ರಾಜ್ಯದ ಬಜೆಟ್
ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರ ತನ್ನ ಆಯ-ವ್ಯಯವನ್ನು (ಬಜೆಟ್) ಮಂಡಿಸಿದೆ. ಇದರಲ್ಲಿ ರಾಜ್ಯದಲ್ಲಿರುವ ಮಠಗಳ ಅಭಿವೃದ್ಧಿ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 85 ಕೋಟಿ ರೂಪಾಯಿ ಹಾಗೆಯೇ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ಹೆಚ್ಚುವರಿಯಾಗಿ 70 ಕೋಟಿ ರೂಪಾಯಿ ನೀಡಲಾಗಿದೆ.
ಅಲ್ಪಸಂಖ್ಯಾತರ ಯೋಜನೆಗಳಿಗೆ 52 ಕೋಟಿ ರೂಪಾಯಿ !
‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ’ದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 52 ಕೋಟಿ 5 ಲಕ್ಷ ರೂಪಾಯಿ, ಹಜ್ ಸಮಿತಿಯ ಆಡಳಿತ ವೆಚ್ಚ ಮತ್ತು ಹಜ್ ಭವನ ನಿರ್ವಹಣೆಗೆ ಹೆಚ್ಚುವರಿಯಾಗಿ ಎರಡೂವರೆ ಕೋಟಿ ರೂಪಾಯಿ ನೀಡಲಾಗಿದೆ. (ದೇಶದಲ್ಲಿ ಅಲ್ಪಸಂಖ್ಯಾತರು ಅಂದರೆ ಮುಸ್ಲಿಮರು ಎನ್ನುವಂತೆ ಚಿತ್ರಣವನ್ನು ರೂಪಿಸಲಾಗುತ್ತದೆ ಮತ್ತು ಹಾಗೆಯೇ ನೋಡಲಾಗುತ್ತದೆ. `ಅಲ್ಪಸಂಖ್ಯಾತರಿಗೆ ಹಣ ಕೊಟ್ಟರು ಮತ್ತು ಹಿಂದೂಗಳಿಗೆ ನೀಡಲಿಲ್ಲ’, ಎಂದು ಯಾರೂ ಹೇಳಬಾರದು; ಎನ್ನುವ ಕಾರಣಕ್ಕೆ ಹಿಂದೂಗಳಿಗೆ ಹಣ ನೀಡಿದ್ದು, ಇದು ಕೇವಲ ತೋರಿಕೆಗಾಗಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನವನ್ನು ಘೋಷಿಸಿರುವುದು ಕಂಡುಬರುತ್ತದೆ. ಇದರಲ್ಲಿ ಎಷ್ಟು ಹಣ ದೇವಸ್ಥಾನಗಳಿಗೆ ಪ್ರತ್ಯಕ್ಷವಾಗಿ ಸಿಗಲಿದೆ ? ಎನ್ನುವುದೂ ಪ್ರಶ್ನೆಯಾಗಿದೆ – ಸಂಪಾದಕರು)