ಜೂನ್ 25 ಅನ್ನು `ಸಂವಿಧಾನ ಹತ್ಯೆ ದಿನ’ ಎಂದು ಘೋಷಿಸಿದ್ದಕ್ಕೆ ರಣಾಂಗಣ !
ನವ ದೆಹಲಿ – ತುರ್ತುಪರಿಸ್ಥಿತಿಯನ್ನು ನಿಷೇಧಿಸಲು ಜೂನ್ 25 ಅನ್ನು` ಸಂವಿಧಾನ ಹತ್ಯೆ ದಿನ’ ಎಂದು ಆಚರಿಸಲು ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರವು ಸೂಕ್ತವಾಗಿದೆ. ಯಾರು ದೌರ್ಜನ್ಯವನ್ನು ಸಹಿಸಿದ್ದಾರೆಯೋ, ಅವರು ಇಂದು ದೌರ್ಜನ್ಯ ಮಾಡಿರುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾಜಪ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿಯವರು ಹೇಳಿದ್ದಾರೆ. 1975ರಲ್ಲಿ ಮಾತ್ರವಲ್ಲದೆ ಕಾಂಗ್ರೆಸ ಪಕ್ಷದವರ ಎಲ್ಲಾ ಆಡಳಿತಾವಧಿಯಲ್ಲಿಯೂ ಸಂವಿಧಾನದ ಹತ್ಯೆ ಮಾಡಲಾಗಿದೆ. ಜವಾಹರಲಾಲ್ ನೆಹರು ಅವರು 1951 ರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಧಾ ಪ್ರಹಾರ ಮಾಡಲು ಸಂವಿಧಾನದಲ್ಲಿ ಮೊದಲ ತಿದ್ದುಪಡಿಯನ್ನು ಮಾಡಿದ್ದರು. ಅಲ್ಲಿಯವರೆಗೆ ದೇಶದಲ್ಲಿ ಚುನಾವಣೆಗಳೂ ನಡೆದಿರಲಿಲ್ಲ.
ಜೂನ್ 25, 1975 ರಂದು, ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ಹಿಂದೆಮುಂದೆ ಯೋಚಿಸದೇ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ದೇಶದ ಮೇಲೆ ತಮ್ಮ ಹಿಡಿತ ಸಾಧಿಸಿದ್ದರು. ಈ ಘಟನೆ ಈಗ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಕೇಂದ್ರ ಸರಕಾರ ಈ ಘೋಷಣೆಯನ್ನು ಮಾಡಿತ್ತು. ಅದಕ್ಕೆ ವಿಪಕ್ಷ ನಾಯಕರು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರಿಗೆ ಉತ್ತರ ನೀಡುವಾಗ ತ್ರಿವೇದಿ ಇವರು ಮೇಲಿನ ಹೇಳಿಕೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕರು ಏನು ಹೇಳಿದ್ದಾರೆ ?
1. ಉದ್ಧವ್ ಠಾಕ್ರೆ ಗುಂಪಿನ ನಾಯಕ ಸಂಜಯ್ ರಾವುತ್ : ತುರ್ತುಪರಿಸ್ಥಿತಿಗೆ 50 ವರ್ಷಗಳಾದವು. ಆದರೆ ಭಾರತೀಯ ಜನತಾಪಕ್ಷ ಭವಿಷ್ಯದ ಬದಲು ಭೂತಕಾಲದ ಕಡೆಗೆ ನೋಡುತ್ತಿದೆ. 1975 ರಲ್ಲಿ, ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಲಾಗಿತ್ತು; ಕಾರಣ ಆಗ ದೇಶದಲ್ಲಿ ಅರಾಜಕತೆ ಇತ್ತು. ಒಂದು ವೇಳೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಅಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿದ್ದರೆ ಅವರೂ ಕೂಡ ತುರ್ತುಪರಿಸ್ಥಿತಿಯನ್ನೇ ಜಾರಿಗೆ ತರುತ್ತಿದ್ದರು.
2. ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಝಾ : ಸರಕಾರದ ಇಂತಹ ಕ್ರಮಗಳು ಸಂವಿಧಾನವನ್ನು ತಿದ್ದುವ ಪ್ರಯತ್ನವಾಗಿದೆ. ಲೋಕಸಭೆಯ ಚುನಾವಣೆಯ ಆಘಾತದಿಂದ ಹೊರಬರುವ ಪ್ರಯತ್ನ ಇದಾಗಿದೆ. ಆಡಳಿತಾರೂಢ ಭಾಜಪ ದ್ವಿಮುಖ ನೀತಿಯನ್ನು ಮಾಡುತ್ತಿದೆ. ಭಾಜಪ ಕನ್ನಡಿಯಲ್ಲಿ ಮುಖ ನೋಡಬೇಕು. ರಾಜಕೀಯ ಪ್ರತಿಸ್ಪರ್ಧಿಯ ವಿರುದ್ಧ ಕೇಂದ್ರೀಯ ತನಿಖಾ ದಳವನ್ನು ದುರುಪಯೋಗಪಡಿಸಿಕೊಂಡು ದೇಶದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರಿಗೆ ತೊಂದರೆ ನೀಡಿದ ಬಗ್ಗೆ ಭಾಜಪ ದೇಶದ ಕ್ಷಮೆಯಾಚಿಸಬೇಕು.