Bageshwar Dham Name Plate : ಬಾಗೇಶ್ವರ ಧಾಮನ ಎಲ್ಲಾ ಅಂಗಡಿದಾರರು ೧೦ ದಿನದ ಒಳಗೆ ಹೆಸರಿನ ಫಲಕ ಹಾಕಬೇಕು ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಬಾಗೇಶ್ವರ ಧಾಮ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿನ ಛತರಪುರ ಜಿಲ್ಲೆಯಲ್ಲಿನ ಬಾಗೇಶ್ವರ ಧಾಮನ ಮುಖ್ಯಸ್ಥ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಂತೆ ಬಾಗೇಶ್ವರ ಧಾಮ ಇಲ್ಲಿಯ ಎಲ್ಲಾ ಅಂಗಡಿದಾರರು ಅವರ ಹೆಸರಿನ ಫಲಕಗಳನ್ನು ಹಾಕಲು ಕರೆ ನೀಡಿದ್ದಾರೆ. ಇಲ್ಲಿಯ ಎಲ್ಲಾ ಅಂಗಡಿಗಳು ಮತ್ತು ಹೋಟೆಲಗಳ ಪ್ರವೇಶದ್ವಾರದ ಮೇಲೆ ಮಾಲೀಕರ ಹೆಸರು ಬರೆಯುವುದು ಆವಶ್ಯಕವಾಗಿದ್ದು ಅದು ಒಳ್ಳೆಯ ವಿಷಯವೇ ಆಗಿದೆ, ಎಂದು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಹೇಳಿದರು. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರಕಾರದಿಂದ ಕಾವಡ ಯಾತ್ರೆಯ ದಾರಿಯಲ್ಲಿನ ಹೋಟೆಲಗಳು, ರೆಸ್ಟೋರೆಂಟಸ್, ಢಾಬಾಗಳು ಮತ್ತು ಇತರ ಆಹಾರ ಪದಾರ್ಥ ಮಾರಾಟಗಾರರು ಸೂಚನಾ ಫಲಕ ಹಾಕಿ ಅದರ ಮೇಲೆ ಮಾಲೀಕರ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಬರೆಯುವಂತೆ ಆದೇಶ ನೀಡಿದ್ದಾರೆ. ಇದೇ ರೀತಿ ಮಧ್ಯಪ್ರದೇಶದಲ್ಲಿ ಕೂಡ ಈ ರೀತಿಯ ನಿಯಮ ಜಾರಿಗೊಳಿಸಲು ಆಗ್ರಹಿಸಲಾಗುತ್ತಿದೆ.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಮಾತು ಮುಂದುವರಿಸಿ, ‘ನಮಗೆ ರಾಮನ ಬಗ್ಗೆ ಆಗಲಿ ರಹಿಮನ ಬಗ್ಗೆ ಆಗಲಿ ಯಾವ ಸಮಸ್ಯೆಯೂ ಇಲ್ಲ. ನಮಗೆ ಅಸುರರ ಬಗ್ಗೆ ಸಮಸ್ಯೆ ಇದೆ. ಆದ್ದರಿಂದ ನಿಮ್ಮ ಅಂಗಡಿಯ ಹೊರಗೆ ಹೆಸರಿನ ಫಲಕ ಹಾಕಿ, ಇದರಿಂದ ಬಂದು ಹೋಗುವ ಭಕ್ತರ ಧರ್ಮ ಅಥವಾ ಅವರ ಪಾವಿತ್ರಕ್ಕೆ ಧಕ್ಕೆ ಬರುವುದಿಲ್ಲ. ಬಾಗೇಶ್ವರ ಧಾಮ ಇಲ್ಲಿಯ ಎಲ್ಲಾ ಅಂಗಡಿದಾರರು ೧೦ ದಿನದ ಒಳಗೆ ಹೆಸರಿನ ಫಲಕಗಳನ್ನು ಹಾಕಬೇಕು, ಇಲ್ಲವಾದರೆ ಧ್ಯಾನ ಸಮಿತಿಯಿಂದ ಕಾನೂನಿನ ರೀತಿ ಕ್ರಮ ಜರುಗಿಸಲಾಗುವುದು, ಎಂದು ನಮ್ಮ ಆದೇಶವಿದೆ’, ಎಂದು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಹೇಳಿದರು.

ತೃಣಮೂಲ ಕಾಂಗ್ರೆಸ್ಸಿನ ಸಂಸದ ಮಹುವಾ ಮೋಯಿತ್ರ ಇವರಿಂದ ನ್ಯಾಯಾಲಯಕ್ಕೆ ಮೊರೆ !

ತೃಣಮೂಲ ಕಾಂಗ್ರೆಸ್ಸಿನ ಸಂಸದ ಮಹುವಾ ಮೋಯಿತ್ರ ಇವರು ಉತ್ತರಪ್ರದೇಶ ಮತ್ತು ಉತ್ತರಾಖಂಡ ಸರಕಾರದ ಈ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೋಯಿತ್ರಾ ಇವರು ಎರಡು ರಾಜ್ಯ ಸರಕಾರಗಳು ನೀಡಿರುವ ಆದೇಶಗಳಿಗೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿಯಲ್ಲಿ ಹೇಳಿದ್ದಾರೆ. ಅವರು, ಇಂತಹ ಆದೇಶ ಜನಾಂಗದಲ್ಲಿನ ವಿವಾದಕ್ಕೆ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು. (ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕೂಗಾಡುವ ಸೆಕ್ಯುಲರವಾದಿಗಳು ಅಂಗಡೀದಾರರ ಬಗ್ಗೆ ಗಿರಾಕಿಗಳಿಗೆ ಮಾಹಿತಿ ಪೂರೈಸುವುದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಧಿಕಾರ ಅನಿಸುವುದಿಲ್ಲವೇ ? – ಸಂಪಾದಕರು)