ಸಮಾಜವಾದಿ ಪಕ್ಷದ ಸಂಭಲನ ಸಂಸದ ಝಿಯಾವುರ ರಹಮಾನ್ ಬರ್ಕ್ ಇವರ ಆರೋಪ
ಸಂಭಲ (ಉತ್ತರಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮೊಹರಂ ಮೆರವಣಿಗೆ ಶಾಂತಿಯಿಂದ ನಿಯೋಜನೆ ಮಾಡುವುದರ ಬಗ್ಗೆ ಮಾರ್ಗಸೂಚಿ ಅಂಶಗಳನ್ನು ಪ್ರಸಾರಗೊಳಿಸಿದ್ದಾರೆ. ಮೆರವಣಿಗೆಗಾಗಿ ವಿದ್ಯುತ್ ತಂತಿಗಳು ಹಾಗೂ ಮರಗಳನ್ನು ಕತ್ತರಿಸುವುದನ್ನು ನಿಷೇಧಿಸಿದೆ. ತಾಜಿಯಾದ (ಇಮಾಮ್ ಹುಸೇನ್ ಇವರ ಸಮಾಧಿಯ ಪ್ರತಿಕೃತಿ, ಅದು ಅನೇಕ ಪ್ರಕಾರಗಳಲ್ಲಿ ಮತ್ತು ಆಕಾರಗಳಲ್ಲಿ ತಯಾರಿಸಲಾಗುತ್ತದೆ.) ಎತ್ತರದ ಬಗ್ಗೆ ಕೂಡ ಆದೇಶ ನೀಡಿದ್ದಾರೆ. ಈಗ ಈ ಪ್ರಕರಣದ ಬಗ್ಗೆ ಸಮಾಜವಾದಿ ಪಕ್ಷದ ಸಂಭಲದ ಸಂಸದ ಝಿಯಾವುರ್ ರಹಮಾನ್ ಬರ್ಕ ಇವರು ಟೀಕಿಸಿದ್ದಾರೆ. ಅವರು, ಮೊಹರಂ ಮೆರವಣಿಗೆಯ ಮೇಲೆ ಸರಕಾರ ನಿಷೇಧ ಹೇರುವ ಪ್ರಯತ್ನದಲ್ಲಿದೆ ಎಂದು ಹೇಳಿದ್ದಾರೆ.
ತಾಜಿಯಾದ ಎತ್ತರ ಕಡಿಮೆ ಮಾಡುವ ಆದೇಶ ತಪ್ಪು !
ಸಂಸದ ಝಿಯಾವುರ ರಹಮಾನ್ ಬರ್ಕ್ ಇವರು ಜುಲೈ ೧೪ ರ ರಾತ್ರಿ ಅವರ ನಿವಾಸದಲ್ಲಿ ಪತ್ರಕರ್ತರ ಸಭೆಯಲ್ಲಿ, ಸರಕಾರವು ತಾಜಿಯಾದ ಎತ್ತರ ಕಡಿಮೆ ಮಾಡಲು ಆದೇಶ ನೀಡಿದೆ ಇದು ಯೋಗ್ಯವಲ್ಲ. ಪೊಲೀಸ ಮತ್ತು ಆಡಳಿತಾಧಿಕಾರಿ ಇವರು ಸರಕಾರದ ಆದೇಶದ ನಕಲು ಜನಪ್ರತಿನಿಧಿಗಳಿಗೆ ನೀಡಬೇಕಾಗಿತ್ತು. ಪೊಲೀಸ ಮತ್ತು ಜಿಲ್ಲಾಡಳಿತ ಇವರು ಮೊಹರಂ ಕಮಿಟಿ ಹಾಗೂ ಮುಸಲ್ಮಾನ ಸಮಾಜದ ಜವಾಬ್ದಾರ ವ್ಯಕ್ತಿ ಇವರ ಜೊತೆಗೆ ಸಮನ್ವಯ ಸಭೆ ನಡೆಸಿ ಮಾರ್ಗ ತೆಗೆಯುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.
