ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ೭೧ ಕಡೆಗಳಲ್ಲಿ ಗುರುಪೂರ್ಣಿಮೆ

ರಾಯಭಾಗದಲ್ಲಿ ನೆರವೇರಿದ ಗುರುಪೂಜೆ

ಮಂಗಳೂರು – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶದಾದ್ಯಂತ ಕನ್ನಡ, ಮರಾಠಿ, ಬಂಗಾಳಿ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ೭೧ ಕಡೆಗಳಲ್ಲಿ `ಗುರುಪೂರ್ಣಿಮಾ ಮಹೋತ್ಸವ’ ಸಂಭ್ರಮದಿಂದ ನೆರವೇರಿತು. ಬೆಂಗಳೂರು, ಮಂಗಳೂರು, ಮುಂತಾದ ಕಡೆಗಳಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ಮತ್ತು ಜಿಜ್ಞಾಸುಗಳು ಉಪಸ್ಥಿತರಿದ್ದರು.

ಮಂಗಳೂರಿನ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ ರಮಾನಂದ ಗೌಡ, ಸಂತರಾದ ಪೂ ರಾಧಾ ಪ್ರಭು, ಪೂ. ವಿನಾಯಕ ಕರ್ವೆ, ಮೊದಲ ಬಾಲಕ ಸಂತ ಪೂ ಭಾರ್ಗವರಾಮ ಪ್ರಭು ಇವರ ವಂದನೀಯ ಉಪಸ್ಥಿತಿ ಇತ್ತು.

ಮಂಗಳೂರಿನಲ್ಲಿ ನಡೆದ ಗುರುಪೂರ್ಣಿಮೆಯಲ್ಲಿ ಉಪಸ್ಥಿತ ಧರ್ಮಾಭಿಮಾನಿ ಹಿಂದೂಗಳು ರಾಯಭಾಗದಲ್ಲಿ ನೆರವೇರಿದ ಗುರುಪೂಜೆ

ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜೊತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ ! – ಹಿಂದೂ ಜನಜಾಗೃತಿ ಸಮಿತಿ ಕರೆ

‘ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು; ಆದರೆ ಸಾಮಾಜಿಕ ಮತ್ತು ರಾಷ್ಟ್ರಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಠರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ. ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. `ಹಲೋ’ ಬದಲಾಗಿ `ನಮಸ್ಕಾರ’ ಅಥವಾ `ರಾಮ ರಾಮ’ ಹೇಳಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ; `ಟಿವಿ’ಯಲ್ಲಿ ಧಾರಾವಾಹಿ ನೋಡದೆ, `ಕೀರ್ತನೆ-ಭಜನೆ’ ನೋಡಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ, ಯಾರೋ ನಟನಲ್ಲ, `ರಾಮ-ಕೃಷ್ಣ’ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕೆಂದು’ ಹಿಂದೂ ಜನಜಾಗೃತಿ ಸಮಿತಿಯ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಕರೆ ನೀಡಲಾಯಿತು.

ಗಮನಾರ್ಹ ಅಂಶಗಳು !

* ಮೈಸೂರಿನಲ್ಲಿ ನೆರವೇರಿದ ಗುರುಪೂರ್ಣಿಮೆಯಲ್ಲಿ ಅಯೋಧ್ಯೆಯಲ್ಲಿನ ಬಾಲರಾಮನ ಮೂರ್ತಿ ನಿರ್ಮಿಸಿದ ಮೂರ್ತಿಕಾರರಾದ ಶ್ರೀ. ಅರುಣ ಯೋಗೀರಾಜ ಅವರು ಉಪಸ್ಥಿತರಿದ್ದರು.

* ಮಂಗಳೂರಿನಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದ ನೇರಪ್ರಸಾರವನ್ನು ೨೫೦೦ಕ್ಕೂ ಅಧಿಕ ಹಿಂದೂ ಬಾಂಧವರು ವೀಕ್ಷಿಸಿದ್ದಾರೆ.

* ವ್ಯಾಸಪೂಜೆಯೊಂದಿಗೆ ಮಹೋತ್ಸವವನ್ನು ಪ್ರಾರಂಭಿಸಲಾಯಿತು.

* ಈ ವೇಳೆ ರಾಷ್ಟ್ರ-ಧರ್ಮಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

* ಈ ವೇಳೆ ಸಮಿತಿಯು ನೇಪಾಳ, ಇಂಡೋನೇಷ್ಯಾ, ಅಮೇರಿಕಾ ಇತ್ಯಾದಿ ದೇಶಗಳಲ್ಲಿ ನಡೆಸಿದ ಸಂಪರ್ಕ ಅಭಿಯಾನದ ಕಿರುಚಿತ್ರ ತೋರಿಸಲಾಯಿತು.