ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿಂದ ಬೆದರಿಕೆ; ಭಾರತೀಯ ಕ್ರಿಕೆಟ್ ಆರಗಾರರು ಪಾಕಿಸ್ತಾನದಲ್ಲಿ ಆಡಲು ಬರದಿದ್ದರೇ ಪಾಕಿಸ್ತಾನ ವಿಶ್ವಕಪ್ ಸ್ಪರ್ಧೆಯಿಂದ ಹಿಂದೆ ಸರಿಯಲಿದೆ !

೨೦೨೫ ರಲ್ಲಿ ಪಾಕಿಸ್ತಾನದಿಂದ ‘ಚಾಂಪಿಯನ್ ಟ್ರೋಫಿ’ ಸ್ಪರ್ಧೆಯ ಆಯೋಜನೆ !

ನವ ದೆಹಲಿ – ೨೦೨೫ ರಲ್ಲಿ ‘ಚಾಂಪಿಯನ್ ಟ್ರಾಫಿ’ ಸ್ಪರ್ಧೆಯನ್ನು ಪಾಕಿಸ್ತಾನದಲ್ಲಿ ಆಡಲಾಗುವವು. ಇದಕ್ಕಾಗಿ ಪಾಕಿಸ್ತಾನವು ವೇಳಾಪಟ್ಟಿ ಕೂಡ ತಯಾರಿಸಿದೆ. ಅದರ ಪ್ರಕಾರ ಭಾರತೀಯ ಕ್ರಿಕೆಟ್ ಸಂಘದ ಪಂದ್ಯ ಲಾಹೊರದಲ್ಲಿ ನಡೆಯುವುದು. ಭಾರತವು ಮಾತ್ರ ‘ಚಾಂಪಿಯನ್ ಟ್ರೋಫಿ’ಗಾಗಿ ಪಾಕಿಸ್ತಾನಕ್ಕೆ ಹೋಗುವುದಿಲ್ಲ’ ಎಂದು ನಿಲುವು ತಾಳಿದೆ. ‘ಪಾಕಿಸ್ತಾನಕ್ಕೆ ಹೋಗುವ ಬದಲು ಇತರ ದೇಶದಲ್ಲಿ ಭಾರತವು ಪಂದ್ಯ ಆಡುವುದು ಎಂದೂ ಭಾರತದ ದೃಢವಾದ ನಿರ್ಧಾರ ಇದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿಗೆ) ಇದು ಒಪ್ಪಿಗೆ ಇಲ್ಲ, ಅದು ‘ಭಾರತೀಯ ಸಂಘವು ಚಾಂಪಿಯನ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದರೇ, ಭಾರತ ಮತ್ತು ಶ್ರೀಲಂಕಾ ಇವರ ಜಂಟಿ ಉಪಸ್ಥಿತಿಯಲ್ಲಿ ೨೦೨೬ ರಲ್ಲಿ ನಡೆಯುವ ಟೀ 20 ವಿಶ್ವ ಕಪ್ ಸ್ಪರ್ಧೆಯಿಂದ ಪಾಕಿಸ್ತಾನ ಸಂಘ ಹೊರ ನಡೆಯುವುದೆಂದು’ ಬೆದರಿಕೆ ನೀಡಿದೆ. ಪಿಸಿಬಿ ಸಂಪೂರ್ಣ ಸ್ಪರ್ಧೆ ಪಾಕಿಸ್ತಾನದಲ್ಲಿ ಆಯೋಜಿಸಲು ದೃಢವಾಗಿದೆ.

೨೦೦೮ ರಲ್ಲಿ ಮುಂಬಯಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಕ್ರಿಕೆಟ್ ಸಂಬಂಧ ರಾಜಕೀಯ ಮತ್ತು ಸುರಕ್ಷಯ ದೃಷ್ಟಿಯಿಂದ ಒತ್ತಡದಿಂದ ಕೂಡಿದೆ. ಅದರ ನಂತರ ಭಾರತ ಪಾಕಿಸ್ತಾನ ಇವರಲ್ಲಿ ನ ಕ್ರಿಕೆಟಿನ ಪಂದ್ಯಗಳು ಕೂಡ ಸ್ಥಗಿತಗೊಳಿಸಲಾಗಿತ್ತು. ೨೦೦೮ ರಲ್ಲಿ ಏಷ್ಯಾ ಕಪ್ ಸ್ಪರ್ಧೆಗಾಗಿ ಭಾರತವು ಕೊನೆಯದಾಗಿ ಪಾಕಿಸ್ತಾನ ಪ್ರವಾಸ ಮಾಡಿತ್ತು. ಅಂದಿನಿಂದ ಎರಡು ದೇಶ ಕೇವಲ ಐಸಿಸಿ ಸ್ಪರ್ಧೆ ಅಥವಾ ಇತರ ದೇಶದಲ್ಲಿ ಆಯೋಜಿಸಿರುವ ಏಷಿಯಾ ಸ್ಪರ್ಧೆಯನ್ನು ಎದುರು ಬದರು ಆಡುತ್ತಾರೆ.

ಸಂಪಾದಕೀಯ ನಿಲುವು

ಭಾರತೀಯ ಕ್ರಿಕೆಟ್ ಮಹಾಮಂಡಳ ಇದು ಆರ್ಥಿಕ ದೃಷ್ಟಿಯಿಂದ ಸಕ್ಷಮವಾಗಿದ್ದು ಅದು ಅಂತರಾಷ್ಟ್ರೀಯ ಕ್ರಿಕೆಟ್ ಮಹಾಮಂಡಳದ ಮೇಲೆ ಕೂಡ ಒತ್ತಡ ತರಬಹುದು. ಆದ್ದರಿಂದ ಪಾಕಿಸ್ತಾನದ ಇಂತಹ ಬೆದರಿಕೆಗೆ ಭಾರತೀಯ ಕ್ರಿಕೆಟ್ ಮಹಾಮಂಡಳ ಲೆಕ್ಕಿಸಬಾರದು !

ವಾಸ್ತವದಲ್ಲಿ ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನದ ಮೇಲೆ ಕೇವಲ ಭಾರತ ಅಷ್ಟೇ ಅಲ್ಲದೆ, ಜಗತ್ತಿನಲ್ಲಿನ ಎಲ್ಲಾ ಕ್ರಿಕೆಟ ಸಂಘಗಳು ಬಹಿಷ್ಕಾರ ಹಾಕುವುದು ಆವಶ್ಯಕ !