Islamic Centre Hamburg : ಜರ್ಮನಿಯಲ್ಲಿ ‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ್’ ಮತ್ತು ಅದರ ಜೊತೆಗೆ ಸಂಬಂಧಿತ ಸಂಘಟನೆಗಳ ಮೇಲೆ ನಿಷೇಧ !

ಬ್ಲ್ಯೂ ಮಸ್ಜಿದ್

ಹ್ಯಾಮ್ಬರ್ಗ್ (ಜರ್ಮನಿ) – ಜರ್ಮನಿಯು ‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ್’ ಮತ್ತು ಅದಕ್ಕೆ ಸಂಬಂಧಿತ ಸಂಘಟನೆಗಳನ್ನು ನಿಷೇಧಿಸಿದೆ. ಜರ್ಮನಿಯ ಗೃಹ ಸಚಿವಾಲಯವು, ‘ಈ ಸಂಘಟನೆಗಳು ಕಟ್ಟರ ಇಸ್ಲಾಮಿ ವಿಚಾರಧಾರೆಗೆ ಪ್ರೋತ್ಸಾಹ ನೀಡುತ್ತವೆ.’ ಎಂದು ಹೇಳಿದೆ. ಗೃಹಸಚಿವ ನ್ಯಾನ್ಸಿ ಫೇಸರ್ ಇವರು, ಇಂದು ನಾವು ಜರ್ಮನಿಯಲ್ಲಿ ಕಟ್ಟರ ಇಸ್ಲಾಮಿ ವಿಚಾರಧಾರೆಗೆ ಪ್ರೋತ್ಸಾಹ ನೀಡುವ ‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ’ ಮೇಲೆ ನಿಷೇಧ ಹೇರಿದ್ದೇವೆ. ಈ ಕಟ್ಟರವಾದಿ ವಿಚಾರಧಾರೆ ಮಾನವೀ ಪ್ರತಿಷ್ಠೆ, ಮಹಿಳೆಯರ ಹಕ್ಕು, ಮುಕ್ತ ಸಮಾಜ ಮತ್ತು ನ್ಯಾಯ ವ್ಯವಸ್ಥೆ ಇವುಗಳ ವಿರೋಧದಲ್ಲಿ ಇದೆ.

‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ’ ಈ ಸಂಘಟನೆ ೧೯೫೩ ರಲ್ಲಿ ಇರಾನದಲ್ಲಿ ನಿರಾಶ್ರಿತರು ಸ್ಥಾಪಿಸಿದ್ದರು ಮತ್ತು ಜರ್ಮನಿಯ ಶಿಯಾ ಮುಸಲ್ಮಾನರಲ್ಲಿ ಇರಾನಿ ಸರಕಾರದ ನೀತಿ ಅನುಸರಿಸುತ್ತಿರುವ ಮತ್ತು ಶಿಯಾ ಭಯೋತ್ಪಾದಕ ಸಂಘಟನೆ ಹಿಜಬುಲ್ಲಾಗೆ ಬೆಂಬಲ ನೀಡುತ್ತಿರುವುದರ ಆರೋಪವಿದೆ. ಈ ಸಂಘಟನೆಯಲ್ಲಿ ಎಷ್ಟು ಸದಸ್ಯರು ಎಷ್ಟು ಬೆಂಬಲಿಗರು ಇದ್ದಾರೆ ? ಇದರ ನಿಖರ ಸಂಖ್ಯೆ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.

