ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !

ನವದೆಹಲಿ – ರಾಷ್ಟ್ರಪತಿ ಭವನದಲ್ಲಿರುವ ‘ದರ್ಬಾರ್ ಹಾಲ್’ ಅನ್ನು ‘ಗಣತಂತ್ರ ಮಂಟಪ’ ಹಾಗೂ ‘ಅಶೋಕ ಹಾಲ್’ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ ಮಾಡಲಾಗಿದೆ.

1. ರಾಷ್ಟ್ರಪತಿ ಭವನವನ್ನು ವೈಸ್‌ರಾಯ್‌ಗಾಗಿ ನಿರ್ಮಿಸಲಾಗಿತ್ತು. ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ವೈಸರಾಯ್ ರವರ ದರ್ಬಾರ್ ಅನ್ನು ‘ದರ್ಬಾರ್ ಹಾಲ್’ನಲ್ಲಿ ನಡೆಸಲಾಗುತ್ತಿತ್ತು.

‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’

2. ರಾಷ್ಟ್ರಪತಿ ಭವನದಲ್ಲಿರುವ ‘ದರ್ಬಾರ್ ಹಾಲ್’ (ಗಣತಂತ್ರ ಮಂಟಪ) ಭಾರತದಲ್ಲಿ ಅನೇಕ ಐತಿಹಾಸಿಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಇದೇ ದರ್ಬಾರ್ ಹಾಲ್‌ನಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಆಗಸ್ಟ್ 15, 1947 ರಂದು ಪಂಡಿತ್ ಜವಾಹರಲಾಲ್ ನೆಹರು ನೇತೃತ್ವದಲ್ಲಿ ಸ್ವತಂತ್ರ ಭಾರತದ ಮೊದಲ ಸರಕಾರ ಪ್ರಮಾಣ ವಚನ ಸ್ವೀಕರಿಸಿದ್ದರು.

3. ದರ್ಬಾರ್ ಹಾಲ್ ಅನ್ನು ರಾಷ್ಟ್ರಪತಿ ಭವನದ ಎಲ್ಲಕ್ಕಿಂತ ಭವ್ಯವಾದ ಸಭಾಗೃಹ ಎಂದು ಪರಿಗಣಿಸಲಾಗಿದೆ. ಈ ಸಭಾಂಗಣದಲ್ಲಿ ಅಳವಡಿಸಿರುವ ಝುಂಬರ್ ವಿಶಿಷ್ಟವಾಗಿದೆ. ಈ ಗೊಂಚಲುಗಳನ್ನು ಬೆಲ್ಜಿಯಂ ಗಾಜಿನಿಂದ ತಯಾರಿಸಲಾಗಿದ್ದು ಅದು 33 ಮೀಟರ್ ಉದ್ದವಿದೆ. ಈ ಸಭಾಂಗಣದಲ್ಲಿ ಉತ್ತಮ ಗುಣಮಟ್ಟದ ಮಾರ್ಬಲ್ ಅಳವಡಿಸಲಾಗಿದೆ.