New Railway Ticket Booking Rule : ಇನ್ನು ಮುಂದೆ ರೈಲ್ವೆಯ ‘ವೇಟಿಂಗ್’ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ !

  • ನಿಯಮ ಉಲ್ಲಂಘಿಸಿದರೆ 440 ರೂಪಾಯಿ ದಂಡ

  • ‘ವೇಟಿಂಗ್’ ಟಿಕೆಟ್‌ ನಿಯಮಗಳಲ್ಲಿ ಬದಲಾವಣೆ

ನವ ದೆಹಲಿ – ರೈಲ್ವೆ ಇಲಾಖೆಯು ‘ವೇಟಿಂಗ್’ ಟಿಕೆಟ್‌ ಸಂದರ್ಭದಲ್ಲಿನ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಈಗ ಹೊಸ ನಿಯಮಗಳ ಪ್ರಕಾರ, ‘ವೇಟಿಂಗ್’ ಟಿಕೆಟ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಇನ್ನುಮುಂದೆ ಒಂದು ವೇಳೆ ‘ವೇಟಿಂಗ್’ ಟಿಕೆಟ್ ಹೊಂದಿರುವ ಪ್ರಯಾಣಿಕರು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುವುದು ಕಂಡುಬಂದರೆ 440 ರೂಪಾಯಿ ದಂಡ ವಿಧಿಸಲಾಗುತ್ತದೆ. ಜುಲೈ 1ರಿಂದ ಈ ನಿಯಮ ಜಾರಿಗೆ ಬಂದಿದ್ದು, ಟಿ.ಸಿ.ಯು ಈ ನಿಯಮವನ್ನು ಕಠೋರವಾಗಿ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ.

ಸಾವಿರಾರು ಪ್ರಯಾಣಿಕರು ಈ ಬಗ್ಗೆ ದೂರು ನೀಡಿದ ಬಳಿಕ ಎಚ್ಚೆತ್ತುಕೊಂಡ ರೈಲ್ವೆ ಆಡಳಿತ !

‘ವೇಟಿಂಗ್’ ಟಿಕೆಟು ಹೊಂದಿರುವ ಪ್ರಯಾಣಿಕರು ಕಾಯ್ದಿರಿಸಿದ ಬೋಗಿಗಳಲ್ಲಿ ಹತ್ತುವುದರಿಂದ ಕಾಯ್ದಿರಿಸಿದ ಬೋಗಿಗಳಲ್ಲಿನ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ತಮಗೆ ಅನಾನುಕೂಲವಾಗುತ್ತಿತ್ತು ಎಂದು ಹೇಳಿದ್ದಾರೆ. ಈ ಬಗ್ಗೆ ಸಾವಿರಾರು ಪ್ರಯಾಣಿಕರು ರೈಲ್ವೆ ಇಲಾಖೆಗೆ ದೂರು ನೀಡಿದ್ದರು. ಆದ್ದರಿಂದ, ಕಾಯ್ದಿರಿಸಿದ ಬೋಗಿಗಳಲ್ಲಿನ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಕಾಯ್ದಿರಿಸಿದ ಬೋಗಿಗಳಲ್ಲಿ ‘ದೃಢೀಕರಿಸಿದ’ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ರೈಲ್ವೆ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಆಫ್‌ಲೈನ್ ಪದ್ಧತಿಯ ಮೂಲಕ ಟಿಕೆಟ್ ತೆಗೆಯುವ ಪ್ರಯಾಣಿಕರಿಗೂ ನಿಯಮಗಳು ಅನ್ವಯ

ಪ್ರಯಾಣಿಕರು ಆಫ್‌ಲೈನ್ ಪದ್ಧತಿಯ ಮೂಲಕ ಅಂದರೆ ಕಿಟಕಿಯಿಂದ ಟಿಕೆಟ್‌ಗಳನ್ನು ತೆಗೆದರೂ, ಅವರಿಗೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ, ಪ್ರಯಾಣಿಕರು ಆಫ್‌ಲೈನ್ ಪದ್ಧತಿಯಿಂದ ಟಿಕೆಟ್‌ಗಳನ್ನು ತೆಗೆದು ಕಾಯ್ದಿರಿಸಿದ ಬೋಗಿಗಳಿಂದ ಪ್ರಯಾಣಿಸುತ್ತಿದ್ದರು.

ರೈಲ್ವೇ ಅಧಿಕಾರಿಗಳು ನೀಡಿರುವ ಮಾಹಿತಿಯನುಸಾರ ಬ್ರಿಟಿಷರ ಕಾಲದಿಂದಲೂ ‘ವೇಟಿಂಗ್’ ಟಿಕೆಟ್‌ಗಳ ಮೂಲಕ ಪ್ರಯಾಣ ಮಾಡಲು ನಿಷೇಧವಿದೆ; ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿರಲಿಲ್ಲ. ರೇಲ್ವೆಯ ಸ್ಪಷ್ಟ ನಿಯಮವೇನೆಂದರೆ ಒಂದು ವೇಳೆ ಪ್ರಯಾಣಿಕರು ಕಿಟಕಿಯಿಂದ ಟಿಕೆಟ್ ಖರೀದಿಸಿದ್ದರೆ ಮತ್ತು ಅದು ‘ವೇಟಿಂಗ್’ ಟಿಕೀಟ ಆಗಿದ್ದರೆ, ರೈಲು ಹೊರಡುವ ಸಮಯದವರೆಗೆ ಅದು ‘ದೃಢೀಕರಣ’ ಆಗದಿದ್ದರೆ, ಪ್ರಯಾಣಿಕರು ಆ `ವೇಟಿಂಗ್’ ಟಿಕೀಟು ರದ್ದು ಪಡಿಸಿ ಹಣವನ್ನು ಮರಳಿ ಪಡೆಯಬಹುದು ಎಂದು ಇದೆ. ಆದರೆ ಹಾಗೆ ಮಾಡದೇ ಪ್ರಯಾಣಿಕರು ‘ವೇಟಿಂಗ್’ ಟಿಕೆಟ್ ಮೇಲೆಯೇ ಕಾಯ್ದಿರಿಸಿದ ಬೋಗಿಯಲ್ಲಿ ಹತ್ತಿ ಸಲೀಸಾಗಿ ಪ್ರಯಾಣಿಸುತ್ತಾರೆ. ಇದನ್ನು ತಡೆಯುವುದು ಆವಶ್ಯಕವಿದೆ.

ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರನ್ನು ಟಿಕೀಟ ಪರಿಶೀಲನೆಯ ಸಮಯದಲ್ಲಿ ರೈಲಿನಿಂದ ಇಳಿಸಬಹುದು !

ರೈಲ್ವೆ ಇಲಾಖೆಯು ನೀಡಿದ ಮಾಹಿತಿಯ ಪ್ರಕಾರ, ಮೇಲಿನ ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರಿಗೆ 440 ರೂಪಾಯಿ ದಂಡ ವಿಧಿಸುವುದರೊಂದಿಗೆ ರೈಲಿನಿಂದ ಇಳಿಸಬಹುದು. ಇದಲ್ಲದೇ, ಅಂತಹ ಪ್ರಯಾಣಿಕರಿಗೆ ಸಾಮಾನ್ಯ ಭೋಗಿ (ಅನ್ ರಿಸರ್ವ್ಡ್ ಅಥವಾ ಸಾಮಾನ್ಯ ಭೋಗಿ)ಗೆ ಕಳುಹಿಸುವ ಅಧಿಕಾರವೂ ಟಿಕೆಟ್ ಪರೀಕ್ಷಕರಿಗೆ ಇರಲಿದೆ.