ಕರ್ಫ್ಯೂನ ಆದೇಶವಿರುವಾಗಲೂ ಜಿಲ್ಲಾಧಿಕಾರಿಗಳ ಕಚೇರಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಘೋಷಣೆಗಳನ್ನು ನೀಡಿದರು!
ಕೊಲ್ಲಾಪುರ – ಜುಲೈ 14 ರಂದು ವಿಶಾಲಗಡ ಮತ್ತು ಗಜಾಪುರದಲ್ಲಿ ಕೆಲವರು ಮುಸಲ್ಮಾನರ ಧಾರ್ಮಿಕ ಸ್ಥಳವಾಗಿರುವ ದರ್ಗಾ, ಮಸೀದಿ ಮತ್ತು ಮುಸ್ಲಿಂ ಸಮುದಾಯದ ಮೇಲೆ ಕೆಲವರು ದಾಳಿ ಮಾಡಿದರು. ಇದರಲ್ಲಿ ಮುಸ್ಲಿಮರ ಮನೆ, ಅಂಗಡಿಗಳಿಗೆ ಹಾನಿಯಾಗಿದೆ. ಈ ಘಟನೆಯಿಂದಾಗಿ ಕೊಲ್ಲಾಪುರದಲ್ಲಿ ಧಾರ್ಮಿಕ ಉದ್ವಿಗ್ನತೆ ಉಂಟಾಗಿದೆ. ಇದಕ್ಕೆಲ್ಲ ಮಾಜಿ ಸಂಸದ ಛತ್ರಪತಿ ಸಂಭಾಜಿ ರಾಜೇ ಕಾರಣವಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವಿಶಾಲಗಡ ಮತ್ತು ಗಜಾಪುರ ಗ್ರಾಮಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದಾಳಿ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ‘ಎಂ.ಐ.ಎಂ.’ನ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಸಂಪಾದಕೀಯ ನಿಲುವುಎಂ.ಐ.ಎಂ.ನ ಮತಾಂಧರು ಮೊದಲು ತಮ್ಮ ಮತಾಂಧಸಹೋದರರು ವಿಶಾಲಗಡವನ್ನು ಏಕೆ ಅತಿಕ್ರಮಿಸಿದರು? ಇದನ್ನು ಉತ್ತರಿಸಲಿ ಸರಕಾರದ ಆದೇಶಗಳನ್ನು ಧಿಕ್ಕರಿಸಿ ಘೋಷಣೆ ಮಾಡುವವರ ವಿರುದ್ಧ ಆಡಳಿತ ಏನು ಕ್ರಮ ಕೈಗೊಳ್ಳುತ್ತದೆ ? |