Accused Odisha Governor Son : ಐಷಾರಾಮಿ ವಾಹನ ಕಳುಹಿಸಿಲ್ಲವೆಂದು ಓಡಿಸ್ಸಾ ರಾಜ್ಯಪಾಲರ ಮಗನಿಂದ ಅಧಿಕಾರಿಗಳ ಮೇಲೆ ಅಮಾನುಷ ಹಲ್ಲೆ

ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬುದು ಸಂತ್ರಸ್ತ ಅಧಿಕಾರಿಯ ಆರೋಪ

ಭುವನೇಶ್ವರಿ – ಒಡಿಶಾದ ರಾಜ್ಯಪಾಲ ರಘುವರ ದಾಸ ಅವರ ಮಗನನ್ನು ರೇಲ್ವೆ ನಿಲ್ದಾಣದಿಂದ ಕರೆತರಲು ಐಶಾರಾಮಿ ವಾಹನವನ್ನು ಕಳುಹಿಸಿಲ್ಲವೆಂದು ಮಗನು ರಾಜಭವನದ ಅಧಿಕಾರಿಗೆ ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿದ್ದಾನೆ. ಈ ಅಧಿಕಾರಿಯು ಸಂಬಂಧಿಸಿದ ವಿಷಯವನ್ನು ಹಿರಿಯ ಅಧಿಕಾರಿಗಳ ವರೆಗೆ ಮತ್ತು ಪೊಲೀಸ ಠಾಣೆಗೆ ಕೊಂಡೊಯ್ಯಲು ಪ್ರಯತ್ನಿಸಿದರು; ಆದರೆ ಅವರಿಗೆ ಯಾರೂ ಸರಿಯಾಗಿ ಸ್ಪಂದಿಸಲಿಲ್ಲ. ಥಳಿತಕ್ಕೊಳಗಾದ ಅಧಿಕಾರಿಯ ಹೆಸರು ವೈಕುಂಠ ಪ್ರಧಾನ ಆಗಿದ್ದು, ಅವರು ಒಡಿಶಾ ರಾಜಭವನದ ಸಚಿವಾಲಯದ ಗೃಹ ಇಲಾಖೆಯಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ ನೇಮಕಗೊಂಡಿದ್ದರು. ‘ಜುಲೈ 7ರಂದು ರಾತ್ರಿ ರಾಜ್ಯಪಾಲರ ಪುತ್ರ ಲಲಿತ ಕುಮಾರ ಮತ್ತು ಅವನ ಐವರು ಸಹಚರರು ಪುರಿ ನಗರದ ರಾಜಭವನದಲ್ಲಿ ನನಗೆ ಕಾಲಿನಿಂದ ಒದ್ದು-ಮುಷ್ಟಿಯಿಂದ ಅಮಾನುಷವಾಗಿ ಥಳಿಸಿದ್ದಾರೆ’ ಎಂದು ವೈಕುಂಠ ಪ್ರಧಾನ ಆರೋಪಿಸಿದ್ದಾರೆ.

1. ಪ್ರಧಾನ ಅವರು ಮಾತು ಮುಂದುವರೆಸಿ, ಲಲಿತ ಕುಮಾರ ನನಗೆ ಹೊಡೆದ ಬಳಿಕ ನಾನು ತಕ್ಷಣವೇ ಅವರ ಗ್ಯಾಲರಿಯಿಂದ ಓಡಿದೆನು ಮತ್ತು ರಾಜಭವನದಲ್ಲಿ ಅಡಗಿ ಕುಳಿತೆ; ಆದರೆ ಲಲಿತ ಕುಮಾರನ ವೈಯಕ್ತಿಕ ಭದ್ರತಾ ಸಿಬ್ಬಂದಿಗಳು ನನ್ನನ್ನು ತಡೆದರು ಮತ್ತು ಎಳೆದುಕೊಂಡು ಪುನಃ ಅವರ ಗ್ಯಾಲರಿಗೆ ಕರೆದೊಯ್ದರು. ರಾಜಭವನದ ಸಿಬ್ಬಂದಿ ಮತ್ತು ಲಲಿತ ಕುಮಾರನ ಭದ್ರತಾ ಸಿಬ್ಬಂದಿ ಘಟನೆಗೆ ಸಾಕ್ಷಿಯಾಗಿದ್ದಾರೆ. ಅಲ್ಲಿ ಕರೆದುಕೊಂಡು ಹೋದ ನಂತರ ಪುನಃ ಹಲ್ಲೆ ಮಾಡಿದರು. ಒಂದು ವೇಳೆ ಅಲ್ಲಿ ನನ್ನ ಕೊಲೆಯಾಗಿದ್ದರೆ, ಯಾರೂ ನನ್ನನ್ನು ರಕ್ಷಿಸುತ್ತಿರಲಿಲ್ಲ.

2. ಹಲ್ಲೆ ನಡೆಸಿದ ಮರುದಿನವೇ ಅಂದರೆ ಜುಲೈ 8 ರಂದು ಪ್ರಧಾನ ಇವರು ಸಚಿವರಿಗೆ ಈ ಘಟನೆಯ ಬಗ್ಗೆ ಮೌಖಿಕವಾಗಿ ಮಾಹಿತಿ ನೀಡಿದರು. ತದನಂತರ, ಜುಲೈ 10 ರಂದು ಇಮೇಲ್ ಮೂಲಕ ಸಂಪೂರ್ಣ ಘಟನೆಗಳನ್ನು ವಿವರಿಸಿದ್ದಾರೆ. ವೈಕುಂಠ ಪ್ರಧಾನ ಅವರ ಪತ್ನಿ ಸಯೋಜ ಅವರು ಭುವನೇಶ್ವರದ ರಾಜಭವನದ ಹೊರಗೆ ಈ ಘಟನೆಯನ್ನು ನಿಷೇಧಿಸಿ, ಪೊಲೀಸರಿಗೆ ನೀಡಿರುವ ದೂರಿನ ಪತ್ರವನ್ನು ಮಾಧ್ಯಮದವರಿಗೆ ತೋರಿಸಿದರು. ಅವರು, ನಾವು ಜುಲೈ 11 ರಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದೆವು; ಆದರೆ ನಮ್ಮ ದೂರ ದಾಖಲಿಸಿಕೊಳ್ಳಲಿಲ್ಲ. ನಂತರ ನಾವು ಇ-ಮೇಲ್ ಮೂಲಕ ದೂರು ಕಳುಹಿಸಿದೆವು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಒಂದು ವೇಳೆ ಈ ದೂರಿನಲ್ಲಿ ಸತ್ಯಾಂಶವಿದ್ದರೆ, ತಂದೆಯ ಹುದ್ದೆ ಮತ್ತು ಅಧಿಕಾರದಿಂದ ಉದ್ಧಟನಾಗಿರುವ ರಾಜ್ಯಪಾಲರ ಪುತ್ರನಿಗೆ ಕಠಿಣ ಶಿಕ್ಷೆಯನ್ನು ನೀಡುವುದು ಅವಶ್ಯಕವಾಗಿದೆ !
  • ದೂರನ್ನು ದಾಖಲಿಸಿಕೊಳ್ಳುವಲ್ಲಿ ಮೀನಾಮೇಷ ಮಾಡಿ ಆರೋಪಿಯ ರಕ್ಷಣೆ ಮಾಡುವ ಆಡಳಿತ ಅಧಿಕಾರಿ ಮತ್ತು ಪೊಲೀಸರು ಕಾನೂನಿನ ಆಡಳಿತವನ್ನು ಹೇಗೆ ನೀಡುತ್ತಾರೆ ?