Guru Purnima Celebration in MP: ಗುರುಪೂರ್ಣಿಮೆಯಂದು ಮಧ್ಯಪ್ರದೇಶದ ಎಲ್ಲಾ ಶಾಲೆಗಳಲ್ಲಿ 2 ದಿನಗಳ ಕಾರ್ಯಕ್ರಮದ ಆಯೋಜನೆ

ಭೋಪಾಲ್ (ಮಧ್ಯಪ್ರದೇಶ) – ರಾಜ್ಯದ ಬಿಜೆಪಿ ಸರಕಾರವು ಜುಲೈ 20 ಮತ್ತು 21 ರಂದು ಗುರುಪೂರ್ಣಿಮೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ತಿಳಿಸಿದೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

1. ಮಧ್ಯಪ್ರದೇಶದ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ, ಜುಲೈ 20 ರಂದು ಪ್ರಾರ್ಥನೆಯ ನಂತರ ಶಿಕ್ಷಕರು ಗುರುಪೂರ್ಣಿಮೆ ಮತ್ತು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಒತ್ತಿಹೇಳುತ್ತಾರೆ. ಇದರ ನಂತರ, ಪ್ರಾಚೀನ ಕಾಲದಲ್ಲಿ ಪ್ರಚಲಿತದಲ್ಲಿರುವ ಗುರುಕುಲ ಪದ್ಧತಿ ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ಅದರ ಪರಿಣಾಮ ಬಗ್ಗೆ ಪ್ರಬಂಧವನ್ನು ಬರೆಯಲಾಗುವುದು.

2. ಮರುದಿನ ಅಂದರೆ ಜುಲೈ 21ರಂದು ಶಾಲೆಗಳಲ್ಲಿ ಸರಸ್ವತಿ ವಂದನೆ, ಗುರುವಂದನೆ, ದೀಪಾ ಪ್ರಜ್ವಲನೆ, ಮತ್ತು ಪುಷ್ಪ ಸಮರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಗುರು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಗುವುದು. ಇದಾದ ನಂತರ ಶಿಕ್ಷಕರು ಮತ್ತು ಗುರುಗಳ ಕುರಿತು ಭಾಷಣ ನಡೆಯಲಿದೆ.

3. ಜುಲೈ 16 ರಂದು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ಗುರುಪೂರ್ಣಿಮಾ ಮಹೋತ್ಸವದ ಎರಡನೇ ದಿನ ಸಂತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಇದರೊಂದಿಗೆ ಸಂಬಂಧಪಟ್ಟ ಶಾಲೆಯ ನಿವೃತ್ತ ಶಿಕ್ಷಕರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಕೂಡ ಈ ಅವಧಿಯಲ್ಲಿ ಕರೆಸುವಂತೆ ಕೋರಲಾಗಿದೆ.

‘ಶಾಲೆಗಳಲ್ಲಿ ಗುರುಪೂರ್ಣಿಮೆಯನ್ನು ಆಚರಿಸುವುದು ಜಾತ್ಯತೀತತೆಗೆ ವಿರುದ್ಧವಾಗಿದೆಯಂತೆ !’ – ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್

ಸಂವಿಧಾನದ ಅವಿಭಾಜ್ಯ ಅಂಗವಾದ ಜಾತ್ಯತೀತತೆಯ ಭಾವನೆಗೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಶಾಲಾ ಶಿಕ್ಷಣ ಇಲಾಖೆಯ ಆದೇಶಕ್ಕೆ ವಿರೋಧಿಸಿದೆ. ಕಾಂಗ್ರೆಸ್ ರಾಜ್ಯ ವಕ್ತಾರ ಅಬ್ಬಾಸ್ ಹಫೀಜ್ ಮಾತನಾಡಿ, ಭಾರತವು ಜಾತ್ಯತೀತ ದೇಶವಾಗಿದೆ, ಅಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳ ವಿದ್ಯಾರ್ಥಿಗಳು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಾರೆ; ಆದ್ದರಿಂದ, ಶಾಲೆಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ ಯಾವುದೇ ಹೊಸ ಸಂಪ್ರದಾಯವನ್ನು ಪರಿಚಯಿಸುವುದು ವಿವಾದವನ್ನು ಸೃಷ್ಟಿಸಬಹುದು. ಒಂದು ಧರ್ಮಕ್ಕೆ ಸಂಬಂಧಿಸಿದ ಸಂಪ್ರದಾಯಗಳನ್ನು ಎಲ್ಲರಿಗೂ ಕಡ್ಡಾಯಗೊಳಿಸಿದರೆ, ಇತರ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪರಿಚಯಿಸಬೇಕೆಂದು ಒತ್ತಾಯಿಸಬಹುದು ಎಂದು ಹೇಳಿದರು.

 

ಸಂಪಾದಕೀಯ ನಿಲುವು

  • ಗುರುಗಳು ಯಾವುದೇ ಧರ್ಮಕ್ಕೆ ಸೇರಿದವರಲ್ಲ, ಬದಲಾಗಿ ಅವರು ಶಿಷ್ಯ, ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಇದೂ ತಿಳಿಯದ ಕಾಂಗ್ರೆಸ್ ಹಿಂದೂ ದ್ವೇಷಿಯೇ ಆಗಿದೆ !
  • ಕಾಂಗ್ರೆಸ್ಸಿನ ಹಿಂದೂ ನಾಯಕರ ಆಲೋಚನೆಯೂ ಇದೇನಾ?, ಎಂಬುದು ಅವರೇ ಸ್ಪಷ್ಟಪಡಿಸಬೇಕು!