‘ಅಂಗಡಿ ಮಾಲೀಕರು ಹೆಸರಿನ ಬದಲು `ಅಂಗಡಿಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿಯೇ?’ ಎನ್ನುವುದನ್ನು ನಮೂದಿಸುವಂತೆ ನ್ಯಾಯಾಲಯದ ಆದೇಶ !
ನವ ದೆಹಲಿ – ಕಾವಡ ಯಾತ್ರೆ ಮಾರ್ಗದಲ್ಲಿರುವ ಅಂಗಡಿ ಮಾಲೀಕರಿಗೆ ಅವರ ಹೆಸರನ್ನು ಬರೆಯುವಂತೆ ಉತ್ತರ ಪ್ರದೇಶದ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ನೀಡಿ `ಕಾವಡ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಕಾರರು ತಮ್ಮ ಗುರುತನ್ನು ತಿಳಿಸುವ ಆವಶ್ಯಕತೆಯಿಲ್ಲ. ಅಂಗಡಿಕಾರರಿಗೆ ಕೇವಲ ಆಹಾರ ಪದಾರ್ಥಗಳ ಪ್ರಕಾರಗಳನ್ನು ಘೋಷಿಸಬೇಕಾಗುವುದು. ಅಂಗಡಿ ಮಾಲೀಕರು `ಅಂಗಡಿಯಲ್ಲಿ ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುಲಾಗುತ್ತಿದೆ’ ಎಂಬುದನ್ನು ನಮೂದಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 26 ರಂದು ನಡೆಯಲಿದೆ. ಉತ್ತರ ಪ್ರದೇಶ ಸರಕಾರದ ಆದೇಶಕ್ಕೆ ‘ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್’ ಈ ಸ್ವಯಂಸೇವಾ ಸಂಸ್ಥೆಯು ಮನವಿ ಮಾಡಿದೆ.
1. ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಭಟ್ಟಿ ಮಾತನಾಡಿ, ನನ್ನದೂ ಒಂದು ಅನುಭವವಿದೆ. ಕೇರಳದಲ್ಲಿ ಒಂದು ಸಸ್ಯಾಹಾರಿ ಹೋಟೆಲ್ ಇತ್ತು, ಅದು ಹಿಂದೂಗಳದ್ದಾಗಿತ್ತು, ಇನ್ನೊಂದು ಮುಸಲ್ಮಾನರದ್ದಾಗಿತ್ತು. ನಾನು ಒಂದು ಮುಸಲ್ಮಾನ ಸಸ್ಯಾಹಾರಿ ಹೊಟೆಲ್ ಗೆ ಹೋಗುತ್ತಿದ್ದೆನು; ಏಕೆಂದರೆ ಅದರ ಮಾಲೀಕನು ದುಬೈನಿಂದ ಬಂದಿದ್ದನು. ಸ್ವಚ್ಛತೆಯ ವಿಷಯದಲ್ಲಿ ಅವನು ಅಂತರರಾಷ್ಟ್ರೀಯ ಮಾನದಂಡವನ್ನು ಅನುಸರಿಸುತ್ತಿದ್ದನು ಎಂದು ಹೇಳಿದರು.
2. ಅರ್ಜಿದಾರ ಸಿ.ಯು. ಸಿಂಗ ಮಾತನಾಡಿ, ರಾಜ್ಯ ಆಡಳಿತವು ಅಂಗಡಿಗಳ ಮೇಲೆ ಅವರ ಹೆಸರು ಮತ್ತು ಮೊಬೈಲ ಸಂಖ್ಯೆಯನ್ನು ನಮೂದಿಸಲು ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾನೂನು ಪೊಲೀಸರಿಗೆ ಹಾಗೆ ಮಾಡುವ ಅಧಿಕಾರವನ್ನು ನೀಡುವುದಿಲ್ಲ. ಯಾವ ರೀತಿಯ ಆಹಾರವನ್ನು ನೀಡಲಾಗುತ್ತಿದೆ ಎಂಬುದನ್ನು ತನಿಖೆ ಮಾಡುವ ಅಧಿಕಾರ ಮಾತ್ರ ಪೊಲೀಸರಿಗೆ ಇದೆ. ಸಿಬ್ಬಂದಿ ಅಥವಾ ಮಾಲೀಕರ ಹೆಸರನ್ನು ಅಂಗಡಿಗಳ ಮೇಲೆ ಬರೆಯುವುದನ್ನು ಕಡ್ಡಾಯಗೊಳಿಸಲಾಗುವುದಿಲ್ಲ ಎಂದು ಹೇಳಿದರು.
3. ಈ ಬಗ್ಗೆ ನ್ಯಾಯಾಲಯವು, ಸಿಬ್ಬಂದಿ ಮತ್ತು ಮಾಲೀಕರು ತಮ್ಮ ಹೆಸರನ್ನು ಬರೆಯುವುದು ಇಚ್ಛೆ ವಿನಃ, ಕಡ್ಡಾಯವಲ್ಲ ಎಂದು ಹೇಳಿದೆ.
4. ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಈ ರಾಜ್ಯಗಳು ಹೆಸರನ್ನು ನಮೂದಿಸುವ ಸಂದರ್ಭದಲ್ಲಿ ನೀಡಿರುವ ಆದೇಶಗಳನ್ನು ತಡೆಹಿಡಿದಿದೆ. ನ್ಯಾಯಾಲಯವು ಈ ಮೂರು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದು ಉತ್ತರ ನೀಡುವಂತೆ ಸೂಚಿಸಿದೆ.
‘Muslim Rashtriya Manch’ welcomes ‘nameplate’ order for Kanwar Yatra in Uttar Pradesh
सुप्रीम कोर्ट I कावड़ यात्रा#SupremeCourtOfIndia pic.twitter.com/aI8bWHDpnp
— Sanatan Prabhat (@SanatanPrabhat) July 22, 2024
ಸಂಪಾದಕೀಯ ನಿಲುವುಸಸ್ಯಾಹಾರಿ ಆಹಾರ ಪದಾರ್ಥಗಳಲ್ಲಿ ತಪ್ಪು ಅಂಶಗಳಿದ್ದರೆ, ಉದಾ. ಅದರಲ್ಲಿ ಉಗುಳಿದ್ದರೆ ಅದನ್ನು ಪತ್ತೆ ಮಾಡುವುದು ಹೇಗೆ ?, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ! |