ಸಂಸದ ಬರ್ಕ್ ಇವರು, ಕೆಲವು ಪೊಲೀಸ್ ಮತ್ತು ಸರಕಾರಿ ಅಧಿಕಾರಿಗಳು ಮುಸಲ್ಮಾನ ಜನಾಂಗದಲ್ಲಿನ ಜನರಿಂದ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾರೆ. ಅವರು ಸ್ವ ಇಚ್ಛೆಯಿಂದ ತಾಜಿಯಾದ ಎತ್ತರ ಕಡಿಮೆ ಮಾಡುವುದಾಗಿ ಬರೆದಿದ್ದಾರೆ. ಇದು ಸಂಪೂರ್ಣವಾಗಿ ತಪ್ಪಾಗಿದೆ.
-
‘ಮೊಹರಂ ಮೆರವಣಿಗೆಯ ಮೇಲೆ ನಿಷೇದ ಹೇರಿದರೆ, ಕಾವಾಡ ಯಾತ್ರೆ, ರಾಮಲೀಲಾ ಮತ್ತು ಗುರುನಾನಕ ಜಯಂತಿ ಕೂಡ ನಿಲ್ಲಿಸುವೆವು !’ (ಅಂತೆ)
-
ವಿಷಕಾರಿದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡಿನ ಸದಸ್ಯ !
‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್’ ನಿಂದ ಕೂಡ ತಾಜಿಯಾದ ಕುರಿತು ಉತ್ತರ ಪ್ರದೇಶ ಸರಕಾರವನ್ನು ಟೀಕಿಸಲಾಗುತ್ತಿದೆ. ಬೋರ್ಡ್ ನ ಸದಸ್ಯ ಮಹಮ್ಮದ್ ಕಮಾಲ್ ಫಾರೂಕಿ ಇವರು ‘ಮೊಹರಂ ಮೆರವಣಿಗೆಯ ಮೇಲೆ ಸರಕಾರ ನಿಷೇಧ ಹೇರುತ್ತಿದೆ. ಮೊಹರಂ ಮೇಲೆ ನಿಷೇದ ಹೇರಿದರೆ, ಕಾವಡ ಯಾತ್ರೆ ಕೂಡ ನಿಲ್ಲಿಸುವೆವು. ರಾಮಲೀಲಾ ಮತ್ತು ಗುರು ನಾನಕ ಜಯಂತಿ ಕೂಡ ನಿಲ್ಲಿಸುವೆವು’, ಈ ಪದಗಳಲ್ಲಿ ಸರಕಾರಕ್ಕೆ ಬೆದರಿಕೆ ನೀಡಿದರು.
ಸಂಪಾದಕೀಯ ನಿಲುವುಹೀಗೆ ಬೆದರಿಕೆ ನೀಡುವ ವ್ಯಕ್ತಿ ಇಲ್ಲಿವರೆಗೆ ಜೈಲಿನಲ್ಲಿ ಇರಬೇಕಾಗಿತ್ತು ! ಉತ್ತರ ಪ್ರದೇಶದಲ್ಲಿನ ಭಾಜಪಾ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! ‘ಮೊಹರಂ ನಿಲ್ಲಿಸುವೆವು, ಎಂದು ಯಾರಾದರೂ ಬೆದರಿಕೆ ನೀಡಿದ್ದರೆ, ಇಷ್ಟೊತ್ತಿಗೆ ದೇಶದಲ್ಲಿ ಕೋಲಾಹಲ ಏಳುತ್ತಿತ್ತು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ‘ಭಾರತ ಮುಸಲ್ಮಾನರಿಗಾಗಿ ಅಸುರಕ್ಷಿತವಾಗಿದೆ’, ಎಂದು ಟೀಕೆಗಳ ಸುರಿಮಳೆ ಆಗುತ್ತಿತ್ತು; ಆದರೆ ಹಿಂದುಗಳ ಧಾರ್ಮಿಕ ಹಬ್ಬಗಳ ಬಗ್ಗೆ ಹೇಳಿಕೆ ನೀಡಿದರು ಕೂಡ ಎಲ್ಲವೂ ಶಾಂತವಾಗಿದೆ. ಹಿಂದುಗಳು ಸಂಬಂಧಿಕರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಕಾನೂನು ರೀತಿಯಲ್ಲಿ ಕೃತಿ ಮಾಡುವುದು ಆವಶ್ಯಕವಾಗಿದೆ ! |