ಭಾರತದಲ್ಲಿನ ರಷ್ಯಾದ ರಾಯಭಾರಿಯ ದಾವೆ !
ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ರಷ್ಯಾದ ಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿದರು. ಇದಾದ ಮೇಲೆ ಪುಟಿನ್ ಅವರು ರಷ್ಯಾದಿಂದ ಭಾರತೀಯರನ್ನು ವಾಪಸ್ ಕಳುಹಿಸಲು ಒಪ್ಪಿಕೊಂಡರು. ಈ ಬಗ್ಗೆ ಭಾರತದಲ್ಲಿರುವ ರಷ್ಯಾದ ರಾಯಭಾರಿ ರೋಮನ್ ಬಾಬುಶ್ಕಿನ್ ಅವರು, ”ಯಾವುದೇ ಭಾರತೀಯರಿಗೆ ರಷ್ಯಾದ ಸೇನೆಗೆ ಸೇರುವಂತೆ ನಾವು ಅಭಿಯಾನ ಅಥವಾ ಜಾಹಿರಾತು ನೀಡಿಲ್ಲ. ರಷ್ಯಾ ಕೂಡ ಹಾಗೆ ಮಾಡಲು ಬಯಸುವುದಿಲ್ಲ. ಯಾವುದೇ ಸಂದರ್ಭದಲ್ಲಿ ರಷ್ಯಾ ಸೇನೆಗೆ ಭಾರತೀಯರು ಸೇರ್ಪಡೆಗೊಂಡಿದ್ದರೇ ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ರಾಯಭಾರಿ ರೋಮನ್ ಬಾಬುಶ್ಕಿನ್ ಅವರು ತಮ್ಮ ಮಾತನ್ನು ಮುಂದುವರೆಸಿ, 100 ಕ್ಕೂ ಹೆಚ್ಚು ಪ್ರಸ್ತುತ ಭಾರತೀಯ ಸೇನೆಯೊಂದಿಗೆ ಸಂಬಂಧ ಹೊಂದಿದ್ದಾರೆ; ಆದರೆ ರಷ್ಯಾದ ಸೈನ್ಯದ ಗಾತ್ರವನ್ನು ಪರಿಗಣಿಸಿ, ಇದು ತುಂಬಾ ಚಿಕ್ಕದಾಗಿದೆ. ಸೇನೆಗೆ ಸೇರುವ ಭಾರತೀಯರು ವಾಣಿಜ್ಯ ಒಪ್ಪಂದಗಳೊಂದಿಗೆ ಸಂಬಂಧ ಹೊಂದಿರಬಹುದು; ಏಕೆಂದರೆ ಅವರು ಹಣ ಸಂಪಾದಿಸಲು ಬಯಸಿದ್ದರು. ನಾವು ಅವರನ್ನು ನೇಮಿಸಿಕೊಳ್ಳಲು ಬಯಸುವುದಿಲ್ಲ.
We never wanted Indians to be part of our army – Roman Babushkin, Russia’s Charge d’affaire
PM Modi had raised the issue of Indians in #RussianArmy during his meeting with President Vladimir Putinpic.twitter.com/IR41Yr8I59
— Sanatan Prabhat (@SanatanPrabhat) July 12, 2024
ಉಕ್ರೇನ್ ಯುದ್ಧದಲ್ಲಿ ಕೊಲ್ಲಲ್ಪಟ್ಟ ಭಾರತೀಯರನ್ನು ರಷ್ಯಾದ ನಾಗರಿಕರೆಂದು ಅಧಿಕೃತವಾಗಿ ಗುರುತಿಸಲಾಗುತ್ತದೆಯೇ ಎಂದು ರಾಯಭಾರಿಯನ್ನು ಕೇಳಿದಾಗ, ಅದು ಸಂಭವಿಸಬಹುದು; ಏಕೆಂದರೆ ಕೆಲವೊಮ್ಮೆ ಒಪ್ಪಂದಗಳು ಅಂತಹ ನಿಯಮಗಳನ್ನು ಒಳಗೊಂಡಿರುತ್ತವೆ, ಎಂದು ಅವರು ಹೇಳಿದರು.