇಡಿಸುವಂಥ ಘಟನೆಗಳು ಸರ್ವೇಸಾಮಾನ್ಯವಾಗಿವೆ. ಲ್ಯಾಂಡ್ ಜಿಹಾದಿನ ವಾಸ್ತವ ಕೂಡ ಈಗ ಜನರ ಎದುರಿಗೆ ಬಂದಿದೆ. ಈ ಅಕ್ರಮ ನುಸುಳುಕೋರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವಿದ್ಯಾರ್ಥಿಗಳ ವಸತಿಗೃಹಕ್ಕೆ ಹೋಗಿ ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ. ಈ ಘಟನೆ ಬಗ್ಗೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಬಿಜೆಪಿ ಅಧ್ಯಕ್ಷರಾದ ಬಾಬುಲಾಲ ಮರಾಂಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಛಾಯಾ ಚಿತ್ರಗಳನ್ನು ಪ್ರಸಾರಮಾಡಿದ್ದಾರೆ. ಅಲ್ಲದೇ ಸಂಬಂಧಿತ ಪೊಲೀಸರ ಮೇಲೆ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗಾಯಗೊಂಡಿರುವ ವಿದ್ಯಾರ್ಥಿಗಳ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕೆಂದು ಅವರು ಪಾಕೂರ್ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಬಾಬುಲಾಲ್ ಮರಾಂಡಿ ಅವರು ತಮ್ಮ ಪೋಸ್ಟ್ ನಲ್ಲಿ, ಮುಖ್ಯಮಂತ್ರಿ ಹೇಮಂತ್ ಸೋರೆನ್ ಜಿ, ನಮ್ಮ ಅಕ್ಕ ತಂಗಿಯರ ತಾಯಂದಿರ ರಕ್ಷಣೆಗಾಗಿ ನುಸುಳುಕೋರರ ವಿರುದ್ಧ ಧ್ವನಿಯತ್ತಿರುವ ಯುವಕ ವಿದ್ಯಾರ್ಥಿಗಳ ಮೇಲೆ ಈ ರೀತಿ ದೌರ್ಜನ್ಯ ನಡೆಸುವುದು ಮತ್ತು ಹೊರಗಿನವರ ಬಗ್ಗೆ ಇಷ್ಟೊಂದು ಪ್ರೀತಿ ತೋರಿಸಲು ಕಾರಣವೇನು ? ಬಾಂಗ್ಲಾದೇಶದ ನುಸುಳುಕೋರರಿಂದ ಜಾರ್ಖಂಡಿನ ಗೌರವ ಮತ್ತು ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಅವರಿಗೆ ರಕ್ಷಣೆ ನೀಡಿ ನೀವು ರಾಜ್ಯದಲ್ಲಿನ ಮೂರುವರೆ ಕೋಟಿ ಜನರ ಸುರಕ್ಷೆಯ ಜೊತೆಗೆ ಆಟವಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಪಾಕೂರ್ ನಲ್ಲಿ ನಡೆದ ಹಿಂದೂ ವಿರೋಧಿ ಕೆಲ ಘಟನೆಗಳು:
೧. ಕೆಲವು ದಿನಗಳ ಹಿಂದೆ ಪಾಕೂರದಲ್ಲಿ ಓರ್ವ ಮುಸಲ್ಮಾನ ಯುವಕನು ಹಿಂದೂ ಯುವತಿಯ ಅಶ್ಲೀಲ ವಿಡಿಯೋ ಪ್ರಸಾರ ಮಾಡಲು ಪ್ರಯತ್ನಿಸಿದ್ದನು. ಈ ಘಟನೆಯ ನಂತರ ಹಿಂದುಗಳು ಇದನ್ನು ನಿಷೇಧಿಸುತ್ತಾ ಆ ಯುವಕನಿಗೆ ಥಳಿಸಿದ್ದರು. ಇದರಿಂದ ಆಕ್ರೋಶಿತಗೊಂಡ ಮುಸಲ್ಮಾನರು ಹಿಂದುಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಲ್ಲಿ ಹಿಂದೂಗಳ ಮನೆಗಳಿಗೆ ಹಾನಿ ಉಂಟಾಗಿತ್ತು.
೨. ಇಲ್ಲಿ ಬಾಂಗ್ಲಾದೇಶದ ನುಸುಳುಕೋರರ ಭಯದಿಂದ ಹಿಂದುಗಳು ಪಲಾಯನ ಮಾಡುವ ಸಿದ್ಧತೆಯಲ್ಲಿರುವುದಾಗಿ ಮರಾಂಡಿ ಅವರು ಹೇಳಿದ್ದಾರೆ. ಜಾರ್ಖಂಡದಲ್ಲಿನ ಪರಿಸ್ಥಿತಿ ೯೦ ರ ದಶಕದಲ್ಲಿನ ಕಾಶ್ಮೀರ ಮತ್ತು ಈಗಿನ ಬಂಗಾಳ, ಕೇರಳ ರಾಜ್ಯಗಳ ಹಾಗೆ ಕೆಟ್ಟ ಸ್ಥಿತಿಗೆ ಬಂದಿದೆ. ಮುಸಲ್ಮಾನರನ್ನು ಓಲೈಸುವ ಹೆಸರಿನಲ್ಲಿ ಹಿಂದುಗಳ ಮೇಲೆ ನಡೆಯುವ ದಾಳಿಗಳನ್ನು ರಾಜ್ಯ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಮರಾಂಡಿ ಆರೋಪಿಸಿದರು.
ಸಂಪಾದಕೀಯ ನಿಲುವುಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರದ ರಾಜ್ಯದಲ್ಲಿ ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನರ ರಕ್ಷಣೆ ಮಾಡಿ ರಾಷ್ಟ್ರ ಪ್ರೇಮಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ಲಜ್ಜಾಸ್ಪದವಾಗಿದೆ. ಇದನ್ನು ಖಂಡಿಸಿ ರಾಷ್ಟ್ರ ಪ್ರೇಮಿಗಳು ಸರಕಾರವನ್ನು ಪ್ರಶ್ನಿಸಬೇಕು. ಕೇಂದ್ರ ಸರಕಾರ ಕೂಡ ಇದರಲ್ಲಿ ಹಸ್ತಕ್ಷೇಪ ಮಾಡುವುದು ಆವಶ್ಯಕವಾಗಿದೆ. |