ನವ ದೆಹಲಿ – ಕೆಲವು ದಿನಗಳ ಹಿಂದೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಭಾರತೀಯ ಗಾಯಕ ದಿಲ್ಜಿತ್ ದೋಸಾಂಝ ಅವರನ್ನು ಟೊರೊಂಟೊದಲ್ಲಿ ಭೇಟಿಯಾಗಿದ್ದರು. ಇಲ್ಲಿನ ರೋಜರ್ಸ್ ಸೆಂಟರ್‌ನಲ್ಲಿ ನಡೆಯಲಿದ್ದ ಅವರ ಕಾರ್ಯಕ್ರಮದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿರುವ ಬಗ್ಗೆ ಅವರನ್ನು ಅಭಿನಂದಿಸಿದ್ದರು. ಆ ಸಮಯದಲ್ಲಿ, ಟ್ರುಡೊ ಅವರು ಅವರನ್ನು ‘ಪಂಜಾಬಿ ಗಾಯಕ’ ಎಂದು ಕರೆದಿದ್ದರು. ಅದನ್ನು ಭಾಜಪ ಟೀಕಿಸಿದೆ.
ಭಾಜಪ ವಕ್ತಾರ ಮನಜಿಂದರ್ ಸಿಂಗ್ ಸಿರಸಾ ಇವರು ‘ಎಕ್ಸ್’ನ ಪೋಸ್ಟನಲ್ಲಿ, ಟ್ರುಡೋ ಇವರು ಪಂಜಾಬಿ ಗಾಯಕನನ್ನು ಹೊಗಳಲು ಆಯ್ದ ಪದಗಳನ್ನು ಬಳಸಿದ್ದಾರೆ. ದಿಲಜೀತನು ಪಂಜಾಬದವನಲ್ಲ ಅವನು ಭಾರತದವನಾಗಿದ್ದಾನೆ ನಾವು ಅವರಿಗೆ ಹೇಳಲು ಬಯಸುತ್ತೇವೆ. ಅವನು ಕೆನಡಾದ ಸಭಾಂಗಣಗಳಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ‘ಹೌಸ್‌ಫುಲ್’ ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸುತ್ತಿದ್ದಾನೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಜಸ್ಟಿನ್ ಟ್ರುಡೊ ಸಿಖ್ಖರು ಮತ್ತು ಖಲಿಸ್ತಾನಿಗಳ ಮತಕ್ಕಾಗಿ ಅವರನ್ನು ಸಂತೈಸಲು ಪ್ರಯತ್ನಿಸುತ್ತಿದ್ದಾರೆ, ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! |