Jharkhand ‘Little Bangladesh’ : ಝಾರ್ಖಂಡದಲ್ಲಿನ ಬಾಂಗ್ಲಾದೇಶಿ ನುಸುಳುಕೋರರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ ವಿಚಾರಣೆ ನಡೆಸಿ !

  • ಭಾಜಪದ ಮಾಜಿ ಮುಖ್ಯಮಂತ್ರಿಗಳ ಆಗ್ರಹ

  • ಝಾರ್ಖಂಡವನ್ನು ‘ಚಿಕ್ಕ ಬಾಂಗ್ಲಾದೇಶ’ ಮಾಡುವ ಷಡ್ಯಂತ್ರ ರೂಪಿಸಿರುವ ದಾವೆ !

ರಾಯಪುರ – ಝಾರ್ಖಂಡದಲ್ಲಿನ ಬಾಂಗ್ಲಾದೇಶದ ನುಸುಳುಕೋರರ ಸಮಸ್ಯೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪದ ಪ್ರದೇಶಾಧ್ಯಕ್ಷ ಬಾಬುಲಾಲ ಮರಾಂಡಿ ಇವರು ಧ್ವನಿಯೆತ್ತಿದ್ದಾರೆ. ಝಾರ್ಖಂಡವನ್ನು ‘ಚಿಕ್ಕ ಬಾಂಗ್ಲಾದೇಶ’ ಮಾಡುವ ಷಡ್ಯಂತ್ರ ರೂಪಿಸಲಾಗಿದೆ ಎಂದು ಮರಾಂಡಿ ಇವರು ದಾವೆ ಕೂಡ ಮಾಡಿದ್ದಾರೆ. ಬಾಂಗ್ಲಾದೇಶದ ನುಸುಕೋರರ ಆತಂಕವನ್ನು ಗಮನಕ್ಕೆ ತರುವುದಕ್ಕಾಗಿ ಅವರು ಝಾರ್ಖಂಡ ಉಚ್ಚ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯನ್ನು ಪುನರ್ ಉಚ್ಚರಿಸಿದ್ದಾರೆ. ಕೆಲವು ದಿನಗಳ ಹಿಂದೆ ರಾಜ್ಯದಲ್ಲಿನ ಸಂಥಾಲ ಪರಗಣಾ ಪ್ರದೇಶದಲ್ಲಿ ‘ಲ್ಯಾಂಡ್ ಜಿಹಾದ’ದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ವಿಚಾರಣೆ ನಡೆಸುವಾಗ ಝಾರ್ಖಂಡ್ ಉಚ್ಚ ನ್ಯಾಯಾಲಯವು ಈ ಸಮಸ್ಯೆಯ ಕುರಿತು ಕಳವಳ ವ್ಯಕ್ತಪಡಿಸಿತ್ತು. ನ್ಯಾಯಾಲಯವು ಬಾಂಗ್ಲಾದೇಶದ ನುಸುಳುಕೋರರ ಗುರುತು ಪತ್ತೆ ಹಚ್ಚಿ ಅವರ ಹಸ್ತಾಂತರಕ್ಕಾಗಿ ರಾಜ್ಯ ಸರಕಾರವು ಕೃತಿ ಯೋಜನೆ ರೂಪಿಸಲು ಹಾಗೂ ಈ ಪ್ರಕರಣಕ್ಕೆ ಸಂಬಂಧಪಟ್ಟ ಪ್ರತಿಜ್ಞಾ ಪತ್ರ ಎರಡು ವಾರದಲ್ಲಿ ಪ್ರಸ್ತುತಪಡಿಸುವ ಆದೇಶ ನೀಡಿತ್ತು. ಮರಾಂಡಿ ಇವರು ಬಾಂಗ್ಲಾದೇಶದ ನುಸುಳುಕೋರರ ರಾಷ್ಟ್ರೀಯ ತನಿಖಾ ದಳದ ಮೂಲಕ (‘ಎನ್.ಐ.ಎ.’ ಮೂಲಕ) ತನಿಖೆ ನಡೆಸಲು ಆಗ್ರಹಿಸಿದ್ದರು.

ಝಾರ್ಖಂಡ್ ದಲ್ಲಿನ ಬಾಂಗ್ಲಾದೇಶಿ ನೂಸುಳುಕೋರರಿಗೆ ಸಿಗುತ್ತಿದೆ ಆರ್ಥಿಕ ಲಾಭ !

ಝಾರ್ಖಂಡದಲ್ಲಿ ಬಾಂಗ್ಲಾದೇಶದ ನುಸುಳುಕೋರರ ಹೆಚ್ಚುತ್ತಿರುವ ಪ್ರಭಾವದ ಪರಿಣಾಮ ಬುಡಕಟ್ಟು ಜನಾಂಗದ ಮೇಲೆ ಆಗುತ್ತಿದೆ. ಅಕ್ರಮ ಮದರಸಾಗಳು ಹೆಚ್ಚುತ್ತಿವೆ. ಮತಾಂಧ ಯುವಕರು ಬುಡಕಟ್ಟು ಜನಾಂಗದ ಹುಡುಗಿಯರನ್ನು ವಂಚಿಸಿ ಅವರ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾರೆ. ನಂತರ ಈ ಯುವತಿಯರಿಗೆ ಪಂಚಾಯತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ, ಇಂತಹ ಅನೇಕ ಪ್ರಕಾರಗಳು ಬೆಳಕಿಗೆ ಬಂದಿವೆ. ಕುಟುಂಬದ ಜನಪ್ರತಿನಿಧಿಯ ಸ್ಥಾನಬಂದ ನಂತರ ಈ ಮತಾಂಧರು ಅದರ ಮೂಲಕ ಮಾದಕ ವಸ್ತುಗಳ ವ್ಯವಸಾಯ ಕೂಡ ಮಾಡುತ್ತಾರೆ. ಇದರ ಜೊತೆಗೆ ಅವರ ಇತರ ನುಸುಳುಕೊರ ಬಾಂಧವರಿಗೆ ಸರಕಾರಿ ದಾಖಲೆ ತಯಾರಿಸಿ ಕೊಡುವುದು ಹಾಗೂ ಸರಕಾರಿ ಲಾಭ ಪಡೆಯುವದಕ್ಕಾಗಿ ಪ್ರಯತ್ನಿಸುತ್ತಾರೆ.

