ಭೋಪಾಲ್ – ನಗರದಿಂದ ೬೫ ಕಿಲೋಮೀಟರ್ ದೂರದಲ್ಲಿರುವ ವಿದೇಶದಲ್ಲಿನ ಐತಿಹಾಸಿಕ ವಿಜಯ ದೇವಸ್ಥಾನ ಇದನ್ನು ಕ್ರೂರಿ ಔರಂಗಜೇಬನು ೧೬೮೨ ರಲ್ಲಿ ಫಿರಂಗಿ ತೋಪ್ ಮೂಲಕ ಧ್ವಂಸ ಮಾಡಿದ್ದನು. ಈಗ ಮಧ್ಯಪ್ರದೇಶ ಸರಕಾರವು ಈ ದೇವಸ್ಥಾನ ಪ್ರವಾಸಿ ತಾಣವೆಂದು ಅಭಿವೃದ್ಧಿಗೊಳಿಸುವ ನಿರ್ಣಯ ತೆಗೆದುಕೊಂಡಿದೆ. ಈ ದೇವಸ್ಥಾನದ ಮೊದಲ ಉಲ್ಲೇಖ ಅಲ್ಲಉದ್ದೀನ್ ಖಿಲಜಿ ಇವನ ಜೊತೆಗೆ ಬಂದಿರುವ ಅವನ ಮಂತ್ರಿ ಅಲ್ಬೇರುನೀ ಇವನು ಬರೆದಿರುವ ದಾಖಲೆಗಳಲ್ಲಿ ಕಂಡು ಬಂದಿದೆ. ಅವನು, ‘ಈ ದೇವಸ್ಥಾನ ೩೧೫ ಅಡಿಯತ್ತರವಾಗಿತ್ತು. ಭಾರತದಲ್ಲಿನ ಎಲ್ಲಾ ಭವ್ಯ ದೇವಸ್ಥಾನಗಳಲ್ಲಿ ಈ ದೇವಸ್ಥಾನದ ಸಮಾವೇಶವಿತ್ತು.’ ಎಂದು ಬರೆದಿದ್ದಾನೆ. ಮಧ್ಯಪ್ರದೇಶದ ಸಾಂಸ್ಕೃತಿಕ ರಾಜ್ಯ ಸಚಿವ ಧರ್ಮೇಂದ್ರ ಸಿಂಹ ಇವರು ಮಾತನಾಡಿ, ”ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಪ್ರಸಿದ್ಧ ಸ್ಥಳಗಳ ಜೀರ್ಣೋದ್ಧಾರದ ತಯಾರಿ ನಡೆಯುತ್ತಿದೆ. ನಾವು ಪುರಾತತ್ವ ಇಲಾಖೆಯೊಂದಿಗೆ ಕೆಲಸ ಮಾಡಿ ಈ ದೇವಸ್ಥಾನಗಳು ಪ್ರವಾಸಿ ತಾಣವೆಂದು ಅಭಿವೃದ್ಧಿಗೊಳಿಸುವೆವು”, ಎಂದು ಹೇಳಿದ್ದಾರೆ.
೧೦ ನೇ ಶತಮಾನದಲ್ಲಿ ದೇವಸ್ಥಾನದ ಸ್ಥಾಪನೆ !
