‘Swastik’ And ‘Hackenkreuz’ : ಹಿಂದೂಗಳ ‘ಸ್ವಸ್ತಿಕ’ ಮತ್ತು ನಾಝಿಯ ‘ಹ್ಯಾಕೇನಕ್ರೂಝ’ ಎರಡೂ ಬೇರೆ ಬೇರೆ !

ಅಮೇರಿಕಾದ ಶಿಕ್ಷಣ ಇಲಾಖೆಯ ಮಾನ್ಯತೆ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿನ ಓರೆಗಾನಿನ ಶಿಕ್ಷಣ ಇಲಾಖೆಯ ಹಿಂದುಗಳ ಪವಿತ್ರ ಧಾರ್ಮಿಕ ಪ್ರತೀಕ ‘ಸ್ವಸ್ತಿಕ’ ಮತ್ತು ನಾಝಿಯ ‘ಹಾಕೇನಕ್ರೂಜ್’ ಇದರಲ್ಲಿ ವ್ಯತ್ಯಾಸವಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ‘ಸ್ವಸ್ತಿಕ’ ಮತ್ತು ‘ಹಾಕೇನಕ್ರೂಜ್’ ಇದರಲ್ಲಿ ಬಹಳಷ್ಟು ಸಾಮ್ಯತೆ ಇರುವುದರಿಂದ ಕೆಲವು ಜನರಿಗೆ ಗೊಂದಲ ಆಗುತ್ತಿರುವ ಹಿನ್ನೆಲೆಯಲ್ಲಿ ಓರೇಗಾನನ ಶಿಕ್ಷಣ ಇಲಾಖೆಯ ಈ ನಿಲುವು ಮಹತ್ವದೆಂದು ತಿಳಿಯಲಾಗಿದೆ.

ಓರೇಗಾನ್ ಶಿಕ್ಷಣ ಇಲಾಖೆಯ ಸ್ವಸ್ತಿಕದ ವರ್ಣನೆ ಹಿಂದೂ, ಬೌದ್ಧ, ಯಾಹುದಿ, ಜೈನ ಧರ್ಮ ಮತ್ತು ಕೆಲವು ಮೂಲ ಅಮೆರಿಕ ಧರ್ಮ ಮತ್ತು ಸಂಸ್ಕೃತಿಯಲ್ಲಿ ಶುಭ ಸೂಚಕ ಪ್ರತೀಕ’ ಎಂದು ವರ್ಣಿಸಿದ್ದಾರೆ. ಶಿಕ್ಷಣ ಇಲಾಖೆಯು, ಸಂಖ್ಯೆಯ ಆಕಾರ ನೀಡಿರುವ ಕ್ರಾಸ್ ಪ್ರತಿಮೆಗೆ ಸಾಮಾನ್ಯವಾಗಿ ಸ್ವಸ್ತಿಕ ಎಂದು ಹೇಳುತ್ತಾರೆ. (ಸ್ವಸ್ತಿಕ ಇದು ಸಾವಿರಾರು ವರ್ಷಗಳಿಂದ ಇದೆ, ಅದಕ್ಕೆ ಸಮಾನ ಇರುವ ಹಾಕೇನಕ್ರೂಜ್ ಇದು ಇತ್ತೀಚಿಗೆ ಬಂದಿದೆ. ಸ್ವಸ್ತಿಕಕ್ಕೆ ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವ ಇದೆ. ಇದನ್ನು ಕೂಡ ಭಾರತೀಯರಿಗೆ ವಿದೇಶಿ ನಾಗರಿಕರು ತಿಳಿಸಿ ಹೇಳಬೇಕು ! – ಸಂಪಾದಕರು) ತದ್ವಿರುದ್ಧ ನಾಝೀ ಮತ್ತು ನೀವೋ ನಾಝೀ ಚಿನ್ಹೆಗೆ ‘ಹಾಕೇನಕ್ರೂಜ್’ ಎಂದು ಹೇಳುತ್ತಾರೆ. ಇದು ‘ಹುಕ್ಡ ಕ್ರಾಸ’ಗಾಗಿ ಜರ್ಮನ ಶಬ್ದ ಇರುವುದು. ನಾಝಿ ಜರ್ಮನ ಆಡಳಿತಗಾರ ಹಿಟ್ಲರ್ ಇವನ ಹಾಕೇನಕ್ರೂಜ್ ಈ ಚಿನ್ಹೆ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟದ್ದಾಗಿದೆ. ಇದು ಕ್ರೈಸ್ತ ಕ್ರಾಸಗೆ ಸಂಬಂಧಿತ ಪ್ರತಿಕವಾಗಿದೆ. ಆದ್ದರಿಂದ ಅದರ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದು ಅಮೇರಿಕಾದ ಶಿಕ್ಷಣ ಇಲಾಖೆ ಹೇಳಿದೆ.

ಪವಿತ್ರ ಸ್ವಸ್ತಿಕದ ಮಹತ್ವ ಸಮಾಜದಲ್ಲಿ ವತ್ತಿ ಹೇಳುವ ಕಾರ್ಯ ಈ ಮುಂದೆಯೂ ನಡೆಯುತ್ತದೆ ! – ಹಿಂದೂ ಅಮೆರಿಕನ್ ಫೌಂಡೇಶನ್

‘ಹಿಂದೂ ಅಮೆರಿಕನ್ ಫೌಂಡೇಶನ’ನಿಂದ ಇದರ ವರ್ಣನೆ ‘ಐತಿಹಾಸಿಕ ನಿರ್ಣಯ’ ಎಂದು ಹೇಳಿದೆ. ಫೌಂಡೇಶನ್, ‘ಹಿಂದೂಗಳ ಬೆಂಬಲ ಮತ್ತು ಸಮರ್ಪಣೆ ಇಲ್ಲದೆ ಈ ವಿಜಯ ಸಾಧ್ಯವಾಗುತ್ತಿರಲಿಲ್ಲ. ಮುಂದಿನ ಪೀಳಿಗೆಗಾಗಿ ಹಿಂದೂಗಳ ಪ್ರತೀಕದ ಪಾವಿತ್ರತೆ ಕಾಪಾಡುವುದಕ್ಕಾಗಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ. ಪವಿತ್ರ ಸ್ವಸ್ತಿಕದ ಮಹತ್ವ ಸಮಾಜದಲ್ಲಿ ಗುರುತಿಸುವ ಕಾರ್ಯ ಈ ಮುಂದೆಯು ಮುಂದು ವರೆಯುವುದು ಎಂದು ಹೇಳಿದೆ.