ಝಾರ್ಖಂಡ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ನ ಮೈತ್ರಿ ಸರಕಾರದ ಕುರಿತು ಗಂಭೀರ ಆರೋಪ

ಝಾರ್ಖಂಡ ‘ಚಿಕ್ಕ ಬಾಂಗ್ಲಾದೇಶ’ – ಬಾಬುಲಾಲ್ ಮರಾಂಡಿ

ಅಧಿಕಾರದಲ್ಲಿರುವ ಝಾರ್ಖಂಡ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಇವರ ಮೈತ್ರಿ ಸರಕಾರ ಬಾಂಗ್ಲಾದೇಶದ ನುಸುಳುಕೋರರಿಗೆ ಅಭಯ ನೀಡುತ್ತದೆ. ಅವರಿಗೆ ಸರಕಾರಿ ದಾಖಲೆಗಳು ತಯಾರಿಸಿ ಕೊಟ್ಟು ಝಾರ್ಖಂಡ್ನಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ ಎಂದು ಬಾಬುಲಾಲ್ ಮರಾಂಡಿ ಇವರು ಆರೋಪಿಸಿದ್ದಾರೆ. ಆದ್ದರಿಂದ ಬಾಂಗ್ಲಾದೇಶಿ ಈ ನುಸುಳುಕೋರರ ಮೇಲೆ ಈ ಸರಕಾರ ಕ್ರಮ ಕೈಗೊಳ್ಳುವುದು ಎಂದು ಅಪೇಕ್ಷಿಸುವುದು ಕೂಡ ತಪ್ಪಾಗಿದೆ, ಎಂದು ಮರಾಂಡಿ ಇವರು ಹೇಳಿದ್ದಾರೆ.

ಝಾರ್ಖಂಡದಲ್ಲಿನ ಶಾಲೆಗಳಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶದ ರಾಷ್ಟ್ರಗೀತೆ !

ಮರಾಂಡಿ ಇವರು ನಾಲ್ಕು ವರ್ಷದ ಹಿಂದೆ ಝಾರ್ಖಂಡಿನ ಒಂದು ಶಾಲೆಯಲ್ಲಿ ನಡೆದಿರುವ ಘಟನೆಯ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ. ರಾಜ್ಯದಲ್ಲಿನ ‘ನಂದಲಾಲ ಸ್ಮೃತಿ ವಿದ್ಯಾ ಮಂದಿರ’ ಹೆಸರಿನ ಶಾಲೆಯ ವಿದ್ಯಾರ್ಥಿಗಳಿಗೆ ಭಾರತದಲ್ಲ ಬದಲಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಬಾಯಿ ಪಾಠ ಮಾಡುವ ಹೋಮ್ ವರ್ಕ್ ನೀಡಲಾಗಿತ್ತು. ‘ಇದು ಯೋಗಾಯೋಗವಾಗದೆ ಝಾರ್ಖಂಡಿನ ಬುಡಕಟ್ಟು ಜನಾಂಗದ ಅಸ್ತಿತ್ವವೇ ಅಳಿಸಿ ಹಾಕುವ ಆಘಾತಕಾರಿ ಷಡ್ಯಂತ್ರವಾಗಿದೆ, ಎಂದು ಮರಾಂಡಿ ಇವರು ಹೇಳಿದ್ದಾರೆ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಈ ಶಾಲೆ ನಡೆಸುವವರು ಮತ್ತು ಅವರಿಗೆ ನಿಧಿ ನೀಡುವ ಗುಂಪಿನ ಆಳವಾಗಿ ವಿಚಾರಣೆ ನಡೆಸುವ ಆವಶ್ಯಕತೆ ಇದೆ ಎಂದು ಕೂಡ ಅವರು ಹೇಳಿದ್ದಾರೆ. ಪೋಷಕರು, ಅವರು ತಮ್ಮ ಮಕ್ಕಳನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆ ಕಲಿಯಲು ಬಿಡುವುದಿಲ್ಲ. ಪೋಷಕರ ವಿರೋಧದ ನಂತರ ಶಾಲೆಯ ಆಡಳಿತಕ್ಕೆ ಇದನ್ನು ಹಿಂಪಡೆಯಬೇಕಾಯಿತು.

ಸಂಪಾದಕೀಯ ನಿಲುವು

ವಾಸ್ತವದಲ್ಲಿ ಭಾಜಪದ ಮಾಜಿ ಮುಖ್ಯಮಂತ್ರಿಗಳು ಈ ರೀತಿಯ ಬೇಡಿಕೆ ಸಲ್ಲಿಸುವ ಘಟನೆ ನಡೆಯಬಾರದು. ಬಾಂಗ್ಲಾದೇಶದ ನುಸುಕೋರರು ರಾಷ್ಟ್ರೀಯ ಸಮಸ್ಯೆ ಆಗಿದ್ದು ಈ ನುಸುಳುಕೋರರನ್ನು ಈಗಲೇ ಓಡಿಸದಿದ್ದರೆ, ಭಾರತದ ಮತ್ತೊಮ್ಮೆ ವಿಭಜನೆ ಆಗಲು ಸಮಯ ಬೇಕಾಗುವುದಿಲ್ಲ !