ಭಾರತೀಯ ವಿದ್ಯಾರ್ಥಿನಿಯ ಸಾವಿಗೆ ನಕ್ಕಿದ ಅಮೇರಿಕನ್ ಪೊಲೀಸ್ ಅಧಿಕಾರಿ ಅಮಾನತ್ತು !

ವಾಷಿಂಗ್ಟನ್ – ಅಮೇರಿಕೆಯಲ್ಲಿ ಓರ್ವ ಭಾರತೀಯ ವಿದ್ಯಾರ್ಥಿನಿಯ ಸಾವಿನ ನಂತರ ಸಂವೇದನಾರಹಿತ ಹೇಳಿಕೆ ನೀಡಿ ನಕ್ಕಿದ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ. ವಾಷಿಂಗ್ಟನ್‌ನ ನಾರ್ತಈಸ್ಟರ್ನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಜಾನ್ಹವಿ ಕಂದುಲಾ (ವಯಸ್ಸು 23) ಇವಳು ಜನವರಿ 23 ರಂದು ರಸ್ತೆಯನ್ನು ದಾಟುತ್ತಿರುವಾಗ ಪೊಲೀಸ್ ವಾಹನ ಡಿಕ್ಕಿ ಹೊಡೆದಿದೆ. ವಾಹನವನ್ನು ಕೆವಿನ್ ಡೇವ್ ಹೆಸರಿನ ಅಧಿಕಾರಿ ಓಡಿಸುತ್ತಿದ್ದರು ಮತ್ತು ಎರಡನೆಯ ಪ್ರಕರಣದ ತನಿಖೆ ನಡೆಸಲು ಸಂಬಂಧಪಟ್ಟ ಸ್ಥಳಕ್ಕೆ ತಲುಪಬೇಕಾಗಿದ್ದರಿಂದ ಆತ ವೇಗವಾಗಿ ವಾಹನವನ್ನು ಓಡಿಸುತ್ತಿದ್ದನು. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಕಂದುಲ 100 ಅಡಿ ದೂರಕ್ಕೆ ಬಿದ್ದಿದ್ದಾಳೆ. ಸಿಯಾಟಲ್ ಪೊಲೀಸ್ ಇಲಾಖೆಯಿಂದ ಪ್ರಸಾರವಾಗಿರುವ ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿ ಡೇನಿಯಲ್ ಆರ್ಡರ್ ಈ ಭೀಕರ ಅಪಘಾತದ ಸಮಯದಲ್ಲಿ ನಗುವುದು ಮತ್ತು ವ್ಯಂಗ್ಯವಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬರುತ್ತದೆ.

ಶಿಸ್ತು ಕ್ರಮದ ಕಾರ್ಯಾಚರಣೆಯ ವರದಿಯಲ್ಲಿ, ಪೊಲೀಸ್ ಅಧಿಕಾರಿಯ ಕೃತಿಯಿಂದ ಸಿಯಾಟಲ್ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ. ಈ ಅಧಿಕಾರಿ ಹುದ್ದೆಯಲ್ಲಿರುವುದು, ಇಡೀ ಪೊಲೀಸ್ ಇಲಾಖೆಗೆ ಅವಮಾನ ಮಾಡಿದಂತಾಗುತ್ತದೆ. ಈ ಕಾರಣದಿಂದಾಗಿ ಅವನನ್ನು ಅಮಾನತ್ತುಗೊಳಿಸಲಾಗಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇದರಿಂದ ಅಮೇರಿಕಾದ ಪೊಲೀಸರ ಮನಸ್ಸಿನಲ್ಲಿ ಭಾರತೀಯರ ಬಗ್ಗೆ ಎಷ್ಟು ದ್ವೇಷವಿದೆ ಎಂಬುದು ಬಹಿರಂಗವಾಗುತ್ತದೆ ! ಇಂತಹವರಿಂದ ಭಾರತೀಯರಿಗೆ ಎಂದಾದರೂ ನ್ಯಾಯ ಸಿಗುವುದೇ ?