ಸುಳ್ಯದಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ !
ಸುಳ್ಯ – ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ತೊಂದರೆ ಕೊಡುತ್ತಿದ್ದ ವ್ಯಕ್ತಿಯನ್ನು ಹೊರ ಹಾಕಲು ಬಂದಿದ್ದ ಪೊಲೀಸರೇ ಪಾನಮತ್ತ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕುಡುಕನೊಬ್ಬನು ಜನರಿಗೆ ತೊಂದರೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಸಹಾಯವಾಣಿ ಸಂಖ್ಯೆ 112 ಅನ್ನು ಸಂಪರ್ಕಿಸಿ ದೂರು ನೀಡಿದ್ದರು. ಈ ವೇಳೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್‌ಸ್ಟೆಬಲ್ ಹೊಯ್ಸಳ ವಾಹನದೊಂದಿಗೆ ಅಲ್ಲಿಗೆ ಬಂದಿದ್ದರು. ಆದರೆ ಕುಡುಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಇಬ್ಬರು ಪೊಲೀಸರು ಪಾನಮತ್ತರಾಗಿರುವುದು ಸ್ಥಳೀಯರಿಗೆ ಗಮನಕ್ಕೆ ಬಂದಿದೆ. ಹಾಗಾಗಿ ಜನರು ‘ಕಾರು ಓಡಿಸಬೇಡಿ, ಕಾರನ್ನು ಅಲ್ಲೇ ಬಿಟ್ಟು ಹೋಗುವಂತೆ’ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಪೊಲೀಸರು, ‘ನಾವು ಸುಳ್ಯ ಠಾಣೆಗೆ ಸೇರಿದ್ದು, ಪ್ರತಿದಿನ ಮದ್ಯ ಸೇವಿಸುತ್ತೇವೆ; ಆದರೆ ಈಗ ನಾವು ಮದ್ಯ ಸೇವಿಸಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. (ಇತರ ಸಮಯದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕಡಿವಾಣ ಹಾಕುವ ಪೊಲೀಸರು ಮತ್ತು ತಾವೇ ವಾಹನ ಚಲಾಯಿಸುತ್ತಾರೆ ಮತ್ತು ಸುಳ್ಳು ಹೇಳುತ್ತಾರೆ ! – ಸಂಪಾದಕರು)