ನಂದ್ಯಾಲ (ಆಂಧ್ರಪ್ರದೇಶ) – ಇಲ್ಲಿ ಜುಲೈ 7 ರಂದು ಶಾಲೆಯಲ್ಲಿ ಕಲಿಯುತ್ತಿದ್ದ ಮೂವರು ಅಪ್ರಾಪ್ತ ವಿದ್ಯಾರ್ಥಿಗಳು ಒಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮತ್ತು ಹತ್ಯೆ ಮಾಡಿ ಶವವನ್ನು ಕೃಷ್ಣ ನದಿಯಲ್ಲಿ ಎಸೆದಿದ್ದರು. ಈ ಪ್ರಕರಣದಲ್ಲಿ ಪೊಲೀಸರು ನಡೆಸಿರುವ ತನಿಖೆಯಲ್ಲಿ ಆರೋಪಿಗಳು, ಅಪರಾಧ ಮಾಡುವ ಮುನ್ನ ಮೊಬೈಲನಲ್ಲಿ ಅಶ್ಲೀಲ ವೀಡಿಯೋ ನೋಡಿದ ನಂತರ ಅವಳ ಮೇಲೆ ಬಲಾತ್ಕಾರ ಮಾಡಿದ್ದಾಗಿ ಹೇಳಿದ್ದಾರೆ. 3 ಆರೋಪಿಗಳ ಪೈಕಿ 2 ಆರೋಪಿಗಳು 12 ವರ್ಷ ವಯಸ್ಸಿನವರು ಮತ್ತು 6ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಮೂರನೇ ಆರೋಪಿ 13 ವರ್ಷ ವಯಸ್ಸಿನವನಾಗಿದ್ದು, 7ನೇ ತರಗತಿ ಕಲಿಯುತ್ತಿದ್ದಾನೆ.
ಸಂಪಾದಕೀಯ ನಿಲುವುಅಪ್ರಾಪ್ತ ಮಕ್ಕಳ ವರೆಗೆ ಪೋರ್ನ್ ವಿಡಿಯೋ ತಲುಪುತ್ತಿರುವುದು, ಅವರ ಪೋಷಕರಿಗೆ ಹಾಗೆಯೇ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ ! |