ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ !
ನವದೆಹಲಿ – ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವುದು ಮತ್ತು ಮುಸ್ಲಿಮರಿಗೆ ಇಲ್ಲಿ ವಾಸಿಸಲು ಅವಕಾಶ ನೀಡುವುದು ಎಲ್ಲಕ್ಕಿಂತ ದೊಡ್ಡ ತಪ್ಪಾಗಿತ್ತು. ಈ ತಪ್ಪಿನಿಂದಾಗಿಯೇ ತೌಕೀರ್ ರಜಾ ಅವರಂತಹವರು ಇಲ್ಲಿ ಉಳಿದುಕೊಂಡಿದ್ದು, ಅದರಿಂದಾಗಿಯೇ ಈ ಪರಿಸ್ಥಿತಿ ಉಂಟಾಗಿದೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಬರೇಲಿಯಲ್ಲಿ (ಉತ್ತರ ಪ್ರದೇಶ) ಇತ್ತೆಹಾದ್ ಮಿಲ್ಲತ್ ಕೌನ್ಸಿಲ್ ಅಧ್ಯಕ್ಷ ಮೌಲಾನಾ ತೌಕೀರ್ ರಜಾ ಅವರು 23 ಹಿಂದೂ ಹುಡುಗರು ಮತ್ತು ಹುಡುಗಿಯರನ್ನು ಮತಾಂತರ ಮತ್ತು ವಿವಾಹ ಮಾಡಿಸುವ ಬಗ್ಗೆ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿ ಮೇಲಿನ ಹೇಳಿಕೆ ನೀಡಿದ್ದಾರೆ. ಹಿಂದೂಗಳನ್ನು ಪರೀಕ್ಷಿಸಬೇಡಿ, ಶೀಘ್ರದಲ್ಲೇ ಹಿಂದೂಗಳ ಭಾವನೆಗಳು ಸ್ಫೋಟಗೊಳ್ಳುತ್ತವೆ ಎಂದು ಗಿರಿರಾಜ್ ಸಿಂಗ್ ತೌಕೀರ್ ರಜಾಗೆ ಎಚ್ಚರಿಕೆ ನೀಡಿದರು.
ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಅದನ್ನು ಉಲ್ಲೇಖಿಸಿದ ಗಿರಿರಾಜ್ ಸಿಂಗ್ ಅವರು, ‘ಈ ವಿಷಯದಲ್ಲಿ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಏಕೆ ಮೌನವಾಗಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ. ಗಿರಿರಾಜ ಸಿಂಹ ಇವರು, ಬಂಗಾಳದಿಂದ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಮಾಡಲು ಮಮತಾ ಬ್ಯಾನರ್ಜಿ ಸಂಕಲ್ಪ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಅವರಿಗೆ ಹಿಂದೂಗಳಲ್ಲಿ ನಂಬಿಕೆ ಇಲ್ಲ. ಈಗ ದೇಶದಲ್ಲಿ ಯಾವುದೇ ಹೊಸ ರಾಜ್ಯ ರಚನೆಯಾದರೆ ಅದು ಮುಸ್ಲಿಂ ರಾಜ್ಯವಾಗುತ್ತದೆ ಎಂದು ಹೇಳಿದರು.