ಇಸ್ಲಾಂ ಸ್ವೀಕರಿಸಲು ನಿರಾಕರಿಸಿದ್ದರಿಂದ ಪತ್ನಿಯ ಹತ್ಯೆ
ಪ್ರಯಾಗರಾಜ – ವಿವಾಹದ ಬಳಿಕ ಮುಸ್ಲಿಂ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಹಿಂದೂ ಪತ್ನಿಯನ್ನು ಹತ್ಯೆ ಮಾಡಿರುವ ಪ್ರಕರಣದ ಆರೋಪಿ ಶೋಯೆಬ ಅಖ್ತರನ ಜಾಮೀನು ಅರ್ಜಿಯನ್ನು ಉಚ್ಚ ನ್ಯಾಯಾಲಯವು ಎರಡನೇ ಬಾರಿ ತಿರಸ್ಕರಿಸಿದೆ. ಆರೋಪಿ ಶೋಯೆಬ ಅಖ್ತರನ ಮೊದಲ ಜಾಮೀನು ಅರ್ಜಿಯನ್ನು ಉಚ್ಚ ನ್ಯಾಯಾಲಯವು ಈ ವರ್ಷ ಜನವರಿಯಲ್ಲಿ ತಿರಸ್ಕರಿಸಿತ್ತು. ಅವನ ಮೇಲೆ ಪತ್ನಿ ಪ್ರಿಯಾಳನ್ನು ಹತ್ಯೆ ಮಾಡಿರುವ ಆರೋಪವಿದೆ; ಅವಳು ಪತಿ ಶೋಯೆಬ ಅಖ್ತರ ಮತ್ತು ಅವನ ಸ್ನೇಹಿತ ಏಜಾಜ ಅಹ್ಮದ ಒತ್ತಡ ಹೇರಿದರೂ ಇಸ್ಲಾಂ ಸ್ವೀಕರಿಸಲು ನಿರಾಕರಿಸಿದ್ದಳು.
ಈ ಪ್ರಕರಣದಲ್ಲಿ ಸಿಂದುರಿಯಾ ಗ್ರಾಮದ ಪೊಲೀಸರಿಗೆ ಸಪ್ಟೆಂಬರ 21, 2020ರಂದು ಕಾಲುವೆಯಲ್ಲಿ ಒಂದು ಶಿರಚ್ಛೇದವಾಗಿದ್ದ ಶವ ಬಿದ್ದಿರುವ ಮಾಹಿತಿ ಸಿಕ್ಕಿತು. ತದನಂತರ ಆ ಮೃತದೇಹ ಪ್ರಿಯಾ ಹೆಸರಿನ ಮಹಿಳೆಯದ್ದಾಗಿದೆಯೆಂದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ತನಿಖೆಯ ಬಳಿಕ ಶೋಯೆಬ ಹತ್ಯೆ ಮಾಡಿರುವುದು ಬಹಿರಂಗಗೊಂಡಿತ್ತು. ಪ್ರಿಯಾಳ ಮೃತದೇಹವನ್ನು 2 ತುಂಡುಗಳನ್ನಾಗಿ ಮಾಡಿ ಕಾಲುವೆಯಲ್ಲಿ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಶೋಯೆಬ ಅಖ್ತರ ಮತ್ತು ಅವನ ಸ್ನೇಹಿತ ಏಜಾಜ ಇವರನ್ನು ಬಂಧಿಸಿದ್ದರು. ಏಜಾಜನಿಗೆ ಜಾಮೀನು ಸಿಕ್ಕಿರುವ ಆಧಾರದಲ್ಲಿ ಶೋಯೆಬ ಕೂಡ ನ್ಯಾಯಾಲಯದಲ್ಲಿ ಜಾಮೀನು ಕೋರಿದ್ದನು.
ಸಂಪಾದಕೀಯ ನಿಲುವುಮುಸಲ್ಮಾನ ಯುವಕ ಮೊದಲು ಕಟ್ಟರವಾದಿ ಮುಸಲ್ಮಾನನಾಗಿರುತ್ತಾನೆ. ಬಳಿಕ ಪತಿ, ಪ್ರಿಯಕರ ಅಥವಾ ಸ್ನೇಹಿತನಾಗಿರುತ್ತಾನೆ. ಅವನ ನಕಲಿ ಮಾತುಗಳಿಗೆ ಮರುಳಾಗಿ ಅವನ ಪ್ರೀತಿಯ ಬಲೆಯಲ್ಲಿ ಸಿಲುಕುವ ಹಿಂದೂ ಹುಡುಗಿಯರ ಗಮನಕ್ಕೆ ಇದು ಯಾವಾಗ ಬರುವುದು ? |