೧೦ ನೇ ಶತಮಾನದಲ್ಲಿ ಚಾಲುಕ್ಯ ರಾಜಮನೆತನದ ರಾಜಾ ಕೃಷ್ಣ ಇವರ ಮಹಾಮಂತ್ರಿ ವಾಚಸ್ಪತಿ ಇವರ ವಿಜಯದ ಪ್ರತಿಕ ಎಂದು ಈ ದೇವಸ್ಥಾನ ಕಟ್ಟಿದ್ದರು. ಚಾಲುಕ್ಯ ಮನೆತನ ಇದು ಸೂರ್ಯವಂಶಿ ಆಗಿರುವುದರಿಂದ ಈ ದೇವಸ್ಥಾನ ಅವರ ಕುಲದೇವ ಶ್ರೀ ಭೇಲ್ಲಿಸ್ವಾಮಿ (ಸೂರ್ಯ)ಗೆ ಅರ್ಪಿಸಿದ್ದರು. ಈ ಹೆಸರಿನಿಂದ ಮುಂದೆ ಈ ಸ್ಥಳ ಭೆಲಸಾನಿ ಮತ್ತು ನಂತರ ಭೇಲಸಾ ಎಂದು ಗುರುತಿಸಲಾಯಿತು. ಕೆಲವು ಶಿಲಾ ಶಾಸನದ ಪ್ರಕಾರ ಈ ದೇವಸ್ಥಾನಕ್ಕೆ ‘ಬೀಜಮಂಡಲ’ ಅಥವಾ ‘ಚರ್ಚಿಕಾ’ ದೇವಸ್ಥಾನ ಎಂದು ಕೂಡ ಗುರುತಿಸುತ್ತಾರೆ.
ಮುಸಲ್ಮಾನ ಆಕ್ರಮಣಕಾರನು ಮೇಲಿಂದ ಮೇಲೆ ನಡೆಸಿರುವ ದಾಳಿ
೧೨೨೪ ರಲ್ಲಿ ಮೊದಲು ಇಲ್ತುತಮಿಷ ಇವನು ಈ ದೇವಸ್ಥಾನದ ಮೇಲೆ ದಾಳಿ ಮಾಡಿದನು. ನಂತರ ೧೨೫೦ ರಲ್ಲಿ ಅದರ ಜೀರ್ಣೋದ್ಧಾರ ಮಾಡಲಾಯಿತು. ಅದರ ನಂತರ ಮತ್ತೆ ೧೨೯೦ ರಲ್ಲಿ ಅಲ್ಲಾಉದ್ದೀನ್ ಖಿಲಜಿ ಇವನ ಮಂತ್ರಿ ಮಲ್ಲಿಕ್ ಕಾಫುರ್ ಇವನು ಈ ದೇವಸ್ಥಾನ ದ್ವಂಸಗೊಳಿಸಿದನು. ೧೬೮೨ ರಲ್ಲಿ ಔರಂಗಜೇಬನು ಈ ದೇವಸ್ಥಾನ ಫಿರಂಗಿ ತೋಫದಿಂದ ನಾಶಗೊಳಿಸಿದನು ಮತ್ತು ದೇವಸ್ಥಾನದ ಅವಶೇಷಗಳನ್ನು ಉಪಯೋಗಿಸಿ ಅಲ್ಲಿ ಮಸೀದಿ ಕಟ್ಟಿದನು. ಅದರ ನಂತರ ೧೭೬೦ ರಲ್ಲಿ ಪೇಶ್ವೆಯವರು ಈ ದೇವಸ್ಥಾನಕ್ಕೆ ನೀಡಿರುವ ಮಸೀದಿಯ ಸ್ವರೂಪ ನಾಶ ಮಾಡಲಾಯಿತು.
ಸಂಪಾದಕೀಯ ನಿಲುವುಮುಸಲ್ಮಾನ ದಾಳಿಕೋರರಿಂದ ನಾಶ ಮಾಡಿರುವ ಭಾರತದಲ್ಲಿನ ಎಲ್ಲಾ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವುದು ಆವಶ್ಯಕವಾಗಿದೆ; ಆದರೆ ಅವುಗಳು ಪ್ರವಾಸಿ ತಾಣ ಎಂದು ಅಭಿವೃದ್ಧಿಪಡಿಸದೇ ಧಾರ್ಮಿಕ ಸ್ಥಳವೆಂದು ಅಭಿವೃದ್ಧಿಯಾದರೆ ಭಕ್ತರಿಗೆ ಅದರ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುವುದು, ಇದನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು ! |