ಚಿಲಕೂರ್ (ತೆಲಂಗಾಣ) – ಪ್ರಸಿದ್ಧ ಚಿಲಕೂರ್ ಬಾಲಾಜಿ ದೇವಸ್ಥಾನದ ಹತ್ತಿರದ ಭೂಮಿಯನ್ನು ವಕ್ಫ್ ಬೋರ್ಡನ ಜಾಗ ಎಂದು ಘೋಷಿಸಿ ಅಲ್ಲಿ ಮಸೀದಿ ಕಟ್ಟಲಾಗುತ್ತಿತ್ತು. ಬಜರಂಗದಳದ ಕಾರ್ಯಕರ್ತರು ಇದನ್ನು ವಿರೋಧಿಸಿ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ನೀಡಿದರು. ದೇವಸ್ಥಾನದ ಪಾವಿತ್ರಕ್ಕೆ ಯಾವುದೇ ರೀತಿಯ ತೊಂದರೆಯಾದರೆ ಅದನ್ನು ಸಹಿಸುವುದಿಲ್ಲ, ಗಂಭೀರ ಪರಿಣಾಮ ಎದುರಿಸಬೇಕಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಅಲ್ಲದೇ ಕಟ್ಟಡ ಕಾಮಗಾರಿ ನಿಲ್ಲಿಸಿ ಮಸೀದಿಯನ್ನು ನೆಲೆಸಮ ಮಾಡುವಂತೆ ಕಾರ್ಯಕರ್ತರು ಆಗ್ರಹಿಸಿದರು. ಈ ಪ್ರಕರಣದ ಕಡೆ ಕೂಡಲೇ ಗಮನಹರಿಸಿದ ಜಿಲ್ಲಾಧಿಕಾರಿಗಳು ಮಸೀದಿಯ ಕಾಮಗಾರಿ ನಿಲ್ಲಿಸುವಂತೆ ಆದೇಶಿಸಿದರು.
೧. ಚಿಲಕೂರ್ ಬಾಲಾಜಿ ದೇವಸ್ಥಾನದ ಅರ್ಚಕರಾದ ಸಿ.ಎಸ್.ರಂಗರಾಜನ್ ಅವರು ಈ ಬಗ್ಗೆ ಮಾತನಾಡಿ, ಚಿಲಕೂರ್ ಬಾಲಾಜಿ ದೇವಸ್ಥಾನದ ಸುತ್ತಲೂ ಪವಿತ್ರವಾದ ಜಾಗವಿದೆ ಮತ್ತು ಅದು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದ. ತಿರುಪತಿ ಬಾಲಾಜಿ ದೇವಸ್ಥಾನದ ಸುತ್ತಮುತ್ತಲಿನ ಜಾಗ ಯಾವ ರೀತಿ ಪೂಜನೀಯವಾಗಿದೆಯೋ, ಅದೇ ರೀತಿ ಚಿಲಕೂರ್ ಬಾಲಾಜಿ ದೇವಸ್ಥಾನದ ಸುತ್ತಲಿನ ಪರಿಸರವು ಕೂಡ ಅಷ್ಟೇ ಪವಿತ್ರವಾಗಿದೆ. ಭಗವಾನ್ ವೆಂಕಟೇಶ್ವರ ಸ್ವಾಮಿ ಚಿಲಕೂರ್ ನಲ್ಲಿ ಸ್ವತಃ ಪ್ರಕಟವಾಗಿರುವುದರಿಂದ ಅವರೇ ಈ ಭೂಮಿಯ ಮಾಲೀಕರಾಗಿದ್ದಾರೆ. ಇದು ಅನ್ಯ ಧರ್ಮದ ಪ್ರಾರ್ಥನಾ ಸ್ಥಳದ ಜಾಗದಲ್ಲಿಲ್ಲ. ದೇವಸ್ಥಾನದ ಪಾವಿತ್ರ್ಯ ರಕ್ಷಿಸುವುದು ಪೊಲೀಸ್, ಕಂದಾಯ ಇಲಾಖೆ ಮತ್ತು ಇತರ ಇಲಾಖೆಗಳ ಜವಾಬ್ದಾರಿಯಾಗಿದೆ. ದೇವಸ್ಥಾನದ ೨ ಕಿಲೋಮೀಟರ್ ಪರಿಸರದಲ್ಲಿ ಹೊಸ ಮಸೀದಿ ಕಟ್ಟಲಾಗುತ್ತಿತ್ತು. ಅವರು ಕೂಡ ನಮ್ಮ ಬಾಂಧವರೇ ಆಗಿದ್ದಾರೆ ಮತ್ತು ನಾವು ಅವರನ್ನು ಪ್ರೀತಿಸುತ್ತೇವೆ ಮತ್ತು ಅವರನ್ನು ಗೌರವಿಸುತ್ತೇವೆ; ಆದರೆ ಸರಕಾರ ಮತ್ತು ಮಸೀದಿಯ ಕಾಮಗಾರಿ ನಡೆಸುವವರಿಗೆ ನಮ್ಮ ವಿನಂತಿ ಏನೆಂದರೆ, ಈ ಭೂಮಿಯ ಪಾವಿತ್ರ್ಯ ಮತ್ತು ಸ್ವಾಮ್ಯತ್ವ ಕಾಪಾಡಬೇಕು ಎಂದು ನಾವು ಸರಕಾರ ಮತ್ತು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಕರೆ ನೀಡುತ್ತೇವೆ ಎಂದು ಹೇಳಿದರು. ಇಲ್ಲಿ ಇತರ ಯಾವುದೇ ಧರ್ಮದ ಹೊಸ ಪ್ರಾರ್ಥನಾ ಸ್ಥಳ ಕಟ್ಟದಂತೆ ಸರಕಾರ ಕಾಳಜಿ ವಹಿಸಬೇಕು ಎಂದು ಹೇಳಿದರು.
೨. ಭಜರಂಗದಳದ ರಾಜ್ಯ ಸಂಯೋಜಕ ಶಿವರಾಮುಲು ಅವರು ಖಾಸಗಿ ಭೂಮಿಯನ್ನು ವಕ್ಫ್ ಭೂಮಿ ಎಂದು ವರದಿ ನೀಡುವ ಸ್ಥಳೀಯ ತಹಶೀಲದಾರನನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಇದಲ್ಲದೆ ಈ ಪ್ರಕರಣದಲ್ಲಿ ಮುಸಲ್ಮಾನ ಶಾಸಕರ ಮಾತು ಕೇಳಿ ಆ ಜಾಗದಲ್ಲಿ ಬೋರ್ವೆಲ್ ಅಗೆಯುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಅವರ ಅಭಿಪ್ರಾಯದ ಪ್ರಕಾರ ಪೊಲೀಸರು ಘಟನಾ ಸ್ಥಳದಲ್ಲಿದ್ದರು ಮತ್ತು ಕಾಮಗಾರಿ ನಡೆಯುತ್ತಿರುವಾಗ ಸ್ಥಳೀಯ ಜನರನ್ನು ಹೆದರಿಸುತ್ತಿದ್ದರು ಎಂದು ಟೀಕಿಸಿದರು.
ಸಂಪಾದಕೀಯ ನಿಲುವುತೆಲಂಗಾಣದಲ್ಲಿ ಕಾಂಗ್ರೆಸ್ಸಿನ ಸರಕಾರ ಇರುವುದರಿಂದ ಮತಾಂಧ ಮುಸಲ್ಮಾನರು ಇಂತಹ ಧೈರ್ಯಕ್ಕೆ ಮುಂದಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಿ |