ಅಮೇರಿಕಾದಿಂದ ತನ್ನ ನಾಗರಿಕರಿಗೆ ಸಲಹೆ
ವಾಷಿಂಗ್ಟನ್ – ಅಮೇರಿಕಾವು ತನ್ನ ನಾಗರಿಕರಿಗೆ ಮಣಿಪುರ ಮತ್ತು ಜಮ್ಮು ಕಾಶ್ಮೀರ್ ರಾಜ್ಯಗಳ ಪ್ರವಾಸ ಮಾಡದಿರಲು ಸಲಹೆ ನೀಡಿದೆ. ಅಮೇರಿಕಾದ ನಾಗರಿಕರು ಭಯೋತ್ಪಾದಕರು ಮತ್ತು ನಕ್ಸಲವಾದಿಗಳು ಸಕ್ರಿಯವಾಗಿರುವ ಭಾರತ-ಪಾಕಿಸ್ತಾನ ಗಡಿ ಪ್ರದೇಶ ಮತ್ತು ಭಾರತದ ಪೂರ್ವದ ಭಾಗಕ್ಕೆ ಹೋಗಬೇಡಿ ಎಂದು ಅಮೇರಿಕಾವು ಭಾರತದಲ್ಲಿ ಪ್ರವಾಸ ಮಾಡುವ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಭಾರತಕ್ಕಾಗಿ ಸುಧಾರಿತ ಪ್ರವಾಸ ಸಲಹೆಗಾರರಲ್ಲಿ ಅಮೆರಿಕಾದ ವಿದೇಶಾಂಗ ಇಲಾಖೆಯು, ಅಪರಾಧ, ಭಯೋತ್ಪಾದನೆ ಮತ್ತು ನಕ್ಸಲವಾದ ಇದರಿಂದ ಭಾರತದ ಪ್ರವಾಸ ಮಾಡುವಾಗ ಹೆಚ್ಚು ಜಾಗರೂಕತೆ ವಹಿಸಬೇಕು ಎಂದು ಹೇಳಿದೆ.
೧. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಅಮೆರಿಕ ನಾಗರಿಕರು ಭಾರತದ ಈಶಾನ್ಯದ ಭಾಗದ ರಾಜ್ಯದಲ್ಲಿ ಪ್ರವಾಸ ಮಾಡುವಾಗ ನಿರ್ಣಯವನ್ನು ಪುನರ್ವಿಚಾರ ಮಾಡಬೇಕು ಎಂದು ಈ ಮಾರ್ಗಸೂಚಿಯಲ್ಲಿ ಶಿಫಾರಸ್ಸು ಮಾಡಿದೆ.
೨. ‘ಬಲಾತ್ಕಾರ ಇದು ಭಾರತದಲ್ಲಿ ಎಲ್ಲಕ್ಕಿಂತ ವೇಗವಾಗಿ ಹೆಚ್ಚುತ್ತಿರುವ ಅಪರಾಧಗಳಲ್ಲಿ ಒಂದಾಗಿದೆ. (ಹಾಗೆ ನೋಡಿದರೆ ಅಮೆರಿಕದಲ್ಲಿ ೬ ರಿಂದ ೧೦ ವಯಸ್ಸಿನ ಮಕ್ಕಳು ಬಂದುಕು ಹಿಡಿದು ಗುಂಡಿನ ದಾಳಿ ಮಾಡುತ್ತಾರೆ. ಆದ್ದರಿಂದ ಅಲ್ಲಿಯ ನಾಗರಿಕರು ಸುರಕ್ಷಿತವಾಗಿಲ್ಲ. ಇದು ಗಮನಸಿ ಅಮೆರಿಕಾ ಭಾರತದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದು ಹೇಳ ಬೇಕಾಗುತ್ತದೆ ? – ಸಂಪಾದಕರು) ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯದ ಹಾಗೆ ಹಿಂಸಾಚಾರದ ಅಪರಾಧಗಳು ನಡೆದಿವೆ. ಭಯೋತ್ಪಾದಕರು ಯಾವಾಗ ಬೇಕಿದ್ದರೂ ದಾಳಿ ನಡೆಸಬಹುದು. ಅದು ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆ, ಶಾಪಿಂಗ್ ಮಾಲ್ಸ್ ಮತ್ತು ಸರಕಾರಿ ಕಂಪನಿಗಳನ್ನು ಗುರಿ ಮಾಡುತ್ತಾರೆ’, ಹೀಗೂ ಕೂಡ ಅಮೆರಿಕ ಅದರ ಸೂಚನಾ ಪತ್ರದಲ್ಲಿ ಹೇಳಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ನಕ್ಸಲವಾದದ ಬಗ್ಗೆ ಹರಡುತ್ತಿರುವ ಕಳಂಕವನ್ನು ಅಳಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರಕಾರ ಏನು ಪ್ರಯತ್ನ ಮಾಡಲಿದೆ ? |