ಪೊಲೀಸ ಠಾಣೆಯ ಎದುರಲ್ಲೇ ಮುಸಲ್ಮಾನರಿಂದ ಘೋಷಣೆ !
(ಶಿಯಾ ಮುಸ್ಲಿಮರಿಗೆ ಪ್ರವಾದಿ ಮಹಮ್ಮದ ಅವರ ಮೊಮ್ಮಗ ಇಮಾಮ್ ಹುಸೇನ್ ಆದರ್ಶ)
ಅಮೇಠಿ (ಉತ್ತರಪ್ರದೇಶ) – ಅಮೇಠಿ ಜಿಲ್ಲೆಯ ಮುಸಾಫಿರ್ಖಾನಾ ತಾಲೂಕಿನ ಪಟ್ಟಣದಲ್ಲಿ ಮುಸ್ಲಿಮರು ಜುಲೈ 14 ರ ಸಂಜೆ ಮೊಹರಂ ಮೊದಲು (ಶಿಯಾ ಮುಸ್ಲಿಮರ ಹಬ್ಬ) ಮೆರವಣಿಗೆಯನ್ನು ನಡೆಸಿದ್ದರು. ಈ ಮೆರವಣಿಗೆ ಮುಸಾಫಿರ್ಖಾನಾ ಪೊಲೀಸ್ ಠಾಣೆಯ ಎದುರಿಗೆ ಬಂದಾಗ, ಮೆರವಣಿಗೆಯಲ್ಲಿ ಭಾಗವಹಿಸಿದ ಮುಸ್ಲಿಮರು ‘ಭಾರತದಲ್ಲಿ ಇರಲಿಕ್ಕಿದ್ದರೆ `ಹುಸೇನ‘ ಎನ್ನಲೇ ಬೇಕು’ ಎಂದು ಘೋಷಣೆ ಕೂಗಿದರು. ಈ ಘೋಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಪೊಲೀಸರು ಅಪರಾಧವನ್ನು ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. (ಪೊಲೀಸ್ ಠಾಣೆಯ ಎದುರಿಗೆ ಇಂತಹ ಘೋಷಣೆ ನೀಡುತ್ತಿರುವಾಗ ಪೊಲೀಸರು ಮಲಗಿದ್ದರೆ ಅಥವಾ ಕಿವುಡರಾಗಿದ್ದರೇ ? ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಗಿದ್ದರೆ, ಪೊಲೀಸರು ಅಪರಾಧವನ್ನು ದಾಖಲಿಸುತ್ತಿರಲಿಲ್ಲ ಮತ್ತು ಮತಾಂಧ ಮುಸಲ್ಮಾನರು ತಮ್ಮ ಉದ್ದೇಶವನ್ನು ಸಾಧ್ಯಗೊಳಿಸಲು ಪ್ರಯತ್ನವನ್ನು ಮುಂದುವರಿಸುತ್ತಿದ್ದರು. ಇಂತಹ ನಿಷ್ಕ್ರಿಯ ಪೊಲೀಸರ ಮೇಲೆ ಯೋಗಿ ಆದಿತ್ಯನಾಥ ಅವರ ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು – ಸಂಪಾದಕರು)
If you want to live in India, you must say ‘Ya Hussain’! – Amethi Mu$l!ms shout slogans
Mu$l!ms shouted these slogans in front of the Police Station in Amethi (Uttar Pradesh)!
India was partitioned based on religion and Pakistan was given to Mu$l!ms; still, the Mu$l!ms who… pic.twitter.com/lV16MmpohP
— Sanatan Prabhat (@SanatanPrabhat) July 15, 2024
1. ಸ್ವಾಮಿ ಪರಮಹಂಸ ಆಶ್ರಮದ ಸಾಗರ ಬಾಬುಗಂಜ ಮುಖ್ಯಸ್ಥ ಮೌನಿಜಿ ಮಹಾರಾಜ್ ಮಾತನಾಡಿ, ಪೊಲೀಸರ ಠಾಣೆಯ ಎದುರಿಗೆ ಇಂತಹ ಆಕ್ಷೇಪಾರ್ಹ ಘೋಷಣೆ ನೀಡಿದ್ದರಿಂದ ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಜಿಲ್ಲಾಡಳಿತಕ್ಕೆ ಈ ಪ್ರಕರಣದ ಕುರಿತು ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ, ಇದರಿಂದ ಇಂತಹ ಘಟಕಗಳನ್ನು ತಡೆಯಬಹುದು. ಇಂತಹ ಘಟಕಗಳ ಬೇರು ಪಾಕಿಸ್ತಾನದ ವರೆಗೆ ತಲುಪಿದೆ. ಈ ಜನರು ಭಾರತದಲ್ಲಿ ಧಾರ್ಮಿಕ ಗಲಭೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ‘ಗಂಗಾ-ಜಮುನಿ ಸಂಸ್ಕೃತಿ’ (ಗಂಗಾ ಮತ್ತು ಯಮುನಾ ನದಿಗಳ ದಡದಲ್ಲಿ ವಾಸ್ತವ್ಯ ಮಾಡುವ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಐಕ್ಯತೆಯನ್ನು ತೋರಿಸುವ ಸಂಸ್ಕೃತಿ) ನಾಶಮಾಡಲು ಬಯಸುತ್ತಿದ್ದಾರೆ. (ಮೂಲದಲ್ಲಿ ಇದು ಸಂಸ್ಕೃತಿಗೆ ಸಂಬಂಧಿಸಿದ ವಿಷಯವಲ್ಲ. ಕಪಟ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ಹಿಂದೂಗಳ ಆತ್ಮಘಾತ ಮಾಡಲು ರಚಿಸಿರುವ ಸಂಚಾಗಿದೆ ಮತ್ತು ಅದಕ್ಕೆ ಹಿಂದೂಗಳ ಧಾರ್ಮಿಕ ನಾಯಕರೂ ಬಲಿ ಬೀಳುತ್ತಿದ್ದಾರೆ. ಇದು ದುರಾದೃಷ್ಟಕರವೇ ಆಗಿದೆ – ಸಂಪಾದಕರು) ಆದ್ದರಿಂದ ಅಂತಹವರ ವಿರುದ್ಧ ತಕ್ಷಣವೇ ಕ್ರಮ ಕ್ರಮಕೈಗೊಳ್ಳಬೇಕು. ಇದರ ಹಿಂದೆ ರಾಜಕೀಯ ಪಿತೂರಿ ಇರಬಹುದು.
2. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅನುಪ್ ಕುಮಾರ್ ಸಿಂಗ್ ಅವರು ಮಾತನಾಡಿ, ವಿಡಿಯೋದಲ್ಲಿ ಕಾಣಿಸುತ್ತಿರುವ ಜನರನ್ನು ವಶಕ್ಕೆ ಪಡೆದು ಅವರ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ನಾವು ಅಪರಾಧವನ್ನು ದಾಖಲಿಸಿದ್ದು, ವೀಡಿಯೊದ ಪರಿಶೀಲನೆ ಮಾಡುತ್ತಿದ್ದೇವೆ. ಈ ಪ್ರಕರಣದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|