US India Partnership : ಭಾರತಕ್ಕೆ ‘ನಾಟೊ’ ದೇಶದಂತೆ ‘ಯುತಿಯ ಮಿತ್ರ’ನ ಸ್ಥಾನ ನೀಡಲು ಆಗ್ರಹ

ಅಮೇರಿಕಾದ ಸಂಸತ್ತಿನಲ್ಲಿ ಭಾರತದ ಸಂದರ್ಭದಲ್ಲಿ ಮಹತ್ವಪೂರ್ಣ ಮಸೂದೆ ಮಂಡನೆ

(ನಾಟೋ ಎಂದರೆ ‘ನಾರ್ಥ ಅಟ್ಲಾಂಟಿಕ್ ಟ್ರಿಟೀ ಆರ್ಗನೈಜೇಷನ್’ ಹೆಸರಿನ ಜಗತ್ತಿನಲ್ಲಿನ ೨೯ ದೇಶಗಳ ಸಹಭಾಗ ಇರುವ ಒಂದು ಸೈನಿಕ ಸಂಘಟನೆ)

ಅಮೇರಿಕಾದ ಸಂಸದ ಮಾರ್ಕೊ ರೂಬಿಯೊ

ವಾಷಿಂಗ್ಟನ್ (ಅಮೇರಿಕಾ) – ಅಮೆರಿಕ ಕಾಂಗ್ರೆಸ್ ನಲ್ಲಿ (ಸಂಸತ್ತಿನಲ್ಲಿ) ಒಂದು ಮಸೂದೆ ಮಂಡಿಸಲಾಗಿದ್ದು ಅದರಲ್ಲಿ ಭಾರತಕ್ಕೆ ಅಮೆರಿಕಾದ ಯುತಿಯ ಮಿತ್ರ ರಾಷ್ಟ್ರದ ಸ್ಥಾನ ನೀಡಲು ಆಗ್ರಹಿಸಲಾಗಿದೆ. ಈ ಮಸೂದೆ ಅಮೇರಿಕಾದ ಸಂಸದ ಮಾರ್ಕೊ ರೂಬಿಯೊ ಇವರು ಮಂಡಿಸಿದರು. ಭಾರತದ ಪ್ರಾದೇಶಿಕ ಸಾರ್ವಭೌಮತ್ವದ ಮೇಲಿನ ಹೆಚ್ಚುತ್ತಿರುವ ಅಪಾಯ ಗುರುತಿಸಿ ಅಮೇರಿಕಾ ಅದರ ಮಿತ್ರ ಜಪಾನ್, ಇಸ್ರೇಲ್, ಕೋರಿಯಾ ಮತ್ತು ‘ನಾಟೊ’ ದೇಶಗಳಂತೆ ಭಾರತಕ್ಕೂ ಮಹತ್ವದ ತಂತ್ರಜ್ಞಾನ ಹಸ್ತಾಂತರಿಸಬೇಕು ಹಾಗೂ ಪಾಕಿಸ್ತಾನ ಪೋಷಿತ ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಹಾಯ ಮಾಡಬೇಕೆಂದು ಈ ಮಸೂದೆಯಲ್ಲಿ ಆಗ್ರಹಿಸಲಾಗಿದೆ.

೧. ಮಾರ್ಕೋ ರುಬಿಯೋ ಇವರು, ‘ಯುಎಸ್ ಇಂಡಿಯಾ ಡಿಫೆನ್ಸ್ ಕೋ ಆಪರೇಷನ್ ಆಕ್ಟ್’ ಈ ಮಸೂದೆಯಲ್ಲಿ, ಎಡಪಂಥೀಯ ವಿಚಾರಧಾರೆಯ ಚೀನಾವು ಹಿಂದೂ ಮತ್ತು ಪ್ರಶಾಂತ ಮಹಾಸಾಗರ ಕ್ಷೇತ್ರಗಳಲ್ಲಿ ನಿರಂತರ ಅದರ ಪ್ರಭಾವ ಹೆಚ್ಚಿಸುತ್ತಿದೆ ಮತ್ತು ತನ್ನ ಪ್ರಾದೇಶಿಕ ಮಿತ್ರ ದೇಶದ ಸುರಕ್ಷೆ ಮತ್ತು ಸಾರ್ವಭೌಮತ್ವಕ್ಕೆ ಇದರಿಂದ ಅಪಾಯ ನಿರ್ಮಾಣವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಚೀನಾದ ರಣತಂತ್ರವನ್ನು ಎದುರಿಸಲು ಅಮೆರಿಕ ಅದರ ಸಹಾಯ ಕಾರ್ಯ ಮುಂದುವರೆಸುವುದು ಮತ್ತು ಭಾರತ ಸಹಿತ ಈ ಕ್ಷೇತ್ರದಲ್ಲಿನ ಇತರ ದೇಶಗಳಿಗೆ ಅದು ಒಬ್ಬಂಟಿಗ ಅಲ್ಲ ಎಂದು ಹೇಳುವುದು ಮಹತ್ವದ್ದಾಗಿದೆ.

೨. ಅಮೇರಿಕಾದಲ್ಲಿ ಶೀಘ್ರದಲ್ಲೇ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಮತ್ತು ಇಂತಹ ಸಮಯದಲ್ಲಿ ಅಮೆರಿಕ ಕಾಂಗ್ರೆಸ್ಸಿನಲ್ಲಿನ ಎರಡು ಪಕ್ಷದ ಸಂಸದರಲ್ಲಿ ಭಿನ್ನಾಭಿಪ್ರಾಯ ಇರುವುದರಿಂದ ಈ ಮಸೂದೆ ಅಂಗೀಕರಿಸುವ ಸಾಧ್ಯತೆ ಕಡಿಮೆ ಇದೆ ಆದರೂ ಅಮೇರಿಕಾದಲ್ಲಿ ಭಾರತಕ್ಕೆ ದೊರೆಯುವ ಬೆಂಬಲ ಗಮನಿಸಿ ಹೊಸ ಸರಕಾರ ಸ್ಥಾಪನೆ ಆದ ನಂತರ ಈ ಮಸೂದೆ ಮತ್ತೆ ಮಂಡಿಸುವ ಸಾಧ್ಯತೆ ಇದೆ.