ದಾವಣಗೆರೆಯಲ್ಲಿ ಚಡ್ಡಿ ಗ್ಯಾಂಗ್ ನಿಂದ ಒಂದೇ ರಾತ್ರಿಯಲ್ಲಿ 6 ಮನೆಗಳು ಮತ್ತು 2 ದೇವಸ್ಥಾನಗಳ ಕಳ್ಳತನ

ಮಂಗಳೂರು – ಮಂಗಳೂರಿನ ನಂತರ ದಾವಣಗೆರೆಯಲ್ಲಿ ಚಡ್ಡಿ ಗ್ಯಾಂಗ್ ನಿಂದ ಒಂದೇ ರಾತ್ರಿಯಲ್ಲಿ 6 ಮನೆಗಳು ಮತ್ತು 2 ದೇವಸ್ಥಾನಗಳ ಕಳ್ಳತನ ಮಾಡಿದ್ದಾರೆ. ಈ ಮಾಹಿತಿ ಸಿಸಿಟಿವಿ ಮೂಲಕ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ರಾತ್ರಿ ವೇಳೆ ಟೀ-ಶರ್ಟ್ಸ್ ಮತ್ತು ಚಡ್ಡಿ ಹಾಕಿಕೊಂಡು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ನ್ಯಾಮತಿ ಗ್ರಾಮದ ಕಾಳಮ್ಮ ದೇವಸ್ಥಾನ ಹಾಗೂ ನೆಹರೂ ರಸ್ತೆಯಲ್ಲಿರುವ ಮೂಕಾಂಬಿಕಾ ದೇವಸ್ಥಾನದಲ್ಲಿ ಈ ತಂಡ ಕಳ್ಳತನ ನಡೆಸಿತ್ತು. ಆ ನಂತರ 6 ಮನೆಗಳಲ್ಲಿಯೂ ಕಳ್ಳತನ ಮಾಡಿದ್ದಾರೆ.