ಈ ಸಂಘಟನೆ ಹ್ಯಾಮ್ಬರ್ಗ್ ನಲ್ಲಿನ ‘ಇಮಾಮ್ ಅಲಿ’ ಮಸೀದಿಯಿಂದ ನಡೆಸಲಾಗುತ್ತದೆ. ಇದು ಜರ್ಮನಿಯಲ್ಲಿನ ಎಲ್ಲಕ್ಕಿಂತ ಹಳೆ ಮಸೀದಿಗಳಲ್ಲಿ ಒಂದಾಗಿದೆ. ಈ ಮಸೀದಿ ಅದರ ನೀಲಮಣಿ ಬಣ್ಣದ ಹೊರಗಿನ ಗೋಡೆಗಳಿಗಾಗಿ ಪ್ರಸಿದ್ಧವಾಗಿದೆ ಮತ್ತು ಅದರಿಂದಲೇ ಅದನ್ನು ‘ಬ್ಲೂ ಮಸೀದಿ’ ಎಂದು ಕೂಡ ಗುರುತಿಸಲಾಗುತ್ತದೆ. ಈಗ ಈ ಮಸೀದಿ ಸಹಿತ ಇತರ ೪ ಶಿಯಾ ಮಸೀದಿಗಳನ್ನು ಮುಚ್ಚಲಾಗುವುದು. ಇದಲ್ಲದೆ ಫ್ರಾಂಕ್ ಫರ್ಟ್, ಮ್ಯುನಿಕ್ ಮತ್ತು ಬರ್ಲಿನ್ ಇಲ್ಲಿ ಕೂಡ ಈ ಸಂಘಟನೆಗೆ ಸಂಬಂಧಿಸಿದ ಗುಂಪುಗಳನ್ನು ನಿಷೇಧಿಸಲಾಗಿದೆ.

‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ’ನ ೫೩ ಸ್ಥಳಗಳಲ್ಲಿ ನಡೆಸಿದ ದಾಳಿ !

ಗೃಹ ಸಚಿವಾಲಯವು, ಜುಲೈ ೨೪ ರ ಬೆಳಿಗ್ಗೆ ನ್ಯಾಯಾಲಯದ ಆದೇಶದ ಪ್ರಕಾರ ಜರ್ಮನಿಯ ೮ ರಾಜ್ಯಗಳಲ್ಲಿನ ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ್ ಗೆ ಸಂಬಂಧಿಸಿದ ೫೩ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಕಳೆದ ವರ್ಷ ನವಂಬರ್ ನಲ್ಲಿ ಸಿಕ್ಕಿರುವ ೫೫ ಸಂಪತ್ತಿ ಶೋಧದ ನಂತರ ಸಿಕ್ಕಿರುವ ಸಾಕ್ಷಿಗಳ ಆಧಾರಿತವಾಗಿಟ್ಟುಕೊಂಡು ಈ ಸಂಘಟನೆಯ ಮೇಲೆ ನಿಷೇಧ ಹೇರಿದೆ. ‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ’ ಈ ಸಂಘಟನೆ ಇರಾನಿನ ಸರ್ವೋಚ್ಚ ನಾಯಕನ ಕೈ ಗೊಂಬೆಯ ರೀತಿ ಕೆಲಸ ಮಾಡುತ್ತದೆ ಮತ್ತು ಜರ್ಮನಿಯಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆಸಲು ಇಚ್ಛಿಸುತ್ತಿದೆ. ಅದರ ಮೂಲಕ ಧಾರ್ಮಿಕ ಆಡಳಿತ ಸ್ಥಾಪಿಸಲು ಇಚ್ಚಿಸುತ್ತಿದೆ.

ಸಂಪಾದಕೀಯ ನಿಲುವು

ಯುರೋಪಿನಲ್ಲಿ ಕೂಡ ಜಿಹಾದಿ ಸಂಘಟನೆಯ ಚಟುವಟಿಕೆ ನಡೆಸುತ್ತಿದೆ. ಇದರ ಪರಿಣಾಮ ಫ್ರಾನ್ಸ್, ಜರ್ಮನಿ, ಬ್ರಿಟನ್, ಸ್ಪೇನ್ ಮುಂತಾದ ದೇಶಗಳಲ್ಲಿ ಕೂಡ ಕಂಡು ಬರುತ್ತಿದೆ. ಭವಿಷ್ಯದಲ್ಲಿ ಕಾಶ್ಮೀದಂತೆ ಪರಿಸ್ಥಿತಿ ಈ ದೇಶಗಳಿಗೂ ಬರುವುದು, ಇದು ಸ್ಪಷ್ಟವಾಗಿ ಕಾಣುತ್ತಿದೆ. ಕಾಶ್ಮೀರದ ಹಿಂದೂಗಳಿಗಾಗಿ ಸಹಾನುಭೂತಿ ವ್ಯಕ್ತಪಡಿಸದಿರುವ ಈ ದೇಶಗಳಿಗೂ ವಿಧಿ ನೀಡಿರುವ ಶಿಕ್ಷೆಯಾಗಿರಬಹುದು.