ಗಾಝಿಪುರ – ಜಿಲ್ಲೆಯ ದೇವರಿಯಾ ಮತ್ತು ಸಬ್ಬಲ್‌ಪುರ್ ಖುರ್ದ್ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿಯ ದೇವಸ್ಥಾನಗಳಲ್ಲಿ ಕಳವು ಮಾಡಲಾಗಿದೆ. ಎರಡೂ ಘಟನೆಗಳಲ್ಲಿ ದೇವಿಯ ಮೂರ್ತಿಗೆ ಅರ್ಪಿಸಿರುವ ಬಂಗಾರದ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
2 temples of Shri Durga Devi in Gazipur district of Uttar Pradesh burglarized
Hindu temples are currently unsafe in India !#Temple pic.twitter.com/jaMyaFLi0D
— Sanatan Prabhat (@SanatanPrabhat) July 14, 2024
1. ದೇವರಿಯಾ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಜುಲೈ 13 ರಂದು ಬೆಳಗ್ಗೆ ಗ್ರಾಮಸ್ಥರು ತಲುಪಿದಾಗ ಅವರಿಗೆ ದೇವಸ್ಥಾನದ ಬೀಗ ಮುರಿದಿರುವುದು ಕಂಡುಬಂದಿದೆ. ಮಾಹಿತಿ ಸಿಗುತ್ತಲೇ ಅರ್ಚಕ ವಿಜೇಂದ್ರ ಸಿಂಗ್ ಯಾದವ ಘಟನಾ ಸ್ಥಳಕ್ಕೆ ತಲುಪಿದರು. ಕಳ್ಳರು ಕಾಣಿಕೆ ಹುಂಡಿಯ ಬೀಗವನ್ನು ಮುರಿದು ಅದರಲ್ಲಿರುವ ಹಣವನ್ನು ಕದ್ದೊಯ್ದಿದ್ದು, ಹಾಗೆಯೇ ದೇವಿಯ ಆಭರಣಗಳನ್ನು ಕದ್ದಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿತು.
2. ಸಬ್ಬಲಪುರ ಖುರ್ದ್ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿಯೂ ಕಳ್ಳರು ಮೂರ್ತಿಯ ಮೇಲೆ ಹಾಕಲಾಗಿದ್ದ ಆಭರಣಗಳನ್ನು ಕದ್ದೊಯ್ದಿದ್ದಾರೆ.
3. ಕಳ್ಳತನದ ಘಟನೆಗಳಿಂದ ಗ್ರಾಮಸ್ಥರಲ್ಲಿ ಆಕ್ರೋಷ ಭುಗಿಲೆದ್ದಿದೆ. ಪ್ರಭಾರಿ ಪೊಲೀಸ್ ಅಧೀಕ್ಷಕರಾದ ಅಶೇಷನಾಥ ಸಿಂಗ ಮಾತನಾಡಿ, ತನಿಖೆ ಮುಂದುವರಿದಿದ್ದು ಅಗತ್ಯೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿ ಅಸುರಕ್ಷಿತ ಹಿಂದೂ ದೇವಾಲಯಗಳು ! |